ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೧೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬೯ ನಡೆವಳಿ wwwmowwom ಗೋಚರವಾಗುವಾಗ ನಮಗೆ ಯಾವ ಕೆಡುಕನ್ನೂ ಮಾಡಲಾರರು. ಇದಕ್ಕೆ ಬದಲಾಗಿ ಒಳ್ಳಯಯೋಚನೆಗಳನ್ನು ಹುಟ್ಟಿಸಿ ನನಗೆ ಒಳ್ಳೆಯದನ್ನೇ ಮಾಡಿ ಯಾರು, ಹೇಗೆಂದರೆ.ಕೈಕಯಿ, ದುಧನ, ತೈವರ್‌, ಔರಿಂಗ್ ಸೇಬ್, ಟಿಪ್ಪು ಮೊದಲಾದವರ ವಿಷಯವನ್ನು ನಾವು ಓದಿದರೆ ಅವರಂತ ನಾವು ಆಗಬಾರದು ಎಂಬ ಒಳ್ಳೆಯ ತಿಳಿವಳಿಕೆಯುಂಟಾಗುವುದೇ ವಿನಾ ನಮಗೆ ಯಾವ ಭಯವೂ ಇಲ್ಲ, ಅಥವಾ ಅವರಲ್ಲಿದ್ದಂಥ ಕೂರಬುದ್ದಿ ಯ ಹುಟ್ಟುವುದಿಲ್ಲ. ಆದುದರಿಂದಲೇ ವುಸ್ತಕಗಳು ಗುಣೈಕ ಪಕ್ಷಪಾತಿಗೆ ಳು, ಈ ಪ್ರಪಂಚದಲ್ಲಿ ದೊರೆಯಬಹುದಾದ ಸಕಲ ಸಂಪತ್ತು ಗಳನ್ನೂ ಪಡೆ ದಿಗೆ ತಕ್ಕೆ ಪರಮ ಪುಣ್ಯ ಕಾಲಿಗಳು ಕೂಡ ತಮಗೆ ಗ್ರಂಥಕಾಲಕ್ಷೇಪದಿಂದಲೇ ನಿಜವಾದ ಸುಖವುಂಟಾಗುವುದೆಂದು ಹೇಳುತ್ತಾರೆ, ಪುಸ್ತಕವನ್ನೋದುತಿರು ವಾಗ ಅಲ್ಲಿ ಬಹುಸಾರಸ್ಯವಾದ ಅಂಶವೇನಾದರೂ ಬಂದರೆ ಆಗ ಮನಸ್ಸೆಲ್ಲಾ ಅದರ ಮೇಲೆಯೇ ಇರುವುದರಿಂದ ಅನ್ನೊದಕಗಳಾಗಲಿ ಇತರ ಯಾವ ಸುಖ ಭೋಗಗಳಾಗಲಿ ಬೇಕಾಗುವುದಿಲ್ಲ, ಮತ್ತು ಎಷ್ಟು ಗದ್ದಲವಾದರೂ ಮನ ಸ್ಸು ಅಲ್ಲಿಂದ ಕದಲುವುದಿಲ್ಲ. ಓದುವ ಅಭ್ಯಾಸವನ್ನು ಚೆನ್ನಾಗಿ ಪಡೆದಿರು ವವರಿಗೆ ಪ್ರಪಂಚದ ಸಮಸ್ತ ಸುಖಸಾಧನಗಳನ್ನೂ ಒದಗಿಸಿ ಪ್ರಸ್ತಕಗಳನ್ನು ಮಾತ್ರಕೊಡದಿದ್ದರೆ ನಿಜವಾಗಿಯಅವರಿಗೆ ಮರಣ ಸಂಕಟವುಂಟಾಗವುದು, ಎಷ್ಟೋ ಸಂದರ್ಭಗಳಲ್ಲಿ ಪ್ರಪಂಚದ ಪ್ರಕೃತಿ ಸೌಂದಯ್ಯ ಮೊದಲಾದು ವನ್ನು ಪ್ರತ್ಯಕ್ಷವಾಗಿ ನೋಡುವುದಕ್ಕಿಂತ ಬಣ್ಣದ ಚಿತ್ರಗಳಲ್ಲಿ ಭಾವ ಚಿತ್ರಗಳಲ್ಲಿ ಅಥವಾ ಪ್ರತಿ ಬಿಂಬಗಳಲ್ಲಿ ನೋಡುವುದು ಹೇಗೆ ಹೆಚ್ಚು ಸಂತೋಷಕರವೋ ಹಾಗೆಯೇ ಅನೇಕ ವಿಷಯಗಳನ್ನು ಗ್ರಂಥಗಳಲ್ಲಿ ಓದಿ ತಿಳಿಯುವುದು ಬಹಳ ಆಹ್ಲಾದಕರವಾಗಿರುವುದು, ಓದುವಾಗ ನನ್ನ ಮನಸ್ಸಿಗೆ ಉಲ್ಲಾಸವುಂಟಾಗದಿದ್ದರೆ ಅದಕ್ಕೆ ನಮ್ಮ ತಪ್ಪೋಕಾರಣ, ಪುಸ್ತಕ ದ್ದಲ್ಲ. - ಓದುವುದರಲ್ಲೂ ಬುದ್ದಿವಂತಿಕೆಯಿರಬೇಕು, ಅರ್ಥವನ್ನು ತಿಳಿದು ಕೊಳ್ಳದೆ ಗಿಳಿಯಂತೆ ಎಷ್ಟು ಸಲವಾಯಶಾಶ ಮಾಡಿದರೂ ವ್ಯರ್ಥವೇ. ಪ್ರತಿಯೊಬ್ಬರೂ ತಮಗೆ ಚೆನ್ನಾಗಿ ಓದುವುದಕ್ಕೂ ಬರೆಯುವುದಕ್ಕೂ