ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

2 ಕಲಾಸಂವಿಧಾನ (School discipty) ಕ್ಕೂ ಹೀಗೆ ಸಕಲ ಸ್ತ್ರೀಪುರುಷ ವಾಚಕವರ್ಗಕ್ಕೂ ಅನುಕೂಲವಾಗಬೇಕೆಂಬ ಹಾರಯಿಕೆಯಿಂದ ಈ ಪುಸ್ತ ಕವು ಓರೆಯಲ್ಪಟ್ಟಿದೆ. - ಈ ಪುಸ್ತಕವನ್ನು ಬರೆಯುವಾಗ ಹಲವುಬಗೆಯ ಸಲಹೆಗಳನ್ನೂ ಬುದ್ದಿವಾದಗಳನ್ನೂ ಪ್ರತ್ಯಕ್ಷವಾಗಿಯೂ ಗ್ರಂಥರೂಪವಾಗಿಯ ದಯ ಪುಲಿಸ ಉಪಕರಿಸಿದ ಮಹನೀಯರನ್ನು ಭಕ್ತಿ ಕೃತಜ್ಞತೆಗಳಿಂದ ವಂದಿಸು ತೇನೆ, ನನ್ನ ಇತರ ಕೆಲವು ಗ್ರಂಥಗಳಂತೆ ಇದನ್ನೂ ಕರ್ಣಾಟಕಕ್ರಂಥ ಮಾಲೆಗೆ ಪೋಣಿಸಿ ಭಾಷಾಮಾತೆಯನ್ನು ಸೇವಿಸುತ್ತಲೂ ತನ್ಮೂಲಕ ನನ್ನನ್ನು ಪ್ರೋತ್ಸಾಹಗೊಳಿಸುತ್ತಲೂ ನೀತಿಯವತಾರವೋ ಎಂಬಂತಿದ್ದ ಕೀರ್ತಿಶೇಷರಾದ ಮ|| ರಾ| ಬಾಪು ಸುಬ್ಬರಾವ್ ಬಿ. ಎ. ಯವರ ಆತ್ಮಕ್ಕೆ ಅಖಂಡಾನಂದವನ್ನು ಅನುಗ್ರಹಿಸಬೇಕೆಂದು ಅನಂತಮಹಿಮವೂ ಅನಂತ ನೂ ಆದ ಜಗದೀಶ್ವರನನ್ನು ಅನವರತವೂ ಪರ್ಥಿಸುತ್ತಿದೇನೆ. ನ ರಾ| ಸುಬ್ಬರಾಯರು ಕೈಗೊಂಡಿದ್ದ ಇಂತಹ ಕೆಲಸಗಳನ್ನು ಸಾಧ್ಯವಾದಮಟ್ಟ ಕೈಗೂಡಿಸುತ್ತ ಸುಪುತ್ರರೆಂದೆನಿಸಿಕೊಂಡಿರುವ ಮತ್ತು ಈ ಪುಸ್ತಕದ ಮುದ್ರಣಕಾರವನ್ನು ಪೂರ್ಣಗೊಳಿಸುವುದರಲ್ಲಿ ನನಗೋಸ್ಕರ ಹೆಚ್ಚು ಕ್ರಮವನ್ನು ವಹಿಸಿದ ವೆಟರಿನೆರಿ ಡಾಕ್ಟರ್‌ ಮ| ರಾ। ಬಾಪು ರಘುನಾಥ ರಾಯರವರಿಗೆ ನನ್ನ ಧನ್ಯವಾದಗಳನ್ನು ಸಮರ್ಪಿಸುತ್ತೇನೆ. 5-12-21 1 ಹಾಸನ ಜಿ. ಕೃಷ್ಣಶಾಸ್ತ್ರಿ). 1 ನೇ ಅಸಿಂಟ'ಮಾಸ್ಟರ್, ನಿರಲ್ಸ್ಕೂಲ್, ಹಾಸನ