ಪುಟ:ಕರ್ನಾಟಕ ಗ್ರಂಥಮಾಲೆ ೯೮ - ನಡೆವಳಿ.djvu/೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ನಡೆವಳಿ wwwwwwwwwwwwwwwwwwwwwwwwwwwwwwwwww ಎಷ್ಟೇ ಬುದ್ಧಿವಂತನಾಗಿ ಒಳ್ಳೆಯ ಕಾರೀರವನ್ನು ಪಡೆದಿದ್ದರೂ ಸಮಯ ದಲ್ಲಿ ಉತ್ಸಾಹಗೊಳ್ಳದಿದ್ದರೆ ಆತನ ಸಂಗೀತವು ಕಳೆಗಟ್ಟುವುದಿಲ್ಲ, ಉಲ್ಲಾಸವೂ ಉತ್ಸಾಹವೂ ತಾನಾಗಿ ಹುಟ್ಟ ಬೇಕಲ್ಲದೆ ನಿರ್ಬಂಧದಿಂದ. ಪಡೆಯತಕ್ಕುನಲ್ಲ. ಒಂದಾನೊಂದು ಕಾಲದಲ್ಲಿ ಹೊಟ್ಟೆಯಪಾಡಿಗಾಗಿ ಕಾಡಿ ನಲ್ಲಿ ಹಾರಾಡುತ್ತ ಓಡಾಡುತ್ತಲೂ ನಡು ನಡುವೆ ಉಲ್ಲಾಸದಿಂದ ಮಧು ರವಾಗಿ ಗಾನಮಾಡುತ್ತಲೂ ಇದ್ದ ಒಂದು ಹಕ್ಕಿಯನ್ನು ಒಬ್ಬ ಮನುಷ್ಯನು ತಂದು ಪಂಜರದಲ್ಲಿ ಕೂಡಿ ಬೇಕಾದಷ್ಟು ತಿಂಡಿಯನ್ನು ಮುಂದಿಟ್ಟು ' ಹಾಡು ಹಾಡು' ಎಂದು ಹೇಳುತ್ತ ಎಷ್ಟು ನಿರ್ಬಂಧಪಡಿಸಿದರೂ ಅದು ತನ್ನ ಸ್ವಾತಂ ತಕ್ಕೆ ಭಂಗಬಂದುದಕ್ಕಾಗಿ ಕೊರಗಿ ಸೇರುತ್ತ ಆಹಾರವನ್ನು ಕೂಡ ತೆಗೆದುಕೊಳ್ಳದೆ ಸತ್ತು ಹೋಯಿತೇ ಹೊರತು ಉಲ್ಲಾಸದಿಂದ ಒಂದು ಸಲವೂ ಹಾಡಲಿಲ್ಲ. ಉತ್ಸಾಹವೊಂದಿದ್ದರೆ ಯೋಗ್ಯತೆಯಲ್ಲಿ ಸ್ವಲ್ಪಮಟ್ಟಿಗೆ ನ್ಯೂನತೆ ಯಿದ್ದರೂ ಸರಿಮಾಡಿಕೊಳ್ಳಬಹುದು, ಉತ್ಸಾಹವೆಂದರೆ ಯಾವುದಾದ ಕೊಂದು ವಿಷಯವನ್ನು ಕುರಿತು ಸುಮ್ಮನೆ ಆಲೋಚಿಸುತ್ತ ಹೀಗೆಹೀಗೆ ಮಾಡಿದರೆ ಹೀಗೆ ಹೀಗೆ ಆಗುವುದೆಂದು ಆನಂದಪಟ್ಟು ಕೊಳ್ಳುವ ಕೆಲಸಕ್ಕೆ ಕೈಹಾಕದೆ ಪುಡಿಹಿಟ್ಟನ್ನು ಕುರಿತು ಯೋಚಿಸುತ್ತಿದ್ದ ಬ್ರಾಹ್ಮಣನಂತ ಸೋಮಾರಿಯಾಗಿ ಕುಳಿತಿರುವುದಕ್ಕೆ, ಕಷ್ಟಪಟ್ಟು ಕೆಲಸಮಾಡಿದರೇನೇ ಉತ್ಸಾಹಫಲವು ತೋರುವುದು. ಆದುದರಿಂದ ಆಲೋಚನೆಯನ್ನೂ ಅದಕ್ಕೆ ತಕ್ಕಂತೆ ಕೆಲಸವನ್ನೂ ಉತ್ಸಾಹದಿಂದ ಮಾಡಬೇಕು. ನಮ್ಮ ಜೀವಮಾನವನ್ನು ಬರೀವರ್ಷಗಳಿಂದ ಎಣಿಸಕೂಡದೆಂದು ನಾವು ಉತ್ಸಾಹದಿಂದ ಎಷ್ಟು ಕೆಲಸಗಳನ್ನು ಹೇಗೆ ಮಾಡಿದೇವೆ, ಎಂಬುದರ ಮೇಲೆ ಪರಿಗಣಿಸಬೇಕೆಂದೂ ಒಬ್ಬ ವಿದ್ವಾಂಸನು ಹೇಳಿರುವನು. ಈ ಹವನ್ನು ಹುಮ್ಮಸ್ಸು ಎಂದೂ ಕರೆಯುವುದುಂಟು. ದೊಡ್ಡವರ ಸ್ಥಿಕುನ - ಟ - ಟು