ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೫೩ ದ್ವಾರಂ ವೆಂಕಟಸ್ವಾಮಿ ನಾಯಿಡು ತದೆ. ತ್ರಿಕಾಲ ಸಾಧನೆಯಲ್ಲಿಯೂ ಸಮಾನ ಸಾಮರ್ಥ್ಯವನ್ನು ಇವರು ವ್ಯಕ್ತಪಡಿಸಿದರ ೧, ಮಧ್ಯಮ ಕಾಲ ಸ್ವಲ್ಪ ತಲೆಯೆತ್ತಿ ನಿಲ್ಲುತ್ತದೆ. ಸಾಮಾನ್ಯವಾಗಿ ತನಿನುಡಿಸುವ ವಾದ್ಯಗಾರರು ಪಕ್ಕವಾದ್ಯ ನುಡಿಸು ವುದರಲ್ಲಿ ಸಾಕಷ್ಟು ಆಸಕ್ತಿ ವಹಿಸುವುದಿಲ್ಲ. ಅಂತಹವರ ವಾದ್ಯ ವಾದನ ಹಾಡುವವನ ಜತೆ ಕುಸ್ತಿ ಹಿಡಿದಂತಿರುತ್ತದೆ ದ್ವಾರಂ ಈ ಅಪವಾದದಿಂ ದಲೂ ದೂರ. ತನಿಯಲ್ಲಿ ಯಾವ ಆಸಕ್ತಿಯೋ ಪಕ್ಕ ವಾದ್ಯ ನುಡಿಸುವು ದರಲ್ಲಿಯೂ ಅದೇ ಆಸಕ್ತಿ. ಹಾಡುವವರಿಗೆ ದ್ವಾರಂ ಜತೆಯಲ್ಲಿದ್ದರೆಂದರೆ ಹಬ್ಬದೂಟವಿದ್ದಂತೆ. ಸಂಗೀತಕ್ಕೆ ಒಂದು ಹಿರಿಯ ಸ್ಥಾನವನ್ನು ಕಲ್ಪಿಸಿಕೊಟ್ಟು ದ್ವಾರಂ ತಮ್ಮ ಪಾಂಡಿತ್ಯ, ಕಲಾಭಿಜ್ಞತೆ, ಶೀಲಗಳಿಂದ ಭಾರತೀಯ ಕಲಾವಿದರಲ್ಲಿ ಗಣ್ಯರಾಗಿದ್ದಾರೆ. ಇಂದು ನಾವು ಬಿಡಾರಂ ಕೃಷ್ಣಪ್ಪ, ವೀಣೆ ಶೇಷಣ್ಣ, ಗೋವಿಂದಸ್ವಾಮಿ ಸಿಳ್ಳೆ, ಅಲಗನಂಬಿ ಪಿಳ್ಳೆ ಮೊದಲಾದ ದಿವ್ಯ ಕಲಾವಿದ ರನ್ನು ಸ್ಮರಿಸಿಕೊಳ್ಳುವಂತೆ ನಾಳಿನ ಜನಾಂಗ ದ್ವಾರಂ ಅವರನ್ನು ಭಕ್ತಿ ಯಿಂದ, ಪ್ರೀತಿಯಿಂದ ಜ್ಞಾಪಿಸಿಕೊಳ್ಳುತ್ತದೆ. ಅವರ ಸಮಕಾಲೀನರಾಗಿ ಅವರ ದಿವ್ಯ ಸಂಗೀತವನ್ನು ಕೇಳುವ ನಾವು ಭಾಗ್ಯಶಾಲಿಗಳೆಂದರೆ ಅತಿ ಶಯೋಕ್ತಿಯಲ್ಲ.