ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಶಿವರುದ್ರಪ್ಪನವರು ಸರನ್ನು ಆಶ್ರಯಿಸಿ ಹುಡುಗನಿಗೆ ಸಂಗೀತಪಾಠ ಹೇಳಿಸತೊಡಗಿದರು. ನಾಲ್ಕು ವರ್ಷಕಾಲ ಗೀತೆಗಳು, ವರ್ಣಗಳು, ಕೀರ್ತನೆಗಳ ಪಾಠವಾಯಿತು. ಶಿವರುದ್ರಪ್ಪನವರು ೧೬ನೆಯ ವಯಸ್ಸಿನಲ್ಲಿ ಮೈಸೂರಿಗೆ ಬಂದು ಕಿವುಡ, ಮೂಕರ ಶಾಲೆ' ಯನ್ನು ಸೇರಿದರು. ಮೈಸೂರು ಸೇರಿದರೂ ಅವರ ಕಷ್ಟ ತೀರಲಿಲ್ಲ. ಶಾಲೆಯಲ್ಲಿ ಕಾಲಕ್ಷೇಪ ದೊರೆಯಲಿಲ್ಲ. ಭಿಕ್ಷಾವೃತ್ತಿಯಲ್ಲಿ ಜೀವನ ಸಾಗಿಸುವುದು, ಶಾಲೆಗೆ ಹೋಗಿ ಅಭ್ಯಾಸ ನಡೆಸುವುದು-ಹೀಗೆ, ಸಾಗಿತು ಒಂದು ವರ್ಷ ಬಾಳುವೆ. ಆದರೆ ಶಾಲೆಯಲ್ಲಿ ಸಂಗೀತಾಭ್ಯಾಸಕ್ಕೆ ಅವಕಾಶವಿರಲಿಲ್ಲ. ಯಾರೋ ಹಿತವರ ಸಲಹೆಯಂತೆ ಶಿವರುದ್ರಪ್ಪನವರು. ಚಾಮುಂಡಿ ಬೆಟ್ಟಕ್ಕೆ ಹೋಗಿ ಮಹಾಸ್ವಾಮಿಯವರಲ್ಲಿ ಮೊರೆಯಿಟ್ಟರು. ಬಾಲಕನ ವಿದ್ಯಾಶಕ್ತಿಯನ್ನು ಕಂಡು, ಅವನ ಕರುಣಾಜನಕ ಕಥೆಯನ್ನು, ಕೇಳಿ ಕಣ್ಣೀರಿಟ್ಟು ಮಹಾಸ್ವಾಮಿಯವರು ಬಿಡದಿಯಲ್ಲಿರುವಂತೆ ಅನುಕೂಲ ಕಲ್ಪಿಸಿಕೊಟ್ಟರು. ಊಟ-ಉಪಚಾರಗಳಿಗಿದ್ದ ತೊಂದರೆ ತಪ್ಪಿತು. ಆದರೆ ವಿದ್ಯೆಯ. ಗತಿ ? ಮಹಾಸ್ವಾಮಿಯವರು ಆಗಾಗ್ಗೆ ಕರಿಕಲ್ಲು ತೊಟ್ಟಿಗೆ ಶಿವರುದ್ರಪ್ಪ, ನವರನ್ನು ಕರೆಸಿಕೊಂಡು ಅವರ ಯೋಗಕ್ಷೇಮ ವಿಚಾರಿಸುತ್ತಿದ್ದರು.

  • ಎಲ್ಲಾ ಅನುಕೂಲವಾಗಿದೆಯೇ ಶಿವರುದ್ರೂ ?” “ ಇದೆ ಮಹಾಸ್ವಾಮಿ, ತಮ್ಮ ಆಶೀರ್ವಾದದಿಂದ.” * ಸರಿಯಾಗಿ ಬಡಿಸುತ್ತಾರೋ ?” * ಬಡಿಸುತ್ತಾರೆ ನನ್ನೊಡೆಯಾ.” * ತುಪ್ಪ ತುಂಬ ಹಾಕುತ್ತಾರೇನಯ್ಯಾ ?” ಹಾಕುತ್ತಾರೆ.” ಹಾಕುತ್ತಾರೆ ಇಲ್ಲವೆನ್ನುವುದು ನಿನಗೆ ಹೇಗೆ ಗೊತ್ತಾಗುತ್ತದೆ ?” ವಾಸನೆ, ರುಚಿಯಿಂದ ಮಹಾಸ್ವಾಮಿ.” * ಇನ್ನು ಮೇಲೆ ಕೈಗೆ ಹಾಕಿಸಿಕೊಂಡು, ನೋಡಿ ಊಟಮಾಡು.”

“ ಅಪ್ಪಣೆ.....ಒಂದು ಪ್ರಾರ್ಥನೆಯಿದೆ. ಮಹಾಸ್ವಾಮಿಯವರು ಅಪ್ಪಣೆ ಕೊಟ್ಟರೆ ಅರಿಕೆ ಮಾಡಿಕೊಳ್ಳುತ್ತೇನೆ.” “ ಹೇಳು.”