ಪುಟ:ಕರ್ನಾಟಕ ಗ್ರಂಥಮಾಲೆ ೯೮ - ನಡೆವಳಿ.djvu/೧೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

86 ಕರ್ನಾಟಕ ಗ್ರಂಥಮಾಲೆ ಆಸುತ್ತಿರಬೇಕು. ಇದಕ್ಕೆ ಕೂಡ ವಿವೇಕವು ಆವಶ್ಯಕವು. ಮತ್ತು ಎಷ್ಟು ದ್ರವ್ಯದಿಂದಲೂ ಎಂಥ ಶಕ್ತಿಯಿಂದಲೂ ಸಾಧ್ಯವಾಗಲಾಕದ ಕೆಲಸಗಳಲ್ಲಿ ಬೆಳದಿಂದ ಸುಲಭವಾಗಿ ಕೈಗೂಡುವುವು. ಏಕೆಂದರೆ ವಿವೇಕವು ಉತ್ತ ಸವಾದುದು. * ಸೂಕ್ಯ ಮತ್ತು ಗಾಳಿ' ಎಂಬ ಕಥೆಯನ್ನೊದಿರುವವರಿಗೆ ವಿವೇಕದ ಮಹಿಮೆಯು ಚೆನ್ನಾಗಿ ಗೊತ್ತಿರುವುದು, ವಿವೇಕಿಗಳು ಯಾವ ವಿಧವಾದ ಐಕ್ಷರ, ಪಾಂಡಿತ್ಯ, ಪದವಿ ಮೊದ ಆದುವುಗಳನ್ನು ಪಡೆಯದಿದ್ದರೂ ಲೋಕವನ್ನೆಲ್ಲಾ ವಶಪಡಿಸಿಕೊಂಡು ಜಗಕ್ಷ ಸಿದ್ದರಾಗಿರುವುದಕ್ಕೆ ಎಷ್ಟೋ ನಿದರ್ಶನಗಳಿವೆ. ವಿವೇಕವನ್ನು ಸಳತಿ ಏಷೆಯಗಳಲ್ಲೂ ತೋರ್ಪಡಿಸಬಹುದು. ಇಲ್ಲಿ ಕೆಲವು ಸಂಗತಿಗಳನ್ನು ತಗೆದುಕೊಂಡು ವಿವೇಕವಾಗಿ ನಡೆಯುವ ಬಗೆಯನ್ನು ತಿಳಿಯೋಣ, ಸಧ್ಯ ಸಾಗುವ ಮಟ್ಟಿಗೂ ಪರೋಪಕಾರ ಮಾಡಬೇಕು. ಆದರೆ ಅಸಾಧ್ಯವಾದು ದನ್ನು ಇಲ್ಲವೆಂದು ಹೇಳುವುದಕ್ಕೆ ಹೆದರಬಾರದು, ಏಕೆಂದರೆ-ದಾಕ್ಷಿಣ್ಯಕ್ಕೆ ಕಟ್ಟುಬಿದ್ದರೆ ನಮಗೆ ಕೇಡುಂಟಾದೀತು. ದಾಕ್ಷಿಣ್ಯದಿಂದ ಇತರರ ಸಕಲ ಮುಂತಾದುದಕ್ಕೆ ಹೊಣೆಯಾಗಿ ಎಷ್ಟೋ ಜನರು ಮುಳುಗಿ ಹೋಗಿದ್ದಾರೆ. ಆದರೆ ಇಲ್ಲ ಎಂಬುದನ್ನು ಕೇವಲ ಮರಾದೆಯಿಂದಲೂ ಸೌಮ್ಯತೆಯಿಂದ ಹೇಳಬೇಕು. ಏಕೆಂದರೆ ಒಂದಾವೃತ್ತಿ ನಮ್ಮಲ್ಲಿ ಬಂದವರು ಮತ್ತೊಂದು ಸಲ ಬರಲು ಬೇಸರ ಪಡದಂತೆ ಮಾಡುವುದು ಮಾತ್ರವಲ್ಲದೆ ಪುನಃ ನಮ್ಮಲ್ಲಿ ಬರುವುದೆಂದರೆ ಅವರಿಗೆ ಏನೋ ಒಂದು ಸಂತೋಷವೆಂಬ ಭಾವನೆಯ ಹುಟ್ಟುವಂತೆ ಮಾಡಬೇಕು. ನಾವು ಇತರರ ವಿಷಯದಲ್ಲಿ ಒಳ್ಳೆಯ ವರಾಗಿರಬೇಕೆಂದರೆ ಮನಸ್ಸು ಮಾತ್ರ ಹಾಗಿದ್ದರೆ ಸಾಲದು ನಮ್ಮ ಹೊರ ಗಿನ ನಡತೆಯಿಂದಲೂ ಆ ಒಳ್ಳೆಯತನವು ಪ್ರಕಟಗೊಳ್ಳಬೇಕು. ಇಂಥ ಒಳ್ಳೆಯ ನಡತೆಯನ್ನು ಬಾಲ್ಯದಿಂದಲA ಅಭ್ಯಾಸ ಮಾಡಿಮಾಡಿ ರೂಢಿಗೆ ತಂದುಕೊಳ್ಳಬೇಕು.