ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೧೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦೬ ಕರ್ಣಾಟಕ ಗ್ರಂಥಮಾಲೆ wwwmmwwws m ಉದ್ದೇಶವಿರಬಹುದೇ ವಿನಾ ಬರೀ ಪಾರಮಾರ್ಥಿಕತೆಯಿಂದ ನಡೆಯುವ ಪುಣ್ಯಾತ್ಮರು ಬಲು ಮಂದಿಯಿಲ್ಲ, ಗುರುತು ಕಂಡವರನ್ನೆಲ್ಲಾ ಮಿತ್ರ ರಂದು ಭಾವಿಸಕೂಡದು ಏಕೆಂದರೆ ಥಳ ಥಳಸುವುದೆಲ್ಲಾ ಚಿನ್ನವಾಗಲಾರದು. ಆದರೆ ಹೀಗೆಂದು ಎಲ್ಲರಲ್ಲೂ ಸಂಶಯಪಡಬಾರದು, ಏಕೆಂದರೆ-ಪ್ರತ್ಯಕ್ಷ ವಾದರೂ ಪರಾಮರ್ಶಿಸಿ ನೋಡಬೇಕೆಂದು ಗಾದೆಯೇ ಹುಟ್ಟಿರುವುದು. ಮನುಷ್ಯರಾದ ನಾವು ವಿಚಾರಶಕ್ತಿಯುಳ್ಳವರೆಂದೂ ಭಗವತ್ಕೃಷಿ ಯಲ್ಲಿ ಅಗ್ರಗಣ್ಯರೆಂದೂ ಅಹಂಕಾರಪಡುವೆವಾದರೂ ಎಷ್ಟೋ ವೇಳೆ ಆರಿ ಪದ್ವರ್ಗಗಳಿಗೆ ಅಧೀನರಾಗಿ ಇಂದಿಯ ಪರವಶತೆಯಿಂದ ಅಕಾರಿಗಳನ್ನು ಮಾಡುತ್ತಿದೇವೆ. ಅಲ್ಲದೆ ಇಂಥ ರಾಗದ್ವೇಷಗಳ ಮೂಲಕ ಇತರರನ್ನು ನೋಡುವೆವೇ ಹೊರತು ನಿಷ್ಪಕ್ಷಪಾತವು ನಮ್ಮೆಲ್ಲರಲ್ಲೂ ಎಂದಿಗೆ ಬೇಕೂ ರುವುದೋ ಅಂದಿಗೆ ನಮ್ಮ ವಿಚಾರಶಕ್ತಿಯು ಸಾರ್ಥಕವಾಗುವುದು, ವಾಗ್ವಾದವು ಕೆಲವುವೇಳೆ ಪರಸ್ಪರ ಮನಸ್ತಾಪಗಳನ್ನೂ ದ್ವೇಷಾಸೂಯೆ ಗಳನ್ನೂ ಉಂಟುಮಾಡುವುದು, ವಾಗ್ವಾದದಲ್ಲಿ ನಾವೇ ಗೆದ್ದರೂ ಇದರಿಂದ ಒಂದೊಂದುವೇಳೆ ಸ್ನೇಹಕ್ಕೆ ಲೋಪಬರುವ ಸಂಭವವೂ ಕೂಡ ಉಂಟು. ಚರ್ಚಿಸಬೇಕಾದುದು ಅಪ್ಪು ಆವಶ್ಯಕವಾದರೆ ಅದಿರುಪಕ್ಷದವರು ಹೇಳು ವುದನ್ನೆಲ್ಲಾ ಶಾಂತಿಯಿಂದ ಕೇಳ ಬಳಿಕ ನಮ್ಮ ಕಾರಣಗಳನ್ನು ಸ್ಪಷ್ಟವಾಗಿ ಅವರಿಗೆ ತಿಳಿಯಹೇಳಬೇಕು, ನಾವು ಮಾತಿನಲ್ಲಿ ಅವರನ್ನು ಗೆದ್ದ ಮಾತ್ರ ದಿಂದಲೇ ಅವರ ಮನಸ್ಸನ್ನೂ ಅಭಿಪ್ರಾಯವನ್ನೂ ಒಪ್ಪಿಸಿ ಗೆದ್ದಂತ ಆಗ ಈಾರದು. ಆದುದರಿಂದ ಅವರ ಮನಸ್ಸನ್ನು ಒಪ್ಪಿಸತಕ್ಕುದೇ ಮುಖ್ಯವು. ಚರ್ಚೆಯಲ್ಲಿ ಮಾತ್ರವಲ್ಲದೆ ಸಾಮಾನ್ಯವಾಗಿ ಮಾತಾಡುವುದರಲ್ಲೂ ಕಡೆಗೆ ಇತರರ ಮಾತನ್ನು ಆಲಿಸುವುದರಲ್ಲೂ ವಿವೇಕವು ಆವಶ್ಯಕವು, ಇತರರು ಮಾತಾಡಿದುದನ್ನೆಲ್ಲಾ ಆಕ್ಷೇಪಿಸುವುದು, ಬೇಗ ನನ್ನ ಅಭಿಪ್ರಾಯಗಳನ್ನು ಹೇಳಲು ಆತುರಪಡುವುದು, ಇಂಥಾದ್ದೆಲ್ಲ ಒರಟುತನವೆನಿಸುವುದು