ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩೮ ಕರ್ನಾಟಕದ ಕಲಾವಿದರು ಅಂಥ ಸಂಸ್ಥೆಯಾಗಬೇಕು. ನಾಟಕ ಕಲಾ ಪುನರೋದಯಕ್ಕೆ ಬೆಂಗ: ಳೂರು ಕೇಂದ್ರವಾಗಬೇಕೆಂಬುದು ಅಳತೇಕರರ ಪರಮಾಶಯ. ಮೊದಲು ರಾಷ್ಟ್ರೀಯ ರಂಗಭೂಮಿಯ ಆದರ್ಶವನ್ನು ಅರ್ಥಮಾಡಿ ಕೊಂಡು, ಅದರ ತಾಂತ್ರಿಕ ವ್ಯಾಖ್ಯಾನವನ್ನು ಸಶಾಸ್ತ್ರೀಯವಾಗಿ ಅರಿತ ಒಂದು ತಂಡ ಸಿದ್ಧವಾಗಬೇಕು. ಬೆಂಗಳೂರಿನಲ್ಲಿ ಅಂಥ ತಂಡವನ್ನು ಸಿದ್ದ ಗೊಳಿಸುವ ಕೇಂದ್ರ ಸಂಸ್ಥೆ ನಿರ್ಮಾಣವಾದರೆ, ಶಿಕ್ಷಿತರಾದ ಕಲಾವಿದರು, ಊರು ಊರುಗಳಿಗೆ ಹಳ್ಳಿ ಹಳ್ಳಿಗಳಿಗೆ ಹೋಗಿ ಅಲ್ಲಿ ಜನತೆಯ ರ೦ಗ ಭೂಮಿಯನ್ನು ಸ್ಥಾಪಿಸಬಹುದು. ಜನತೆಗೆ ಮೊದಲು ಮಾರ್ಗನಿರ್ದೆಶನ ವಾದರೆ ಮುಂದೆ ಅವರೇ ತಮ್ಮ ಸಂಸ್ಥೆಯನ್ನು ಯೋಗ್ಯ ರೀತಿಯಲ್ಲಿ ನಡೆ. ಸಲು ಸಮರ್ಥರಾಗುತ್ತಾರೆ. ಅಳತೇಕರರ ಉದ್ದೇಶ ಪವಿತ್ರವಾದುದು. ರಾಷ್ಟ್ರದ ಪ್ರಗತಿಯಲ್ಲಿ ಆಸಕ್ತರಾದೆಲ್ಲರೂ ಅವರ ಪ್ರಯತ್ನಕ್ಕೆ ನೆರವು ನೀಡಬೇಕು. ನಮ್ಮ ನಗರ ಸಭೆಗಳು ಜನತಾ ರಂಗಭೂಮಿಯ ಸ್ಥಾಪನೆಗೆ ಮನಸ್ಸು ಕೊಡಬೇಕು. ಭಾರತವನ್ನು ಕವಿದಿರುವ ಅಪಾರ ಅಂಧಕಾರವನ್ನು ಹೋಗಲಾಡಿ ಸಲು ಜನತಾ ರಂಗಭೂಮಿ ದಿವ್ಯಾಯುಧ. ಇಂಥ ಆಯುಧವನ್ನು ಸಾರ್ವ ಜನಿಕರು, ಸಂಸ್ಥೆಗಳು, ನಗರ ಸಭೆಗಳು, ಸರ್ಕಾರ ಉಪಯೋಗಿಸಿಕೊಳ್ಳಿ ಬೇಕು. ಅಳತೇಕರರ ಅಪಾರ ಅನುಭವ, ಕಲಾವಿದಗ ತೆಗಳ ಪೂರ್ಣ ಪ್ರಯೋಜನವನ್ನು ಬೆಂಗಳೂರಿನ ಸುಸಂಸ್ಕೃತರು ಪಡೆಯಲೆಂದು ನನ್ನ ಹಾರೈಕೆ.