ಪುಟ:ಕರ್ನಾಟಕ ಗ್ರಂಥಮಾಲೆ ೯೮ - ನಡೆವಳಿ.djvu/೧೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಭರವ ತಮ್ಮ ದೇಶವು ವೃದ್ಧಿಗೆ ಬರಬೇಕೆಂದು ಬಯಸತಕ್ಕವರು ಇತರ ದೇಶಗಳಿಗೆ ಕೇಶನ್ನು ಹಾರಯಿಸಬಾರದು. ಏಕೆಂದರೆ-ಲೋಕದಲ್ಲೆಲ್ಲಾ ಕೊಳ್ಳುವುದು ಕೊಡುವುದು ಎಂಬ ಎರಡು ಕೆಲಸಗಳೇನೋ ನಡದೇ ತೀರಿ ಬೇಕಷ್ಟೆ. ಇತರ ರಾಜ್ಯಗಳ ಸುಖವಾಗಿದ್ದರೆ ಈ ಕಲಸಕ್ಕೆ ಅನುಕೂಲ. ಅದಿಲ್ಲದಿದ್ದರೆ ವ್ಯಾಪಾರವು ಸರಿಯಾಗಿ ನಡೆಯದೆ ಅನಾನುಕೂಲತೆಯ ಅನಾಗರಿಕತೆಯ ಉಂಟಾಗಲು ಅವಕಾಶವಾಗುವುದು. ಈಗ ಈ ಖಂಡದಲ್ಲಿ ಹರನಿಗೂ ಇತರ ರಾಜ್ಯಗಳಿಗೂ ನಡೆಯುತ್ತಿರುವ ಯುದ್ಧ ಗಳಿಂದ ಒಟ್ಟು ಪ್ರಪಂಚದ ಸಮಸ್ತ ರಾಜ್ಯಗಳ ಜನಗಳಿಗೂ ಎಷ್ಟು ತೊಂದ ರೆಯಾಗಿದೆಯೆಂಬುದೇ ಇದಕ್ಕೆ ಸಾಕಾದ ದೃಷ್ಟಾಂತವಾಗಿರುವುದು, ಸಂದೇಶ * ವೃದ್ಧಿಯ ಯಶಸ್ವಿ ಉಂಟಾಗುವಂತೆ ಯತ್ನಿಸಬೇಕು. ಮತ್ತು ಹತ್ತು ಜನಗಳಿಗೆ ಉಪಕಾರವಾಗುವ ಕೆಲಸದಲ್ಲಿ ಸೃಸುಖವನ್ನು ಕೂರ ಪರಿತ್ಯಜಿಸಲೇ ಬೇಕು, ತನ್ನ ದೇಶದಲ್ಲಿರುವ ದುರಾಚಾರಗಳನ್ನು ತೊಲಗಿಸತಕ್ಕದ್ದು ಪ್ರತಿ ಯೊಬ್ಬ ದೇಶಾಭಿಮಾನಿಗೂ ಕರ್ತವ್ಯವು, ಸೋಮಾರಿತನ, ತಾವೇ ಶ್ರೇಷ್ಠ ರೆಂದು ಹೇಳಿಕೊಳ್ಳುವುದು, ತಿರುಪವು ಗೌರವಾವಹವೆಂದೂ ಕೆಲಸ ಮಾಡು ವುದು ಹೀನಾಯವೆಂದೂ ಭಾವಿಸುವುದು, ಕಾಪಟ್ಯ ಇ೦ಥ ಕೆಟ್ಟ ಪದ್ಧತಿಗಳ ನ್ನೆಲ್ಲಾ ತಪ್ಪಿಸುತ್ತ ಬರಬೇಕು. ತಾವು ಮಾತ್ರವಲ್ಲದೆ ಮುಂದೆ ತಮ್ಮ ಮಕ್ಕಳೂ ಸ್ವತಂತ್ರರಾಗಿ ಬಾಳಬೇಕೆಂಬುದು, ತಕ್ಕಮಟ್ಟಿಗಾದರೂ ಧೈಯ್ಯ, ಇತರರಿಗೆ ತೊಂದರೆಕೊಟ್ಟು ಜೀವಿಸುವುದಕ್ಕೆ ನಾಚುವುದು, ಹತ್ತು ಜನಗಳ ಗೋಸ್ಕರ ತಮ್ಮಿಂದ ಆಗುವಷ್ಟು ಸಹಾಯಮಾಡುವುದು, ಇಂಥ ಸುಗುಣ ಗಳನ್ನು ಬಾಲ್ಯದಿಂದಲೂ ಮಕ್ಕಳಿಗೆ ಕಲಿಸುತ್ತ ಬರತಕ್ಕವರೇ ನಿಜವಾದ ದೇಶಾಭಿಮಾನಿಗಳು. ದೇಶಾಭಿಮಾನದ ವಿಷಯದಲ್ಲಿ ಪಾಶ್ಚಾತ್ಯರು, ತತ್ರಾಪಿ ಇಂಗ್ಲಿಷರು ಉತ್ತಮವಾದ ಮೇತ್ರಿಯಾಗಿದ್ದಾರೆ. ಅವರ ಸ್ವಂತ ದೇಶವಾದ ಇಂಗ್ಲೆಂ ಡ್ ನಮ್ಮ ಇಂಡಿಯಾಕ್ಕೆ ಬಂದಿರುವ ಆ ಜನಗಳಿಗೆ ಅನೇಕ ಸಹಸ್ತಮೈಲಿ ಗಳ ದೂರದಲ್ಲಿದೆ. ಅದು ಎಷ್ಟೋ ಸಣ್ಣ ರಾಜ್ಯ, ಮತ್ತು ಅದು ಒಟ್ಟು ಪ್ರಪಂಚದಲ್ಲಿ ಯಾವುದೋ ಒಂದು ಅಭುಕ್ತನಲೆಯಲ್ಲಿದೆ. ಆದರೂ