ಪುಟ:ಕರ್ನಾಟಕ ಗ್ರಂಥಮಾಲೆ ೯೮ - ನಡೆವಳಿ.djvu/೧೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ನಡವಳಿ ದು ಮನಸ್ಸಿನ ಒಂದು ಬಗೆಯ ಅವಸ್ತು . ಅದನ್ನು ನಾವೇ ಮಾಡಿಕೊ ಳ್ಳಬಹುದು. ಹೊರಗn ಸನ್ನಿವೇಶಗಳಿಗನುಸಾರವಾಗಿ ಮನಸ್ಸನ್ನು ತಿದ್ದಿ ಕೊಂಡರಾಯಿತು. ಅದಿಲ್ಲದೆ ನಮ್ಮ ಮನಸ್ಸಿಗನುಸಾರವಾಗಿ ಹೊರಗn ಪ್ರಪಂಚವನ್ನೆಲ್ಲಾ ತಿದ್ದುವನೆಂಬುವನು ದಡ್ಡನು. ಮನಸಖ್ಯದಿಂದ ತೃಪ್ತನಾದ ಒಬ್ಬ ಕಡು ಬಡವನು ಕೋಟೇಶ್ವರನಿಗಿಂತಲೂ ಮೇಲು ವಿಳಂ ದರೆ:-ಧನಕ್ಕೂ ಸೌಖ್ಯಕ್ಕೂ ಸ್ನೇಹವಿಲ್ಲ. ಆದ್ದರಿಂದಲೇ ಬಡವನನ್ನು ದೇವರು ಕೈಬಿಟ್ಟಿಲ್ಲವೆನ್ನಬಹುದು ದೇಹ, ಬುದ್ದಿ ಪ್ರಪಂಚ ಇತ್ಯಾದಿಗಳು ಅವರಿಗೇ ಬೇರೆಯಾಗಿಲ್ಲ. ಕೆಲವು ತೊಂದರೆಗಳೇನೂಉಂಟು ಅವನ್ನು ಧೈಯ್ಯದಿಂದ ಇದಿರಿಸಿದರಾಯಿತು. ಕಲಸವನ್ನೇ ಮಾಡದಿರುವುದು ಸುಖ ಎಂದು ಕೆಲವರೂ ಇಂದ್ರಿಯಗಳನ್ನು ತೃಪ್ತಿ ಪಡಿಸಿಕೊಳ್ಳುವುದು ಸುಖ ಎಂದು ತಪ್ಪಾಗಿ ತಿಳಿದುಕೊಂಡಿದ್ದಾರೆ. ಇವರಡೂ ಕ್ಷಣಿಕ ಮತ್ತು ಪರಿ ನಾಮದಲ್ಲಿ ಆಶಾ ಭುಕರ. ಮನಸ್ಚ್ಯ ವೇ ನಿಜವಾದ, ಕಡುಕಿಲ್ಲದ ಕಾಕ್ಷ ತವಾದ ಸೌಖ್ಯವು. ಇದನ್ನು ಪಡೆಯಲು ಬುದ್ದಿ, ಜ್ಞಾನ, ಸ್ಮತಿ, ವಿಚಾ ರಶಕ್ತಿ ಇವು ಸಾಧನಗಳು. ಈ ಸುಖಸಧನಗಳಿಗೆ ದೇಹವೇ ನಲು ಧಾರ. ಈಗ ಹಲವರು ದೇಹವೊಂದನ್ನು ಮಾತ್ರ ದುಡಿಸುತ್ತಿರುವುದು ಅನ್ಯಾಯ, ನ್ಯಾಯವಾಗಿ ಪಡೆಯಬೇಕಾದ ಸುಖದಲ್ಲಿ ವೀಸವಾಲನ್ನು ಕೂಡ ನಾವು ಪಡೆದಿಲ್ಲ. ಲೋಕದಲ್ಲಿ ಎಂಥೆಂಥ ಕೈಗಾರಿಕೆಗಳ, ಕುಶಲ ವಿದ್ಯೆಗಳ ಇವೆ ! ಅವುಗಳ ಸ್ವರೂಪವಾದರೂ ನಮಗೆ ಚೆನ್ನಾಗಿ ಗೊತ್ತಿ ದೆಯೆ ? ಈ ಭೂಮಿಯಲ್ಲಿ ಸ್ವಾಮಿಯು ಎಂಥೆಂಥ ವಿಚಿತ್ರ ವಸ್ತುಗಳನ್ನು ಸೃಷ್ಟಿಸಿದಾನೆ ! ಒಂದು ತಿಲಾಂಶವನ್ನಾದರೂ ಚೆನ್ನಾಗಿ ತಿಳಿದಿದ್ದೇವೆಯ ? ದಿವ್ಯ ತೇಜಃಪುಂಜರಂಟಿತವಾದ ನಕ್ಷತ್ರಗಳಿಂದಲೂ, ಗ್ರಹಮಂಡಲಗಳಿಂದ ಊ ಶೋಭಿಸುವ ಆಕಾಶವನ್ನು ಕತ್ತತ್ತಿಯಾದರೂ ನೋಡಿ ಚನಾಗಿ ಗ್ರಹಿಸುತ್ತಿರ.ವೆವೆ ? ಇವನ್ನೆಲ್ಲಾ ತಿಳಿದರೆ ಇನ್ನೂ ಎಷ್ಟು ಸುಖಪಡಬ ಹುದು. ಇಂಥ ಅನ್ಯಾದೃಶಸುಖಕ್ಕೆಳಸದೆ ವ್ಯಥೆ, ತೊಂದರೆ, ಭಯ, ಸಂಶಯ ಕುತೂಹಲ ಇವುಗಳಿಂದ ಸದಾ ಚಿಂತಿಸುತ್ತ ಸ ವ್ಯನ ಹಲುಬುತ್ತಿದೇವೆ. ಅಲ್ಲದೆ ಯಾವುದಕ್ಕೂ ಅದೃಷ್ಟ ಆದೃಷ್ಟ ಎಂದು ಹೇಳುವೆವು. ಅವಳ 5