ಪುಟ:ಕರ್ನಾಟಕ ಗ್ರಂಥಮಾಲೆ ೯೮ - ನಡೆವಳಿ.djvu/೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ನಡೆವಳಿ ೫೭ ಇಷ್ಟೇ ಅಲ್ಲ, ಇದು ಸುತರಾಂಸುಳ್ಳು ಹೇಳುವುದಕ್ಕಿಂತಲೂ ಕಟ್ಟದು. ಕಣ್ಣು ಕೈಮುಂತಾದುವುಗಳ ಸಂಜ್ಞೆಗಳಿಂದ ಅಥವಾ ಸಮಯದಲ್ಲಿ ಸುಮ್ಮ ನಿರುವುದರಿಂದ ನಿಜಸ್ಥಿತಿಯನ್ನು ಮರೆಮಾಚುವುದು ಕೂಡ ಅಸತ್ಯವೇ, ನನಗೆ ಎಷ್ಟೋತೊಂದರೆಗಳು ಬಂದರೂ ಆಡಿದಮಾತಿಗೂ ಕೊಟ್ಟ ಭಾಷೆಗೂ ತಪ್ಪಬಾರದು. ಇಲ್ಲದ ಅಪರಾಧಗಳನ್ನು ಇತರರ ಮೇಲೆ ಹೊರಿಸುವುದು ಚಾಡಿಹೇಳುವುದು ಒಂದುಪಾಲುನಡೆದಿದ್ದರೆ ಲಕ್ಷ ಖಲೆಂದೂ ನರಿಯು ಹೆ ನೀಗಿದ್ದರ ಹುಲಿಯುಹೋಯಿತೆಂದೂ ಮಿತಿಮೀರಿದ ಅತಿಶಯೋ ಕಿಯಾಡುವುದು, ಅಪಸಾಕ್ಷಿಯನ್ನು ನುಡಿಯುವುದು, ಕೇಳುವವರ ಮನ ಸ್ಸಿಗೆ ಕೇವಲ ಗಾಬರಿಯಾಗುವರೀತಿಯಲ್ಲಿ ಎರಡರ್ಥಗಳು ತೋರುವಂತೆ ಮಾತಾಡಿ ಅವರದ್ದು ತಪ್ಪು ದಾರಿಗೆಳೆಯುವುದು, ಕಡೆಗೆ ಇತರರಿಗೆ ಒಳ್ಳೆಯ ದಾಗಲಿ ಎಂದು ಸುಳ್ಳು ಹೇಳವುದು, ಇಂತವುಗಳೆಲ್ಲಾ ಸತ್ಯಕ್ಕೆ ವಿರುದ್ಧವಾದ ಕೆಟ್ಟ ನಡತೆಗಳು. ನಾವು ಯಾವಾಗಲೂ-ಕಡೆಗೆ ಹುಡುಗಾಟದಲ್ಲಿ ಕೂಡ ಸುಳ್ಳು ಹೇಳಬಾರದು. ಹಾಗೆ ಹೇಳುವವರು ಕುರುಬರ ಹುಡುಗನ ಗತಿಗೆ ( II ಬಾಲಬೋಧೆಯಲ್ಲಿರುವ ಕಥೆ) ಸಮಾನವಾದ ಶಿಕ್ಷೆಯನ್ನು ಅನುಭವಿ ಸುವರು. ಮನೆಯಲ್ಲಿ, ಪಾಠಶಾಲೆಯಲ್ಲಿ, ಸರತ್ರ, ಸರದಾ ಸತ್ಯವನ್ನೇ ನುಡಿ ಯಬೇಕು. ಮುಖ್ಯವಾಗಿ ಯಾರು ಹೆಚ್ಚಾಗಿ ಹರಟುವರೋ ಅವರು ಸುಳ್ಳು ಹೇಳುತ್ತಾರೆ. ಆದುದರಿಂದಲೇ ಮಿತವಾಗಿ ಮಾತಾಡುವುದು ಯಾವಾ ಗ್ರೂ ಒಳ್ಳೆಯದು, ಯಾವಾಗಲೂ ಇದ್ದುದನ್ನು ಇದ್ದಂತೆಯೇ ಹೇಳ ಬೇಕೇ ವಿನಾತನಿಗೆ ತೋರಿದುದನ್ನೆಲ್ಲಾ ಬೆರಸಿ ಹೇಳಬಾರದು. ಇತರರನ್ನು ಮೆಚ್ಚಿಸುವದಕೋಸ್ಕರ ಕೆಲವರು ಸುಳ್ಳು ಹೇಳುವರು. ಇದು ಅಯುಕ್ತವಾದ ಮುಖಸ್ತುತಿ. ಈ ವಿಷಯದಲ್ಲಿ ಕನ್ನಟನ ಕಥೆಯು ಉತ್ತಮವಾದ ದೃಷ್ಟಾಂತವಾಗಿದೆ. ಯುರೋಪಿನ ಒಂದು