ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೨೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

160 ಕರ್ಣಾಟಕ ನಂದಿನಿ ೧ -- ವಿ. SN ಮಸಾವದೆ:- (ಹಿಗ್ಗಿ ಹಿಗ್ಗಿ ಹಿ-ಸಿ- ನಾನೇ ಮಸಾವದ್ ; ನಿಮ್ಮ ಅನುಗ್ರಹಕ್ಕೆ ಪಾತ್ರನಾದ ಮಸಾವ‌ ನಾನೇ, ಆಜ್ಞೆ ಮಾಡಿರಿ; ಏನು....ಎಂದು ಕೈ ನೀಡಿ ನಿಂತು ಪ್ರಾರ್ಥಿಸಿದನು. ಇ೦ದಿರಾ:- ಈಗ ನೀನು ಎಲ್ಲಿಗೆ ಹೋಗುತ್ತಿರುವೆ ? ಮಸಾ:--ಎಲ್ಲಿಗಾದರೂ ಹೋಗಲು ನನಗೇನು ಕೆಲಸ ? ನಿಮ್ಮನ್ನು ನೋಡಲೋಸುಗವೇ ಬಂದೆನು. ಇಂದಿರಾ:--ಸುಳ್ಳಾಡಬೇಡ, ನಿಜವನ್ನು ಹೇಳು. ಮಸಾ: ..ನಿಮ್ಮಲ್ಲಿಯೂ ನಾಡು-ನೆ ? ಉದಯಪುರ ಬೇಗಂ ರಾಹೇಬರವರ ಅನುಗ್ರಹವಿದ್ದರೆ ನನ್ನ ಜೀವನವೆಲ್ಲಾ ನಿಮ್ಮೊಡನೆಯೇ ಇದೆಯಲ್ಲವೆ ? ಇಂದಿರಾ:.-ಮಸಾನದ್, ಈಗ ನನ್ನ ಹೃದಯದಲ್ಲಿ ಒಂದು ಚಿಂತೆ ತುಟ್ಟಿ ಬಾಧಿಸುತ್ತಿರುವದು ; ಏನು ಮಾಡಲಿ ? ಮಸಾ:--ಹಾಗಾದರೆ ನನಗೇಕೆ ಹೇಳಲಿಲ್ಲ? ನಾನಿರುವಾಗ ನಿಮಗೆ ಕವ ಕೊರತೆಯನ್ನಾಗಲಿ ಬರಗೊಡುವೆನೆ ? ಅಪ್ಪಣೆಯಾದರೆ ತಮ್ಮ ಆಜ್ಞೆ ರನ್ನು ಶಿರಸಾವಹಿಸಿ ನಿಮಿಷ ಮಾತ್ರದಲ್ಲಿ ನೆರೆವೇರಿಸುವೆನು. ಇಂದಿರಾ:- ಅಂದು ನೀನು ಕರೆದುಕೊಂಡು ಬಂದಿದ್ದ ಛೋಟು ೦ಗನೆಂಬ ಚಿತ್ರಗಾರನು ಮರುದಿನ ಬರುವುದಾಗಿ ಹೇಳಿ ಹೋದವನು ಬರಲಿ ವೇಕೆ ? ಮಸಾ:--ನಾನಿರುವಾಗ ಅವನಿಂದೇನು ? ಇಂದಿರಾ:-ನೀನು ಬೇರೆಯಾಗಿ ಭಾವಿಸಬೇಡ. ಅವನೂ ನಾನೂ ಬ್ಬರೂ ಒಂದೇ ಗ್ರಾಮದಲ್ಲಿ ಬೆಳೆದವರು. ಚಿಕ್ಕಂದಿನಿಂದಲೂ ಆತನು ನಗೆ ಪರಿಚಿತನು. ಆದುದರಿಂದ ಆತನಲ್ಲಿ ನಮ್ಮ ತಾಯಿತಂದೆಗಳ ಮಾಚಾರವನ್ನು ಕೇಳಿ ತಿಳಿಯಬೇಕೆಂದು ಆಶಿಸಿದ್ದೆನು. ಆದರೇನು, ಆತನು