ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೨೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೮೬ ಕರ್ಣಾಟಕತಂದಿಸಿ ಮುಲುಗುತ್ತ ಮಲಗಿದ್ದು ಅವರು ನನ್ನನ್ನು ಸಮೀಪಿಸಿದ ಕೂಡಲೆ ಅವರನ್ನು ಕುರಿತು ನಾನು ನಡೆಯಲಾರೆನೆಂದೂ ಮೊಣಕಾಲಿಗೆ ಏಟುಬಿದ್ದಿದೆಯೆಂದೂ ಸುಳ್ಳು ಹೇಳಿ ಅವರ ಸಹಾಯವನ್ನು ಬೇಡಿದೆನು, ರಜಪೂತನು ಕನಿಕರ ದಿಂದ ನನಗೆ ಉಪಚಾರಮಾಡಿ ಸ್ವಲ್ಪ ದೂರ ತನ್ನ ಸೇವಕನೊಬ್ಬನಿಗೆ ನನ್ನನ್ನು ಎತ್ತಿ ಕೊಂಡು ಬರುವಂತೆ ಕಟ್ಟುಮಾಡಿದನು ; ಸೇವಕನು ಹಾಗೆಯೇ ಮಾಡಿದನು. ಅವರ ಪರಸ್ಪರ ಸಂಭಾಷಣೆಯು ನನಗೆ ಕೇಳಿಸಬಾರದೆಂದು ಅವರ ಹಿಂದೆ ಇದ್ದ ಬ್ರಾಹ್ಮಣನು ಗಲಭೆ ಮಾಡುತ್ತಿದ್ದನು. ಆದರೂ; ವಿಜಯಸಿಂಹನು ಆ ರಾಜಪುತ್ರನ ಮೂಲಕ ರಾಜಸಿಂಹನಿಗೆ ಆವುದೋ ರಹಸ್ಯವನ್ನು ಹೇಳಿ ಕಳುಹಿರುವನೆಂಬುದು ಮಾತ್ರ ತಿಳಿದು ಸನ್ನಿಧಿಗೆ ವಿಜ್ಞಾ ಪಿಸಲು ಬಂದೆನು. ಚಾರನ ಮಾತಿನಿಂದ ಸಾದತ್ ವಾನನು ಮತ್ತೂ ಭಯಪಟ್ಟವ ನಾಗಿ ಆಗಲೇ ಎರಡುಸಾವಿರ ಸೈನ್ಯವನ್ನು ಕರೆಯಿಸಿ ಅರಣ್ಯ ಮಾರ್ಗದಲ್ಲಿ ಹೋಗುತ್ತಿದ್ದ ರಾಜಪುತ್ರನನ್ನೂ ಬೆಲ್ಲರನ್ನೂ ಹಿಡಿದು ತರಬೇಕೆಂದು ಆಜ್ಞಾ ಪಿಸಿ ಕಳುಹಿದನಲ್ಲದೆ, ಎರಡು ಕಡೆಗಳಿಂದಲೂ ರಾಜಪುತ್ರರು ತಮ್ಮ ಮೇಲೆ ಯುದ್ಧಕ್ಕೆ ಬರುತ್ತಿರುವರೆಂದೂ ತತ್‌ಕ್ಷಣವೇ ೪೦೦೦ ಸೈನ್ಯ ವನ್ನು ಸಹಾಯಕ್ಕಾಗಿ ಕಳುಹಬೇಕೆಂದೂ ಬಾದಷಹನಿಗೆ ಬರೆದು ಕಳು ಹಿದನು. ಸಾದತ್ ಖಾನನು ಕಳುಹಿದ ಸೈನಿಕರು ಉದಯಪುರ ಮಾರ್ಗ ವಾಗಿ ಹೋಗುತ್ತಿದ್ದರು. ಶ್ಯಾಮಲಪಂಡಿತನೂ ಶಿವಸಿಂಗನೇ ಮೊದಲಾ ದವರೂ ಉದಯಪುರವನ್ನು ಸಮೀಪಿಸಿದ್ದರು. ಶ್ಯಾಮಲಪಂಡಿತನು ಶಿವ ಸಿಂಗನನ್ನು ನೋಡಿ-“ಅಯ್ಯಾ ! ಇನ್ನು ನೀವು ಹೋಗಬಹುದು ; ನಾನು ಉಹಯಪುರವನ್ನು ಸೇರುವೆನು. ಇನ್ನು ನನಗಾವ ಭಯವೂ ಇಲ್ಲ.” ಎಂದನು. ಅದಕ್ಕೆ ಶಿವಸಿಂಗನು ನಗುತ್ತಾ “ಪಂಡತಜೀ ! ಮಾರ್ಗದಲ್ಲಿ ನಿಮ್ಮನ್ನು ಯಾರಾದರೂ ಪೀಡಿಸಿ ದರೂ ?” ಎಂದು ಕೇಳಲು,