ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ಣಾಟಕ ಗ್ರಂಥಮಾಲೆ ಎಷ್ಟು ಕೆಟ್ಟುದೋ, ಉಪಕಾರಗಳನ್ನು ಮಾಡಿದಮಾತ್ರದಿಂದಲೇ ಮತ್ಯಾ ದೆಯನ್ನು ಬಿಟ್ಟುಬಿಡಬೇಕೆಂಬುದೂ ಅಷ್ಟೇ ಕೆಟ್ಟುದು. ಇತರರಿಗೆ ಮೇಲನ್ನುಂಟುಮಾಡುವುದರಲ್ಲಿ ಮನೋವಾಕ್ಕರಗ ಳಂಬ ಮೂರರ ಒಳ್ಳೆಯತನವೂ ಪರಸ್ಪರವಾಗಿ ಹೆಣೆದುಕೊಂಡೇ ಇದೆ ಆದು ದರಿಂದ ಮಾಡುವ ಸತ್ಕಾರದ ಜತೆಗೆ ಆಡುವ ಸದಾಕ್ಯವೂ ಆವಶ್ಯಕ. ಇವೆ ರಡೂ ಮನಸ್ಸಿನ ಸ್ಥಿತಿಯನ್ನು ಚೆನ್ನಾಗಿ ವ್ಯಕ್ತಪಡಿಸುವುವು. ಯಾವ ಅಭಿಪಯದಿಂದ ಇತರರು ತಮಗೆ ಒಳ್ಳೆಯತನವನ್ನು ತೋರಿಸಿರುವರು ಎಂಬುದನ್ನು, ತಿಳಿಯಬೇಕಾದರೆ ಉಸಕಾರಮಾಡಿದವರ ನಡೆನುಡಿಗಳನ್ನು ಪರಿಶೀಲಿಸಿ ನೋಡುವರು. ಅಂದರೆ ಮನೋಭಾವಗಳನ್ನು ತೋರ್ಪಡಿ ಸುವುದರಲ್ಲಿ ಕಾರದಜತೆಗೆ, ವಾಕ್ಕಿನ ಮಹಿಮೆಯೂ ಮುಖ್ಯವಾದುದೆಂದಾ ಯಿತು. ಮಾತಿಗೆ ತೂಕವು ಹೆಚ್ಚು ಲೋಕದಲ್ಲಿ ಅನಂತವಾದ ಕೆಲಸಗಳು ನಡೆಯುತ್ತಲಿರುವುದು ಮಾತಿನ ಗೌರವದಿಂದಲೇ, ಒರಟುತನದಿಂದ ದ.ಡುಕಿ ಕಠಿನವಾಗಿ ಮಾತಾಡದೆ ಮೃದುವಾಗಿ ವಿನಯ ಪೂರಕವಾಗಿ ಆಡುತ್ತಲಾ ಇದರಸಂಗಡಲೇ ಒಳ್ಳಯಕೆಲಸಗಳನ್ನು ಮಾಡುತ್ತಲೂ ಬಂದರೆ ಆ ಕಲಸ ಗಳು ಮತ್ತಷ್ಟು ಚೆನ್ನಾಗಿ ನಡೆದು ಹೆಚ್ಚು ಫಲಗಳನ್ನು ಕೊಡುವುವು. ಒರಟುವಾತು ಇತರರಮನಸ್ಸನ್ನು ನೋಯಿಸುವುದು, ಆದುದರಿಂದ ಮಾಡು ವಕಲಸ ಆಡುವ ಮಾತು ಇವೆರಡೂ ಸರಿಯಾಗಿರಬೇಕೆಂದಾಯಿತು, ಹಾಗೆ ನಮ್ಮ ನಡೆನುಡಿಗಳೆರಡೂ ಒಳ್ಳಯವಾಗಿದ್ದರೆ ಸಾಕು. ಇದರಿಂದ ಇತರರಿ ಗೇನೋ ಆಗಬೇಕಾದಷ್ಟು ಪ್ರಯೋಜನವು ಆಗಿಯೇ ಆಗುವುದು. ಆಗ ನಾವು ಏನೇನೂ ಪ್ರಯತ್ನ ಪಡದಿದ್ದರೂ, ಇತರರು ನಮ್ಮನ್ನು ಒಳ್ಳೆಯವ ರಂದು ಹೇಳುವರು.