ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

2

೨೯೭ ರಲ್ಲಿ ಸತ್ತಂತೆ ತಿಳಿಯುತ್ತದೆ. ಭದ್ರಬಾಹುವೂ ಚಂದ್ರಗುಪ್ತನೂ ಶ್ರವಣಬೆಳುಗೊಳದಲ್ಲಿ ಇದ್ದರು ಎಂಬುದಕ್ಕೆ ಕೆಲವು ಆಧಾರಗಳು ದೊರೆ ಯುತ್ತವೆ. ಶ್ರವಣಬೆಳುಗೊಳದ ಚಿಕ್ಕಬೆಟ್ಟದ ಮೇಲೆ ಚಂದ್ರಗುಪ್ತ ಬಸ್ತಿಎಂಬ ಜಿನಾಲಯವೂ, ಭದ್ರಬಾಹುಗವಿ ಎಂಬ ಗುಹೆಯೂ ಈಗಲೂ ಇವೆ. ಸುಮಾರು ೭ ನಯ ಶತಮಾನದಲ್ಲಿ ಬರೆದ ಶ್ರವಣ ಬೆಳುಗೊಳದ ೧೭ ನೆಯ ಶಾಸನದಲ್ಲಿ “ ಭದ್ರಬಾಹುಸಚಂದ್ರಗುಪ್ತ ಮುನೀಂದ್ರಯುಗ್ಮದಿನೊಪ್ಪೆ” ಎಂದೂ, ಸುಮಾರು ೯ ನೆಯ ಶತಮಾ ನದಲ್ಲಿ ಹುಟ್ಟಿದ ಶ್ರೀರಂಗಪಟ್ಟಣದ ೧೪೭, ೧೮ ನೆಯ ಶಾಸನಗಳಲ್ಲಿ "ಭದ್ರಬಾಹುಚಂದ್ರಗುಪ್ತಮುನಿವತಿಚರಣಮುದ್ರಾಂಕಿತ ಜಗಲ್ಲಲಾ ಮಾಯಿತ ಶ್ರೀಕಟ್ಟಿಪ್ಪುತೀರ್ಥನನಾಧ ಬೆಳ್ಗೊಳ" ಎಂದೂ ಶ್ರವಣ ಬೆಳುಗೊಳದ ವಿಷಯವಾಗಿ ಹೇಳಿದೆ. ೯೩೧ರಲ್ಲಿ ಹರಿಷೇಣನಿಂದ ರಚಿತ ವಾದ ಕಥಾಕೋಶದಲ್ಲಿಯೂ, ಇತರ ಗ್ರಂಥಗಳಲ್ಲಿಯೂ ಈ ವಿಷಯವು ಉಕ್ತವಾಗಿದೆ. ಮೆ||ವಿನೆಂಟ‌‍ ಸಿತ ಬರೆದಿರುವ ಹಿಂದೂದೇಶದ ಪುರಾ ತನ ಚರಿತ್ರೆಯಲ್ಲಿ ಚಂದ್ರಗುಪ್ತನು ರಾಜ್ಯವನ್ನು ಬಿಟ್ಟು ಜೈನಸನ್ಯಾಸಿ ಯಾಗಿ ಶ್ರವಣಬೆಳುಗೊಳಕ್ಕೆ ಬಂದನೆಂದು ಹೇಳುವ ಕಥೆ ನಿಜವಾಗಿರ ಬಹುದು, ಎಂದು ಹೇಳಿದೆ |

   ಚಂದ್ರಗುಪ್ತನ ಮಮ್ಮಗನಾದ ಅಶೋಕನ ಶಾಸನಗಳು ಮೈಸೂ

ರುಸಂಸ್ಥಾನದ ಮೊಳಕಾಲಮುರು ತಾಲ್ಲೂಕಿಗೆ ಸೇರಿದ ಸಿದ್ದಾಪುರದ ಒಳಿ ಇರುವ ಬ್ರಹ್ಮಗಿರಿಯು ಅಕ್ಷರಬಂಡೆಯ ಮೇಲೆಯೂ, ಅದೇ ಗ್ರಾಮಕ್ಕೆ ಸಮೀಪದಲ್ಲಿರುವ ಎಮ್ಮೆತಮ್ಮನ ಗುಂಡು ಎಂಬ ಗುಡ್ಡದ ಲ್ಲಿಯೂ,ಅದೇಗ್ರಾಮಕ್ಕೆ ಸುಮಾರು ೪ ಮೈಲಿ ದೂರದಲ್ಲಿರುವ ಜಟಂಗ ರಾಮೇಶ್ವರ ಬೆಟ್ಟದಲ್ಲಿಯೂ ಇವೆ. ಈ ಬೆಟ್ಟದಲ್ಲಿ ಇರುವ ೯೬೨ರಲ್ಲಿ ಬರೆದ ಒಂದು ಶಾಸನದಿಂದ ಜಟಂಗರಾಮೇಶ್ಯರ ದೇವಸ್ಥಾನವು ಪೂರ್ವ ದಲ್ಲಿ ಇಟ್ಟಿಗೆಯಿಂದ ಕಟ್ಟಲ್ಪಟ್ಟಿದ್ದು ಆವರ್ಷದಲ್ಲಿ ಶಿಲೆಯಿಂದ ನಿರ್ಮಿತ ವಾಯಿತೆಂದೂ, ಆಸ್ಥಳದಲ್ಲಿಯೇ ರಾವಣನು ಜಟಾಯುವನ್ನು ಕೊಂದು ದೆಂದೂ ಹೇಳಿದೆ. ಈ ಬೆಟ್ಟದ ಪಕ್ಕದಲ್ಲಿರುವ ಮತ್ತೊಂದು ಬೆಟ್ಟದಲ್ಲಿ

1 Early History of India (31d edition}l page 146,