ಪುಟ:ಕರ್ನಾಟಕ ಗ್ರಂಥಮಾಲೆ ೯೮ - ನಡೆವಳಿ.djvu/೧೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕರ್ಕಾಟಕ ಗ್ರಂಥಮಾಲೆ ಕೆಂದು ಕೇಳಿದರೆ ಅವರನ್ನು ಗದರಿಸದೆ ಕೈಯಲ್ಲಾದಮಟ್ಟಿಗೂ ಸಹಾಯ ಮೂಡಿ ಒಳ್ಳೆಯ ಮಾತುಗಳಿಂದ ಆದರಿಸುವುದು ಉತ್ತಮ. ಇದರಿಂದ ನಾಲ ಗೆಯೇನೂ ಸವೆಯುವುದಿಲ್ಲ. ಅಥವಾ ದುರಾದೆಗೆ ಕುಂದಕವೂ ಇಲ್ಲ, ಹೆಚ್ಚು ತಿಳಿವಳಿಕೆಯುಳ್ಳವರು ಮಾತಿನಿಂದ ಮಾತ್ರವಲ್ಲದೆ ಕಾರ್ ಗಳಲ್ಲಿ ಕೂಡ ಎಂಥ ಅಲ್ಬರಿಗೂ ಎಷ್ಟೋ ಸಹಾಯಗಳನ್ನು ಮಾಡುವರು. ಒಂದು ಸಾವಿರ ರೂಪಾಯಿ ಸಂಬಳದ ಒಬ್ಬ ದೊಡ್ಡ ಮನುಷ್ಯನು ಕುದು ರೆಯಮೇಲೆ ಸವಾರಿಹೋಗುತ್ತಿದ್ದಾಗ ನಿರ್ಜನವಾದೊಂದು ರಸ್ತೆಯಲ್ಲಿ ಒಬ್ಬ ರೈತರ ಮುದುಕಿಯು ಬೆರಳಯ ಗೂಡೆಯನ್ನು ಇಳಿಸಿಕೊಂಡು ಸ್ವಲ್ಪ ಸುಧಾರಿಸಿಕೊಂಡ ಬಳಿಕ ಪುನಃ ಆ ಗೂಡೆಯನ್ನು ತಲೆಯ ಮೇ ಲಿಟ್ಟು ಕೊಳ್ಳಲಾರದೆ ತೊಂದರೆಪಡುತ್ತಿದ್ದುದನ್ನು ಕಂಡು ಕುದುರೆಯಿಂ ದಿಳಿದು ಸಹಾಯಮಾಡಿದನಂತೆ ! ಅಮೆರಿಕದ ಸಂಯುಕ್ತ ಸಂಸಾ ನಗಳು ಪ್ರೆಸಿಡೆಂಟ್ ಆಗಿದ್ದು ಜಗತ್ತು ಸಿದ್ಧನಾದ ಜಾರ್ಜ್ವಾಸಿಂರ್ಗನು ಬಂದಾ ನೊಂದುಸಲ ವೇಷಧಾರಿಯಾಗಿ ಹೋಗಿ ಸರಾರದ ಆಡಳಿತಗಳನ್ನು ಪರೀಕ್ಷಿ ಸುತ್ತಿದ್ದನು. ಆಗ ಎಂಟು ಹತ್ತು ರೂಪಾಯಿಗಳ ಸಂಬಳದ ಸಣ್ಣ ನೌಕರ ನೊಬ್ಬನು ತಾನು ಕೆಲಸಕ್ಕೆ ಸ್ವಲ್ಪವೂ ಕೈಹಾಕದೆ ಜಂಬದಿಂದ ಹಾ ಹೂ' ಎಂದು ಗರ್ಜಿಸುತನಿಂತು ಆ ಕೆಲಸವನ್ನು ಹೇಗೆ ಮಾಡಬೇಕೆಂಬುದೇ ಗೊತ್ತಿಲ್ಲದ ಇತರರನ್ನು ತೊಂದರೆಪಡಿಸುತ್ತಿರುವುದನ್ನು ಕಂಡು ಈ ವಾಷಿಂಗ್ಟನ್ನನು ತಾನೇ ಹೋಗಿ ಅದನ್ನು ಹೀಗೆ ಮಾಡಬೇಕೆಂದು ಮಾಡಿ ಯೇ ತೋರಿಸಿದನಂತೆ ! ನೆಪೋಲಿರ್ಯ ಎಂಬ ಫ್ರೆಂಚ್ ಸರದಾರನು ತನ್ನ ಬಳಿಯಲ್ಲಿ ಕೈ ಸೆರೆಯಾಗಿದ್ದ ಒಬ್ಬ ಇಂಗ್ಲೀಷ್ ಸಿಪಾಯಿಯು ತನ್ನ ತಾಯನ್ನು ನೋಡಬೇಕನ್ನಲು ಅವನ ಮಾತೃಭಕ್ತಿಗೆ ಮೆಚ್ಚಿ ಅವನನ್ನು ತಾನೇ ಒಂದು ಹಡಗಿನಲ್ಲಿ ಕುಳ್ಳಿರಿಸಿ ವೆಚ್ಚಕ್ಕೆ ರೊಕ್ಕವನ್ನೂ ಕೊಟ್ಟು ಇಂಗ್ಲೆಂಡಿಗೆ ಕಳುಹಿಸಿದನಂತೆ ! ಮಹಾ ಅಲೆಕ್ಸಾಂದರನು 'ಪುರೂರವಸ್ಸಿಗೆ