ಪುಟ:ಕರ್ನಾಟಕ ಗ್ರಂಥಮಾಲೆ ೯೮ - ನಡೆವಳಿ.djvu/೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ನಡೆವಳಿ ೧೧ ಕಡ್ಡಿಗಳು ಮೊದಲಾದ ಮೊನೆಯಾದ ತುದಿಯುಳ್ಳ ವಸ್ತುಗಳನ್ನಿಟ್ಟು ಕೊಂಡಿ ರುವುದರಿಂದ ಕಲವುವೇಳೆ ಅಕಸ್ಮಾತ್ತಾಗಿ ಕಣ್ಣಿಗೆ ಅಪಾಯವಾಗುವ ಸಂಭ ವವುಂಟು. ಆದುದರಿಂದ ಈ ವಿಷಯದಲ್ಲಿ ಜಾಗರೂಕರಾಗಿರಬೇಕು. ಮತ್ತು ಅಂತಹವುಗಳನ್ನಿಟ್ಟು ಕೊಳ್ಳುವುದರಿಂದ ಜೇಬು ಕೊಳೆಯಾಗಿ ಅಸ ಹ್ಯವಾಗುವುದು, ನಾವು ಮಾಡಿದ ತಪ್ಪನ್ನು ಇತರರ ಮೇಲೆ ಹೊರಿಸಿ ಅನ್ಯಾಯವಾಗಿ ಅವರಿಗೆ ಶಿಕ್ಷೆ ಮಾಡಿಸಬಾರದು. ಇದು ಬಹಳ ಹೇಡಿಕೆಲಸ, ಸುನತೆಯು ಳ್ಳವರು ಎಂದಿಗೂ ಹೀಗೆ ಮಾಡುವುದಿಲ್ಲ. ಮಂಕು ಹುಡುಗರನ್ನು ನೋಡಿ ನಗಬಾರದು. ಹೊಸಬರು ಯಾರಾದರೂ ಪಾಠಶಾಲೆಗೆ ಬಂದರೆ ಅವರಕಡೆ ಯೇ ನೋಡುತ್ತಿರಬಾರದು. ಇದು ಬಲು ಒರಟುತನ ತಾವುತಾವು ತಮ್ಮ ತಮ್ಮ ಕೆಲಸಗಳನ್ನು ಮಾಡುತ್ತಿರಬೇಕುಒಟ್ಟಿನಲ್ಲಿ ಪಾಠಶಾಲೆಯ ಬಾಲಕರಿಗೆಲ್ಲಾ ಸನ್ನಿತರಾಗಿಯ, ಉಪಾಧ್ಯಾಯರಿಗೆ ವಿಧೇಯಗಾಗಿಯ ನಡೆಯುತ್ತಿರಬೇಕು (iii) ಆಟದ ಕಾಲದಲ್ಲಿ ರಬೇಕಾದ ನಡತೆ. ಮಕ್ಕಳು ಇತರರೊಡನೆ ಕಲೆತು ತನ್ನ ನಿಜವಾದ ಸ್ವಭಾವವನ್ನು ಹೊರಪಡಿಸುವುದಕ್ಕೆ ಆಟಕ್ಕಿಂತಲೂ ಉತ್ತಮವಾದ ಸನ್ನಿವೇಶವು ಮತ್ತಾ ವುದೂ ಅಲ್ಲ. ಇಲ್ಲಿ ಕಲಿತುಕೊಂಡ ಒಳ್ಳೆಯ ನಡತೆಯೇ ಮುಂದಕ್ಕೆ ಜನ ಸಮಾಜದಲ್ಲಿಯ ಎಷ್ಟೋ ಮಟ್ಟಿಗೆ ಕಾರಕಾರಿಯಾಗುವುದು. ಆಟದ ವಸ್ತುಗಳನ್ನು ಇತರರಿಗೆ ಥಟ್ಟನೆ ಕೊಡುವುದಕ್ಕೆ ಅಥವಾ ತೆಗೆದುಕೊಳ್ಳುವುದಕ್ಕೆ ಹಿಂತೆಗೆಯಬಾರದು. ಈ ಪ್ರಪಂಚವು ತನಗೊಬ್ಬ ನಿಗೋಸ್ಕರವೇ ಹುಟ್ಟಿರುವುದೆಂದೂ ಎಲ್ಲವೂ ತನಗೇ ಆಗಬೇಕೆಂದೂ ದುರಾಸೆ ಪಡಬಾರದು. ಬ