ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಇ೪ ಕರ್ನಾಟಕದ ಕಲಾವಿದರು ಸ್ವಾಮಿ ಸಂಕೋಚಪಡುವುದಿಲ್ಲ ಅರಿಯಾಕುಡಿ, ದ್ವಾರಂ, ರನ್ನಗುಡಿ, ಪಾಲಘಾಟ್ ನುಣಿ ಇವರ ಮೆಚ್ಚಿನ ವಿದ್ವಾಂಸರು. ಮುಂದೆ ರಾಗ, ತಾಳವನ್ನು ಬೆಳಸಿಕೊಂಡು, ಅವುಗಳ ಸುಷ್ಯ ಸೌಂದರ್ಯವನ್ನು ಕಂಡುಕೊಳ್ಳಬೇಕೆಂಬುದು ದೊರೆಸ್ವಾಮಿ ಅವರ ಸರನಾ ಕಾಂಕ್ಷ, ತಾಯಿ ಶಾರದೆ ಅವರ ಮೇಲೆ ತನ್ನ ಪೂರ್ಣ ಕಟಾಕ್ಷವನ್ನ ಸುಗ್ರಹಿಸಿ ಕನ್ನಡ ಕಲೆಗಳ ಅಸ್ತಿತ್ವವನ್ನುಳಿಸಲೆಂದು ನನ್ನ ಹಾರೈಕೆ. ಕನ್ನಡ ಕಲಾವಿದರು ತಾವು ಸಂಸ್ಕೃತಿಯ ರಾಯಭಾರಿಗಳೆಂದು ಭಾವಿಸಿಕೊಳ್ಳಬೇಕು. ತಮ್ಮ ವಿದ್ವತ್ತನ್ನು ತಮಗಾಗಿ ಕನ್ನಡನಾಡಿಗಾಗಿ ಹೆಚ್ಚಿಸಿಕೊಂಡು ದೇಶವಿದೇಶಗಳಿಗೆ ಹೋಗಿ ಹರಡಿ ಹಂಚಿ ಬರಬೇಕು. ಇಂಥ ಪವಿತ್ರ ನಾಡ ಕೆಲಸ ದೊರೆಸ್ವಾಮಿ ಇವರಿಂದಾಗುತ್ತದೆಯೆಂದು ನನ್ನ ನಿರೀಕ್ಷೆ.