ಪುಟ:ಕರ್ನಾಟಕ ಗ್ರಂಥಮಾಲೆ ೯೮ - ನಡೆವಳಿ.djvu/೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕರ್ಣಾಟಕಗ್ರಂಥಮಾಲೆ ನ್ಯಾಯವಾಗಿ ನಡೆಯುವುದಕ್ಕೆ ನಾಚಿಕೊಳ್ಳಬಾರದು. ಒಂದುವೇಳೆ ನಾವು ಅಕಸ್ಮಾತ್ತಾಗಿ ತಪ್ಪು ಮಾಡಿದರೂ ಅದನ್ನು ಮರೆಮಾಚದೆ ಒಪ್ಪಿಕೊಂಡು ಮುಂದಕ್ಕಾದರೂ ಹಾಗಾಗದಂತೆ ಎಚ್ಚರಿಕೆಯಿಂದಿರಬೇಕು. (9) ಉತ್ಸಾಹ, ಉತ್ಸಾಹವೊಂದಿದ್ದರೆ ಎಂಥ ಬಡತನದಲ್ಲಿಯೂ ತೃಪ್ತಿ. ಕಷ್ಟದ ಲ್ಲಿಯ ಸಂತೋಷವುಂಟಾಗುವುದು. ವನುಷ್ಯನಿಗೆ ಚಿಂತೆಯೇ ಮುಪ್ಪು ಸಂತೋಷವೇ ಪ್ರಾಯ ಎಂದು ತಿಳಿದವರು ಹೇಳುವರು ಉತ್ಸಾಹಶೀಲರು ಸರದಾ ಉಲ್ಲಾಸದಿಂದ ಇರುತ್ತಾರೆ. ಸಂತೋಷವೂ ಉಲ್ಲಾಸವೂ ಪಕ್ಕಾ ಯಪದಗಳು ಸಂತೋಷಶೀಲರು ದೀರ್ಘಾಯುಷ್ಮಂತರಾಗಿರುವರು. ಸಂ ತೋಷದಿಂದ ಬಂದುಸಲ ನಕ್ಕ ನಗೆಯು ಹತ್ತು ಸೇರು ಅಮೃತರಸವನ್ನು ಕುಡಿದಷ್ಟು ಬಲಕಾರಿಯೆಂದು ಪಂಡಿತರು ಅಭಿರ್ಪಾಯಪಡುವರು. ಯಾರು ಸದಾ ಉತ್ಸಾಹದಿಂದ ಇರುತ್ತಾರೋ ಅವರು ಮುಂದಕ್ಕೆ ಬರುತ್ತಾರೆ. ಜುಗುಪ್ಪೆಪಡುತ್ತ ಅರ್ಧಮನಸ್ಸಿನಿಂದ ಗೋಳಾಡುತ್ತ ಮಾಡಿದ ಕೆಲಸವು ಕೆಟ್ಟು ಹೋಗುವುದೇ ನಿಜ, ಉತ್ಸಾಹಶಾಲಿಯಾದವನು ಕೆಲಸಕ್ಕೆ ಪ್ರಾರಂಭಿಸುವುದರಲ್ಲೇ ಆ ಕೆಲಸವು ಚೆನ್ನಾಗಿ ನೆರವೇರುವುದೆಂಬ ಶುಭ ಸೂಚನೆಯು ತೋರುವುದು, ಉತ್ಸಾಹವಿಲ್ಲದವನಾದರೋ ತಾನು ಮಾ ಡುವ ಕೆಲಸವು ಆಗುವುದೋ ಇಲ್ಲವೋ ಎಂದು ಸಂದೇಹಿಸುತ್ತ ಮುಂದೆ ಬರುವ ಕಷ್ಟಗಳನ್ನು ಕುರಿತು ಯೋಚಿಸುತ್ತ ಹೆದರಿ ಕೆಲಸಕ್ಕೆ ಕೈ ಹಾಕದೆ ಇರುವನು. ಹೀಗೆ ಹಿಂದೆಗೆವವನು ಒಂದುವೇಳೆ ನಿರ್ಬಂಧದಿಂದ ಅದನ್ನು ಮಾಡತೊಡಗಿದರೂ ಆದೇನೋಚೆನ್ನಾಗಿ ನಡೆವುದಿಲ್ಲ. ಹೇಗೆಂದರೆ ಯೋದನು ಎಷ್ಟೇ ಬಲಶಾಲಿಯಾಗಿದ್ದರೂ ಯುದ್ದ ಕಾಲದಲ್ಲಿ ಉತ್ಸಾಹ ವನ್ನು ಪಡೆಯದಿದ್ದರೆ ಅವನು ಸೋತು ಹೋಗುವುದೇ ಖಂಡಿತ. ಅವನಲ್ಲಿ ಎಷ್ಟು ಶಕ್ತಿಯಿದ್ದರೂ ವ್ಯರ್ಥವೇ, ಹೀಗೆಯೇ ಒಬ್ಬ ಸಂಗೀತಗಾರರು