ಪುಟ:ಕರ್ನಾಟಕ ಗ್ರಂಥಮಾಲೆ ೯೮ - ನಡೆವಳಿ.djvu/೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕಲಾಸಂವಿಧಾನ (School discipty) ಕ್ಕೂ ಹೀಗೆ ಸಕಲ ಸ್ತ್ರೀಪುರುಷ ವಾಚಕವರ್ಗಕ್ಕೂ ಅನುಕೂಲವಾಗಬೇಕೆಂಬ ಹಾರಯಿಕೆಯಿಂದ ಈ ಪುಸ್ತ ಇವು ಬರೆಯಲ್ಪಟ್ಟಿದೆ. ಈ ಪುಸ್ತಕವನ್ನು ಬರೆಯುವಾಗ ಹಲವುಬಗೆಯ ಸಲಹೆಗಳನ್ನೂ ಬುದ್ದಿವಾದಗಳನ್ನೂ ಪ್ರತ್ಯಕ್ಷವಾಗಿಯೂ ಗ್ರಂಥರೂಪವಾಗಿಯೂ ದಯೆ ಪಾಲಿಸಿ ಉಪಕರಿಸಿದ ಮಹನೀಯರನ್ನು ಭಕ್ತಿ ಕೃತಜ್ಞತೆಗಳಿಂದ ವಂದಿಸು ತೇನೆ. ನನ್ನ ಇತರ ಕೆಲವು ಗ್ರಂಥಗಳಂತೆ ಇದನ್ನೂ ಕರ್ಣಾಟಕಗ್ರಂಥ ಮಾಲೆಗೆ ಪೋಣಿಸಿ ಭಾಷಾಮಾತೆಯನ್ನು ಸೇವಿಸುತ್ತಲೂ ತನ್ಮೂಲಕ ನನ್ನನ್ನು ಪ್ರೋತ್ಸಾಹಗೊಳಿಸುತ್ತಲೂ ನೀತಿಯವತಾರವೋ ಎಂಬಂತಿದ್ದ ಕೀರ್ತಿಶೇಷರಾದ ಮ|| ರಾ|| ಬಾಪು ಸುಬ್ಬರಾವ್ ಬಿ. ವಿ. ಯವರ ಆತ್ಮಕ್ಕೆ ಅಖಂಡಾನಂದವನ್ನು ಅನುಗ್ರಹಿಸಬೇಕೆಂದು ಅನಂತಮಹಿಮನೂ ಅನಂತ ನೂ ಆದ ಜಗದೀಶ್ವರನನ್ನು ಅನವರತವೂ ಪರ್ಥಿಸುತ್ತಿದೇನೆ. ಮ! ರಾ| ಸುಬ್ಬರಾಯರು ಕೈಗೊಂಡಿದ್ದ ಇಂತಹ ಕೆಲಸಗಳನ್ನು ಸಾಧ್ಯವಾದಮಟ್ಟ ಗ ಕೈಗೂಡಿಸುತ್ತ ಸುಪುತ್ರರೆಂದೆನಿಸಿಕೊಂಡಿರುವ ಮತ್ತು ಈ ಪುಸ್ತಕದ ಮುದ್ರಣಕಾರವನ್ನು ಪೂರ್ಣಗೊಳಿಸುವುದರಲ್ಲಿ ನನಗೋಸ್ಕರ ಹೆಚ್ಚು ಕ್ರಮವನ್ನು ವಹಿಸಿದ ವೆಟರಿನರಿ ಡಾಕ್ಟರ್‌ ಮ| ರಾ| ಬಾಪು ರಘುನಾಥ ರಾಯರವರಿಗೆ ನನ್ನ ಧನ್ಯವಾದಗಳನ್ನು ಸಮರ್ಪಿಸುತ್ತೇನೆ. No 5-12-21 1 ಹಾಸನ ಜೆ. ಕೃಷ್ಣಶಾಸ್ತ್ರಿ). 1 ನೇ ಅಸಿಸ್ಟೆಂಟ್ ಮಾಸ್ಟರ್, - 'ಸ್ಕೂಲ್, ಹಾಸನ.