ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೩೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

250 ಕರ್ಣಾಟಕ ಕವಿಚರಿತೆ. [16 ನೆಯ

ಪೋಷಕನ ವಿಷಯವೂ ಸ್ಪಷ್ವವಾಗುತಿದ್ದುವು. ಹಿಂದಣ ಗ್ರಂಥಗಳಲ್ಲಿ 
ಕಾವ್ಯಪ್ರಕಾಶಿಕೆ, ಸಾಹಿತ್ಯಸುಧಾರ್ಣವ ಇವುಗಳ ಹೆಸರನ್ನು ಕವಿ ಹೇಳಿ 

ದ್ದಾನೆ. ಈ ಗ್ರಂಥದಿಂದ ಕೆಲವು ಭಾಗವನ್ನು ಉದ್ಧರಿಸಿ ಬರೆಯುತ್ತೇವೆ-----

           ವಾಚಕ ಲಕ್ಷಕ ವ್ಯಂಜಕಮೆಂದು ಶಬ್ದಂ ಮದೆಳಿಂ. ಅವರ್ಕೆ ವಿಷಯಮಾ 

ದರ್ಥಂ ವಾಚ್ಯ ಲಕ್ಷ್ಯ ವ್ಯಂಗ್ಯ ಮೆಂದು ತ್ರಿವಿಧಂ, ಮಳೆಯಿಲ್ಲದೆ ಸಂಕೇತದಿಂದರ್ಥ ವನಯುವುದು ವಾಚಕಂ. ಮುಖ್ಯಾರ್ಥಬಾಧೆಯಾಗೆ ತದ್ಯೋಗಮುಂಟಾಗೆ ರೂಢಿ. ಪ್ರಯೋಜನದತ್ತಣಿಂದರ್ಥಾಂತರಮಂ ತೋರ್ಪುದು ಲಕ್ಷಣಮೆನಿಕ್ಕುಂ; ವ್ಯಂಗ್ಯ ಸಹಿತಮಾದುದು ಪ್ರಯೋಜನಮೆನಿಕ್ಕುಂ‌. ರೂಢಗುದಾಹರಣೆ-ಪ್ರವೀಣನೆಂದು ಒಳ್ಳೆಯ ವೀಣೆಯುಳ್ಳವನ ಪೆಸರ್; ಅದಂ ಬಾಧಿಸಿ ಒಳ್ಳೆಯ ಪ್ರೌಢಂಗೆ ನಾಮ ವಾದುದು!

   ಉಪಾದಾನಲಕ್ಷಣೆ: - ತನ್ನ ಪ್ರಸಿದ್ದ ನಿಮಿತ್ತಂ ತನ್ನು ಪಾದಾನದತ್ತಣಿಂ ಪರಾ 

ಕ್ಷೇಪಮಂ ಮಾಳ್ಪುದು ಉಪಾದಾನಲಕ್ಷಣೆಯೆನಿಕ್ಕುಂ, ಅದೆಂತೆಂದೊಡೆ------ಲಕ್ಷಸ ಬಳಂ ಬಂದುದೆಂಬಲ್ಲಿ ಅಚೇತನಮಪ್ಪ ಸಒಳಂಗಳ್ಗೆ ಗಮನವಿಲ್ಲಾಗಿ ಮುಖ್ಯಾರ್ಧ ಬಾಧೆಯಾಗೆ ಸಬಳಮಂ ಪಿಡಿದ ವೀರಭಟರ ಬಂದರೆಂಬುದರ್ಧ೦. ವ್ಯಂಜಕಮೆಂತೆಂ ದೊಡೆ------ಅನೇಕಾರ್ಥಮನುಳ್ಳ ಶಬ್ದಕ್ಕೆ ಸಂಯೋಗಾದಿಕಂಗಳಿಂದೇಕಾರ್ಥದೊಳ್ ನಿಯಮಮುಂಟಾಗೆ ಅರ್ಥಾಂತರಮಂ ತೋರ್ಪುದು ಶಬ್ದಮೂಲವ್ಯಂಜಕವೆನಿಕುಂ. ಶಂಖಚಕ್ರಾಂಕಿತಹರಿಬಂದನೆಂಬಲ್ಲಿ ಹರಿಶಬ್ದಕೆ ಸಿಂಹಾದ್ರನೇಕಾರ್ಥಂಗಳುಂಟಾ ದೊಡಂ ಶಂಖಚಕ್ರಶಬ್ದಸಂಯೋಗದಿಂ ಕೃಷ್ಣ ನೆಂಬರ್ಥ ಮಾದುದು.

  ಸುತಶೋಕವಹ್ನಿದಗ್ದೋ| ನ್ನತಕಾಯಂ ಬಾಹ್ಯಕುಂಡಸಂಸ್ಥಿತಶಿಖೆ ತಾ |                  
ನತಿಶೈತ್ಯವೆಂದು ನಿಲ್ಲದೆ |ದ್ರುತಗತಿಯಿನಗಾಧಮಪ್ಪ ನದಿಯೊಳ್ ಬಳ್ದಂ||   
      ಇಲ್ಲಿ ವಸಿಷ್ಠಂ ಪುತ್ರಶೋಕದಿಂ ಬೆಂದು ಅಗ್ನಿಯಂ ಪೊಕ್ಕೊಡೆ ಬೇಯನೆಂಬ 

ವಾಕ್ಯಾರ್ಥರೂಪವಪ್ಪ ವಸ್ತುಸ್ವಭಾವಮಂ ಶೋಕಂ ಬಾಹ್ಯಾಗ್ನಿ ಯಿಂದಧಿಕಮೆಂದೌ ವ್ಯತಿರೇಕಾಲಂಕಾರಮಂ ಧ್ವನಿಸಿತ್ತು.

      4 .                                               ವೈದ್ಯಸಾಂಗತ್ಯ.                                      

ಈ ಗ್ರಂಥದೊಳಗೆ ಅಲ್ಲಲ್ಲಿ ಪದ್ಯಗಳು ವರಕವಿಸಾಳ್ವನ ಮತದಿ' | ಎಂದು ಮುಗಿಯುತ್ತವೆ. ಇದರಿಂದ ಕೆಲವು ಪದ್ಯಗಳನ್ನು ತೆಗೆದು ಬರೆ ಯುತ್ತೇವೆ-----