ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕರ್ನಾಟಕದ ಕಲಾವಿದರು ನೀಡುತ್ತಿದ್ದಾನೆ. ಭಕ್ತಿಯ ಭಾವದಲ್ಲಿ ಕುಳಿತ ಶಿವನ ನಿಲುನೋಟದಲ್ಲಿ (Tableaux) ನೃತ್ಯ ಆರಂಭವಾಗುತ್ತದೆ. ಚೆಂಬೊನ್ನ ವಿಲಾಸದಲ್ಲಿ ಅಸ್ತಮಿಸುತ್ತಿರುವ ಸೂರ್ಯ-ಅವನ ವೈಭವವನ್ನರಿತು ಮಣಿಯುತ್ತಿರುವ ವನು ಋಷಿರಾಜನಾದ ಪರಮೇಶ್ವರ, ರಾಮಗೋಪಾಲರು ನೃತ್ಯದ ಕಲಾಬಂಧನವನ್ನು ಹರಿದೊಗೆದು ಪವಿತ್ರ ರಸಭಾವಗಳ ಪಾಲ್ಗಡಲನ್ನು ಈ ನೃತ್ಯದಲ್ಲಿ ಉಕ್ಕಿಸುತ್ತಾರೆ. ರಾಮಗೋಪಾಲರು ಅಮೇರಿಕೆಗೆ ಹೋಗುವ ಮುನ್ನ ' ನನ್ನ ನಾಡಿನ ದೇವ ದೇವತೆಯರ ಪರಿಚಯ ಅವರಿಗೆ ಮಾಡಿಕೊಟ್ಟು, ಹಿಂದೂಸ್ಥಾನದ ಆಧ್ಯಾತ್ಮಿತ ಪ್ರಶ್ನೆಗೆ ಅವರು ಶರಣು ಹೋಗುವಂತೆ ಮಾಡುತ್ತೇನೆ' ಎಂದು ಹೇಳಿದ್ದರು. ಈ ನೃತ್ಯ ಅವರ ಆಸೆಯನ್ನು ಸಾಧಿಸಿರಬೇಕು. ಒಮ್ಮೆ ಹಿಮಾಲಯಕ್ಕೆ ಹೋಗಿದ್ದಾಗ ರಾಮಗೋಪಾಲರಿಗೆ ಈ ನೃತ್ಯ ಭಾಸವಾಯಿತಂತೆ. ನೃತ್ಯ ಕಲೆಯನ್ನು ಅಧ್ಯಾತ್ಮ ಸಾಧನೆಯ ವಾಹಕವನ್ನಾಗಿ ಹೇಗೆ ಮಾಡಿಕೊಳ್ಳ `ಬೇಕೆನ್ನುವುದಕ್ಕೆ ಸಂಧ್ಯಾ ನೃತ್ಯ ಉತ್ತಮ ದೃಷ್ಟಾಂತ. ಸಂಪ್ರದಾಯಬದ್ದವಾದ - ಸಂಧ್ಯಾ ನೃತ್ಯ' ದಲ್ಲಿ ಶಿವ ತನ್ನ ಅರ್ಧಾಂಗಿ ಯ ಆನಂದಕ್ಕೆ ನರ್ತಿಸುತ್ತಾನೆ. ದೇವಾದಿ ದೇವತೆಗಳು ಅವನ ವಾದ್ಯ ಗಾರರಾಗಿ ನಿಲ್ಲುತ್ತಾರೆ. ರಾಮಗೋಪಾಲರ ವಸ್ತು ಬೇರೆ ವಿಧವಾಗಿದೆ. ಆದರೆ ಹೆಸರು ಆದೇ. ಅನವಶ್ಯಕ ಟೀಕೆಗಳಿಗೆಡೆಕೊಡದಂತೆ ರಾಮಗೋಪಾ 'ಲರು ನೃತ್ಯದ ಹೆಸರನ್ನು ' ಶಿವ-ಸಂಧ್ಯಾ ” ಎಂದು ಬದಲಾಯಿಸಿದ್ದಾರೆ. ರಾಮಗೋಪಾಲರು ಹೇಗೆ ಉತ್ತಮ ನೃತ್ಯಕಾರರೋ ಹಾಗೆ ಉತ್ತಮ ಶಿಕ್ಷಕರೂ ಆಗಿದ್ದಾರೆ. ರಾಮಗೋಪಾಲರ ಶಿಷ್ಯವರ್ಗಕ್ಕೆ ಸೇರಿದ ಮೃಣಾ ಲಿನಿ ಸಾರಾಭಾಯ, ಶಾಂತಾರಾವ್, ಕೃಷ್ಣರಾವ್ ಉಭಯಕರ್, ಲಾಮೇರಿ, `ಜಾನಕಿ, ಜೆರ್ ಜಸ್ಸಾವಾಲಾ, ಷಿರೀನ್ವಾಜಿಫ್ ದಾರ್, ನೀನಾ ತಿಮ್ಮಯ್ಯ ( ಬ್ರಿಗೇಡಿಯರ್ ತಿಮ್ಮಯ್ಯನವರ ಪತ್ನಿ) ಸೇವಂತಿ, ಲೀಲಾ ಭಾಸ್ಕರಯ್ಯ ನುರಿತ ನರ್ತಕ ನರ್ತಕಿಯರು, ಸೋಹನಲಾಲರನ್ನು ಜತೆಯಲ್ಲಿ ಕರೆದು ಕೊಂಡು ಅವರನ್ನು ಯೂರೋಪ್, ಅಮೇರಿಕಾ ದೇಶಗಳಿಗೊಯ್ದು ಅವರೆಲ್ಲರ ಖ್ಯಾತಿಗೂ ರಾಮಗೋಪಾಲರೇ ಕಾರಣರಾಗಿದ್ದಾರೆ. ಪರರನ್ನು ಕಂಡು ಕರುಬದ ಮನೋಭಾವ, ಉತ್ತಮ ಕಲಾ ಪಕ್ಷಪಾತ, ತಮ್ಮ ಕಲೆ