ಪುಟ:ಕರ್ನಾಟಕ ಗ್ರಂಥಮಾಲೆ ೯೮ - ನಡೆವಳಿ.djvu/೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೨ ಕರ್ಣಾಟಕ ಗ್ರಂಥಮಾಲೆ mmmmmmmmmm ಆಟದಲ್ಲಿ ಕೂಡ ಸತ್ಯವಾಗಿ ನಡೆ ನುಬೇಕಲ್ಲದೆ ಮೋಸಮಾಡಬಾ ರದು. ಒಂದುವೇಳೆ ನಾವು ಸೋತರೂ ಜೋಲುಮುಖವನ್ನು ಹಾಕಿ ಕೊಂಡು ಅಥವಾ ಸಿಡಿಗುಟ್ಟುತ್ತ ಇರಬಾರದು. ಆಗಲೂ ನಗುನಗುತ ಇರ ಬೇಕು. ಒಂದು ಪಂಗಡದವರು ಸೋತ ಮಾತ್ರಕ್ಕೆ ಮತ್ತೊಂದು ಪಂಗಡ ದವರು ಗೆದ್ದಂತೆ ಆಗುವುದಿಲ್ಲ. ಪ್ರತಿಯೊಂದು ಆಟದಲ್ಲೂ ಪ್ರತಿ ಪಂಗಡ ದವರೂ ಯಾವಾಗಲಾದರೂ ಗೆದ್ದೇ ತೀರಬೇಕು ಆದುದರಿಂದ ನಾವು ಸೋತಾಗಲೂ ಎದೆಗುಂದದೆ ಇನ್ನು ಮುಂದಕ್ಕಾದರೂ ಗೆಲ್ಲುವೆವೆಂಬ ಆಸೆ ಯಿಂದ ನ್ಯಾಯವಾಗಿಯ ಕಷ್ಟಪಟ್ಟ ಆಡಬೇಕು. ಯಾವಾಗಲೂ ನಾವೇ ಗೆಲ್ಲುವುದಕ್ಕೆ ಆಗುವುದಿಲ್ಲ. ಮತ್ತು ಹಾಗೆ ಸದಾ ಗೆಲ್ಲುವುದು ಒಳ್ಳೆಯ ದೂ ಅಲ್ಲ. ಯಾಕೆಂದರೆ ಗೆದ್ದವರಿಗೆ ಹಂಬ ಬರುವುದು. ಮತ್ತು ಸೋತವರು ನಿರಾಶೆಯುಳ್ಳವರಾಗುವರು. ಆಟದಲ್ಲೂ ಎಲ್ಲರಿಗೂ ಒಳ್ಳೆಯವರಾಗಿರಬೇಕು. - ಎಲ್ಲಾ ಆಟ ಗಾರರಿಗೂ ಗೆಳೆಯರಾಗಿರಬೇಕು. ಆಡುವಾಗ ನಮ್ಮ ಇಷ್ಟದಂತೆ ನಡೆಯ ದಿದ್ದರೆ ಅಥವಾ ಅಕಸ್ಮಾತ್ತಾಗಿ ಉಡುಪುಗಳು ಹರಿದುಹೋದರೆ ಜಗಳ ವಾಡುವುದು, ಸೋತವರನ್ನು ಅಥವಾ ಗೆದ್ದವರನ್ನು ಅಡ್ಡ ಹೆಸರಿಟ್ಟು ಕರೆಯುವುದು ಮುಂತಾದುದು ಸರಿಯಲ್ಲ. ಇದು ಒರಟುತನ ಮತ್ತು ಕೈಲಾಗದ ಹೇಡಿತನ, ನಮ್ಮಿಂದ ಇತರರಿಗೆ ಪೆಟ್ಟಾದರೆ ಅವರನ್ನು ವಿಚಾ ರಿಸದೆಯೇ ನಮ್ಮಷ್ಟಕ್ಕೆ ನಾವು ಆಡಿಕೊಂಡಿರುವುದು ಯೋಗ್ಯವಲ್ಲ. ಅದು ಸಾರ್ಥಪರತೆ. ಆಡುವಾಗ ಒರಟುತನದಿಂದ ನಡೆಯುವುದು ಬಲು ಕೆಟ್ಟುದು. ನಮಗಿಂತ ಸಣ್ಣ ವಯಸ್ಸಿನವರೂ ಕೈಲಾಗದವರೂ ನಮ್ಮ ಸಂಗಡ ಆಡುತ್ತ ಇದ್ದಾರು ; ಆದುದರಿಂದ ಬಲು ಎಚ್ಚರಿಕೆಯಿಂದಿರಬೇಕು. “ನಾವಾಗಲೂ ಆಟದಲ್ಲಿ ಕಾಲವನ್ನು ಕಳೆಯಬಾರದು.