ಪುಟ:ಕರ್ನಾಟಕ ಗ್ರಂಥಮಾಲೆ ೯೮ - ನಡೆವಳಿ.djvu/೧೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಚಳವಳಿ

  • ಮಾತ್ರ ಲಭಿಸುವುದೆಂದಾಯಿತಷ್ಟೆ. ಅದರಲ್ಲೂ ಎಷ್ಟೋತಾರತಮ್ಯವುಂಟು. ನಡೆಯಿಸಿದ ಕಾರದಿಂದ ಕೆಲವರಿಗೆ ತಾತ್ಕಾಲಿಕಫಲವು ದೊರೆಯುವುದಾಗಿದ್ದ ರೆ ಅದರಿಂದ ಉಂಟಾಗತಕ್ಕೆ ಕೀರ್ತಿಯು ಅಲ್ಪ ಪ್ರದೇಶದಲ್ಲಿ ಅಲ್ಪ ಕಾಲ " ಮಾತ್ರ ಹರಡಿರುವುದು. ಅರವಟ್ಟಿಗೆಯನ್ನಿಡಿಸುವುದು ತನ್ನ ಹಳ್ಳಿಯ ಬಡ ವರಿಗೆ ಒಂದು ದಿನ ಸಮರಾಧನೆ ಮಾಡಿಸುವುದು ಇತ್ಯಾದಿಗಳಿಂದ ಉಂಟಾಗ ತಕ್ಕ ಕೀರ್ತಿಯು ಈ ವಿಧವಾದುದು, ಇನ್ನು ಕಲವುದರಿಂದ ಉಂಟಾಗತಕ್ಕ ಕೀರ್ತಿಯು ಹೆಚ್ಚು ಪ್ರದೇಶದಲ್ಲಿ ಹರಡದಿದ್ದರೂ ದೀರ್ಘಕಾಲ ನೆಲೆಗೊ೦ ಡಿರುವುದು. ಕರೆ ಕೊಳ ತೋಪು, ಸತ್ರ ಪಾಠಶಾಲೆ ವೈದ್ಯ ಶಾಲೆ ದೇವಾ ಲಯ ಮಾದಲಾದವನ್ನು ಧರ್ಮಾರ್ಥವಾಗಿ ಸ್ಥಾಪಿಸಿ ಜನಗಳಿಗೆ ಉಪಕಾರ ಮಾಡುವುದರಿಂದ ಬರುವ ಕೀರ್ತಿಯು ಈ ತೆರನಾದುದು,

- ಇನ್ನು ಕೆಲವರು ಪುಣ್ಯಾತ್ಮರು ಹೆಚ್ಚು ವ್ಯಾಪ್ತಿಯುಳ್ಳವರಾಗಿ ಸರತ್ತು ಆಚರಣೆಗೆ ಬರಬಲ್ಲಂಥ ಎಷ್ಟೋ ಹೊಸಸಂಗತಿಗಳನ್ನು ಹೊಸ ಹ (ಸದಾಗಿ ಕಂಡು ಹಿಡಿದಿರುವುದರಿಂದ ಜಗತ್ಪಸಿದ್ಧರಾಗಿರುವರು, ರೈ ಎಂರ್ಜಿಮಾ ಡಿದ ಜಾರ್ಜ್ ಸ್ಟೀರ್ವ ರ್ಸ ನೆಯ್ಯುವ ಯಂತ್ರವನ್ನು ಕಂಡು ಹಿಡಿದ ಸರ್ ರಿಚರ್ಡ್ ಆರ್ಕ ರೈಟ್ ಅಚ್ಚಿನ ಮೊಳೆಗಳನ್ನು ಕಂಡು ಹಿಡಿದ ರ್ಜಾ ಗರ್ಟ ಬರ್ಗ ಮೊದಲಾದವರು ಇದಕ್ಕೆ ಉದಾಹರಣೆಯಾಗಿದ್ದಾರೆ. ಇನ್ನು ಕೆಲವರು ಮಹನೀಯರು ಮನುಷ್ಯ ಪ್ರಾಣಿಗಳು ಪಡುವ ಕಷ್ಟವನ್ನು ನಿವಾರಿಸುವುದಕ್ಕೋಸ್ಕರ ತಮ್ಮ ಜೀವಿತ ಕಾಲದ ಹೆಚ್ಚು ಭಾಗ ವನ್ನು ವಿನಿಯೋಗಿಸಿರುವರು. ಗುಲಾಮರ ವ್ಯಾಪಾರವನ್ನು ನಿಲ್ಲಿಸಿದ ವಿಲ್ಬರ್‌ ಪೋರ್ಸ್‌ ಹುಚ್ಚುನಾಯಿಗಳ ವಿಷವನ್ನು ಪರಿಹರಿಸಲು ಉಪಾಯವನು ಕಂಡುಹಿಡಿದ ಊಯಿಸ್ ಪಾಸ್ಸುರ್ಯ ದೇವಿಶಾಕುವ ಏರ್ಪಾಡಿನಿಂದ ಸಿಡುಬಿನ ಹಾವಳಿಯನ್ನು ಕಡಿಮೆಮಾಡಿದ ಡಾಕ್ಟರ್‌ ಜನ್ನರ್ ಮೊದಲಾದವ ರಿಗೆ ಒಟ್ಟು ಮನುಷ್ಯ ಕುಲವೇ ಋಣಿಯಾಗಿರಬೇಕಾಗಿರುವಲ್ಲಿ ಅವರುಗಳ `ಯಶಸ್ಸು ಎಂಥಾದ್ದೆಂಬುದನ್ನು ಹೇಳಬೇಕಾಗಿಯೇ ಇಲ್ಲ. - 12