ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೨೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೯೪ ಕರ್ಣಾಟಕ ನಂದಿನಿ “ ಪಿಶ್ವಾಸನೀಯರಾದ ರಾಜಪುತ್ರರೇ ! ಸರದಾರರೇ !! ನಾನು ಇಹಲೋಕವನ್ನು ಬಿಡುತ್ತಿರುವೆನು. ನನಗಾಗಿ ವಿಚಾರಪಡಬೇ ಡಿರಿ! ಶರೀರವು ಕ್ಷಣಭಂಗುರುವೇ ಹೊರತು ಸ್ಥಿರವಾದುದಲ್ಲ. ಮುಂದೆ ನನ್ನ ದೊಡ್ಡ ಮಗನಾದ ಮು ಆಜಮನು ಬಹು ಕ್ರೂರನಾದುದರಿಂದ ಅವನಿಗೆ ರಾಜ್ಯ ವನ್ನು ಕೊಡದೆ ನನ್ನ ಎರಡನೆಯ ಮಗನಾದ ಅಜೇಮನಿಗೆ ಪಟ್ಟವನ್ನು ಕಟ್ಟಿ ನನ್ನನ್ನು ಸೇವಿಸಿದಂತೆಯೇ ಆತನನ್ನೂ ಸೇವಿಸುತ್ತ ಬರಬೇಕು. ಇದಕ್ಕೆ ನೀವು ಸ್ವಲ್ಪವೂ ಸಂದೇಹಪಡುವುದಿಲ್ಲ ವೆಂದು ನಂಬಿರುವೆನು. ಆಲಂಘಿ'ರ್ ಬಾದಶಹ.?' ಹೀಗೆ ಎಲಿಖಿತವಾದ ಪತ್ರಗಳಿಗೆ ಕಔರಂಗಜೇಬನ ಮುದ್ರೆಯುಂಗರದ ಮುದ್ರೆಯನ್ನೊತ್ತಿ ಕಳುಹಿದಳು, ಮುಆಜಮನು ವಯಸ್ಕ ನಾದುದರಿಂದ ಆತನಿಗೆ ರಾಜ್ಯವನ್ನು ಕೊಟ್ಟರೆ ತನ್ನ ಅಪ್ಪಣೆಯಂತೆ ನಡೆಯುವದಿಲ್ಲವೆಂದು ವಯಸ್ಸಿನಲ್ಲಿ ಚಿಕ್ಕವನೂ ರಾಜ್ಯಭಾರವೆಂದರೇನೆಂಬುದನ್ನರಿಯದವನೂ ಆದ ಅಜೀಮನಿಗೆ ಪಟ್ಟವನ್ನು ಕಟ್ಟಿದರೆ, ಆತನು ವಯಸ್ಕ ನಾಗುವವರೆಗೆ ತಾನೇ ರಾಜ್ಯವನ್ನಾಳಬಹುದೆಂದೂ ಯೋಚಿಸಿ, ರೋಷನಾರೆಯು ಈ ರೀತಿಯಾಗಿ ಬರೆದಳು. ಸಾಮಂತರಾಜರೆಲ್ಲರೂ ಈ ಕಾಗದದಿಂದ ಅನುಮಾನಪಟ್ಟು ಆವ ಒಗೆಯಾಗಿಯೂ ಉತ್ತರವನ್ನೇ ಕೊಡದೆ ಸುಮ್ಮನಿದ್ದರು. ಸಾಮಂತರಾಜ ರಲ್ಲಿ ಕೆಲವರು ನಿಜಾಂಶವನ್ನರಿಯಲು ಇಲ್ಲಿಗೆ ಬಂದು ಅರಮನೆಯ ದ್ವಾರ ಪಾಲಕರಿಗೆ ಸಾವಿರಾರು ರೂಪಾಯಿಗಳ ಲಂಚವನ್ನು ಕೊಟ್ಟರೂ ನಿಜಾಂಶ ವು ತಿಳಿಯಲಿಲ್ಲ. ಜೀವಸಹಿತನಾಗಿರುವಾಗ ಬಾದಶಹನ ದರ್ಶನಾಲಾಭವು ಒಂದು ಸಲ ವಾದರೂ ತನಗೆ ಲಭಿಸುವುದೋ ಇಲ್ಲವೋ ಎಂಬವಾಗಿ ಉದಯಪ್ರತಿಯು ವಿಷಣ್ಣ ಹೃದಯಳಾಗಿ ಅನವರತವೂ ಪರಿತಪಿಸುತ್ತಿದ್ದಳು. ಇಂದಿರೆಯ ಮನವೊಲಿದಂತೆ ಮಾಡಿಕೊಂಡು ಅವಳಿಂದಲಾದರೂ ತನ್ನ ಅಭೀಷ್ಟವನ್ನು