ಪುಟ:ಕರ್ನಾಟಕ ಗ್ರಂಥಮಾಲೆ ೯೮ - ನಡೆವಳಿ.djvu/೧೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ನಡೆವಳಿ han ಹಾಕಿ ಕಾರ್ಖಾನೆ, ರೈಲ್ವೆ ಅಥವಾ ಮತ್ತೆ ಯಾವುದಾದರೊಂದು ವ್ಯಾಪಾರ ಇಂಥವುಗಳನ್ನು ನಡೆಯಿಸಿಕೊಳ್ಳುವುದರಿಂದ ಒಟ್ಟು ಎಲ್ಲರಿಗೂ ಲಾಭವು ದೊರತು ಆ ಜನಾಂಗವೆಲ್ಲಾ ಊರ್ಜೆತಸ್ಥಿತಿಗೆ ಬರುವುದು. ಯಾವುದನ್ನಾ ದರೂ ನಿತ್ಯವೂ ತಪ್ಪದೆ ಸ್ವಲ್ಪಸ್ವಲ್ಪವಾಗಿಯೇ ಕೂಡಿಟ್ಟರೂ ಅದರಿಂದ ಉಂಟಾಗತಕ ಪ, ಜನಗಳನ್ನೇ ಹೆಚ್ಚಾಗಿರುವುವು, ನಮ್ಮ ಸಂಘ ದನೆಯಲ್ಲಿ ನಿತ್ಯವೂ ಒಂದು ಸಣ್ಣ ಅಂಶವನ್ನಾದರೂ ಒಂದು ಕಡೆ ಕೂಡಿಹಾ ಕುತ್ತಿರಬೇಕು. ನಮಗೆ ರೋಗಾದ್ರುಪದ್ರವಗಳು ಸಂಭವಿಸಿದಾಗ ಅಥವಾ ಇತರವಿಧವಾದ ಖರ್ಚುವೆಚ್ಚಗಳು ಒದಗಿದಾಗ್ಗೆ ಅಥವಾ ಅಕಸ್ಮಾತ್ತಾಗಿ ಏನಾದರೂ ಗಂಡಗಳು ಸಂಭವಿಸಿದಾಗ್ಗೆ ಈ ಹಣದಿಂದ ಪ್ರಯೋಜನವನ್ನು ಪಡೆಯಬಹುದು. ಒಂದುವೇಳೆ ಇಂಥ ತೊಂದರೆಗಳು ಯಾವುವೂ ಸಂಭ ವಿಸದಿದ್ದರೂ ಮ.ಪುಬರುವುದೇನೋ ಖಂಡಿತವಷ್ಟೆ. ಆಗಲಾದರೂ ಈ ದ್ರವ್ಯದಿಂದ ತುಂಬ ಸಹಾಯವಾಗುವುದು. ಅಂಥ ಸಮಯಕ್ಕೆ ಒದಗು ವಂತೆ ಆಪದ್ಧನವನ್ನು ಕೂಡಿಸಿಟ್ಟು ಕೊಳ್ಳದಿದ್ದರೆ ನಾವು ಇತರರ ಹಂಗಿಗೆ ಒಳಪಡಬೇಕಾದೀತು. ಒಂದುವೇಳೆ ಅವರು ನಮ್ಮನ್ನು ಎಷ್ಟೇ ಪ್ರೀತಿಯಿಂದ ಆದರಿಸಿದರೂ ನಮ್ಮ ಮನಸ್ಸಿಗೇನೋ ಒಂದು ವಿಧವಾದ ಸಂಕೋಚವು ಇದ್ದೇಇರುವುದು, ಮೇಲೆ ಹೇಳಿರುವ ಯಾವ ತೊಂದರೆಗಳು ಬಂದರೂ ತಡೆದುಕೊಳ್ಳುವುದಕ್ಕೆ ತಕ್ಕಂತೆ ಬೇಕಾದಷ್ಟು ಹಣವಿದ್ದರೂ ನಾವು ದುಂದುಗಾರರಾಗಬಾರದು. ಏಕೆಂದರೆ ದುಂದುಗಾರಿಕೆಯಿಂದ ಅನ್ಯಾಯ ವಾಗಿ ವೆಚ್ಚವಾಗುವ ದ್ರವ್ಯವನ್ನು ಒಂದುಕಡೆ ಕೂಡಿಹಾಕಿದರೆ ಇತರರಿಗೆ ಕಷ್ಟಬಂದವೇಳಗಳಲ್ಲಾದರೂ ಸಹಾಯಮಾಡಬಹುದು.

  • ಅನೇಕರು ಜಂಭದಿಂದಲೂ ಇತರರು ತಮ್ಮನ್ನು ಆಡಿಕೊಂಡಾರೆಂಬ ಕಂಕಯಿಂದಲೂ “ ನಾಳೆಯಾರೋ ನಾವುಯಾರೋ, ಈಗ ಆದರೆ ನಮ್ಮ ದು ” ಎಂಬ ಬಾಯಿಮಾತಿನ ವೇದಾಂತದಿಂದಲೋ ಅಥವಾ ದೊಡ್ಡವರನ್ನು ಮೆಜೆಸಿ ಪ್ರತಿಷ್ಠೆಯನ್ನು ಪಡೆಯಬೇಕೆಂಬ ಉದ್ದೇಶದಿಂದಲೇ ತಮ್ಮ ಯೋಗ್ಯತಗೆ ವಿಸರಿ ವೆಚ್ಚಮಾಡಿ ದ್ರವ್ಯವನ್ನು ದುಂದುಮಾಡುವರು. ಮದುವೆ ಮುಂಜಿ ಮೊದಲಾದ ಶುಭಕಾರ್ಯಗಳಲ್ಲಿ, ಸಮಾರಾಧನೆ,ಚಪ್ಪರ