ಪುಟ:ಕರ್ನಾಟಕ ಗ್ರಂಥಮಾಲೆ ೯೮ - ನಡೆವಳಿ.djvu/೧೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

دوه onnemann ಕರ್ಣಾಟಕ ಗ್ರಂಥಮಾಲೆ ವಾಸ್ಯೆಗಳು, ಗ್ರಹಣಗಳು ಇತ್ಯಾದಿಗಳ ಇವಕ್ಕೆ ಸಾಕ್ಷಿಯಾಗಿವೆ. ಅಲ್ಲದೆ ಹಸಿವು ನಿದ್ರೆ ಮೊದಲಾದುವುಗಳು ಕೂಡ ಪ್ರಕೃತಿಯ ಅಪ್ಪಣೆಯಂತೆ ಕ್ಲುಪ್ತಕಾಲಗಳಲ್ಲಿ ತಲೆದೋರುತ್ತವೆ. ಹೊತ್ತಿಗೆ ಸರಿಯಾಗಿ ಕೆಲಸಮಾಡು ವುದರಿಂದ ನಮ್ಮಲ್ಲಿ ನನಗೆ ನಂಬಿಕೆ ಹುಟ್ಟುವುದು. ಯಾರು ಕಾಲವನ್ನು ವ್ಯರ್ಥವಾಗಿ ಕಳೆಯುವರೋ ಅಂಥವರು ಎಲ್ಲವನ್ನೂ ಹಾಳುವಾಹ ಬಲ್ಲರು. ಒಂದು ಸಲ ಕಳದುಹೋದ ಕಾಲವನ್ನು ಪುನಃ ಎಂದಿಗೂ ಪಡೆಯ ಲಾಗುವುದಲ್ಲ. ಕಾಲವು ನಮ್ಮನ್ನು ಪರೀಕ್ಷಿಸಿಕೊಂಡು ಎಂದಿಗೂ ನಡೆ ಯದೆ ನಿಲ್ಲುವುದಿಲ್ಲ. ಈ ನಾಳೆಯೆಂದವನಿಗೆ ನಾಶ ' ಎಂದು ನಮ್ಮಲ್ಲಿ ಪ್ರಸಿ ದ್ದವಾದ ಗಾದೆಯುಂಟು ಒಂದು ಕೆಲಸಮಾಡುವ ಹೊತ್ತಿನಲ್ಲಿ ಮತ್ತೊಂದು ಕೆಲಸವನ್ನು ಮಾಡುವುದು, ಒಂದು ಕೆಲಸವನ್ನು ಅರ್ಧಧ್ರಮಾಡಿಬಿಟ್ಟು ಮತ್ತೊಂದು ಕೆಲಸಕ್ಕೆ ಕೈಹಾಕುವುದು ಇಂಥದೆಲ್ಲಾ ಅಕ್ರಮ, ಹೊತ್ತಿಗೆ ಸರಿಯಾಗಿ ಕೆಲಸಮಾಡುವ ಅಭ್ಯಾಸವೊಂದಿದ್ದರೆ ಒಂದು ದೊಡ್ಡ ನಿಧಿಯನ್ನೇ ನಮ್ಮ ವಶದಲ್ಲಿ ಪಡೆದಿದ್ದಂತೆ ಆಗುವುದು. ಯಾರಾದರೊಬ್ಬರು ಇಷ್ಟು ಹೊತ್ತಿಗೆ ನಮ್ಮದೊಂದು ಕೆಲಸವನ್ನು ಮಾಡಿಕೊಡುವುದಾಗಿ ಮಾತುಕೊಟ್ಟರೆ ನಾವು ಎಷ್ಟು ನಂಬಿಕೆಯಿಂದಲA ಆತುರದಿಂದಲೂ ಆ ಹೊತ್ತನ್ನೇ ಎದುರುನೋಡು ತಿರುವೆವು ! ಹೀಗೆಯೇ ನಮ್ಮ ಮಾತಿನಲ್ಲಿಯೂ ಇತರರು ನಂಬಿಕೆಯಿಟ್ಟು ಕೊಂಡಿರುವರಲ್ಲವೆ? ಅದಕ್ಕೆ ತಪ್ಪಿದರೆ ನಮ್ಮನ್ನು ಅವರು ನಂಬುವುದಿಲ್ಲ. ಹೊತ್ತಿಗೆ ಸರಿಯಾಗಿ ಕೆಲಸಮಾಡದವರು ತಮ್ಮ ಕಾಲವನ್ನು ಕಳೆದು ಕೊಳ್ಳುವುದು ಮಾತ್ರವಲ್ಲದೆ ಇತರರ ಹೊತ್ತನ್ನೂ ವ್ಯರ್ಥವಾಗಿ ಕಳೆಯು ತ್ತಾರೆ. ಪಾಠಶಾಲೆ, ಸತ್ಕಾರದಕಲಸ, ರೈಲು, ವಿಟಂಗ್, ಉಪನ್ಯಾಸ, ಇಂಥವಕ್ಕೆ ಹೋಗತಕ್ಕವರಿಗಿಂತ ಕಾಲದ ಬೆಲೆಯ... ಇತರರಿಗಿಂತ ಚೆನ್ನಾಗಿ ಗೊತ್ತಿರುವುದು, ಊಟಕ್ಕೂ ವಿನೋದಗಳಿಗೂ ಕೂಡ ಕಾಲ