ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೨೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೦೨ ಕರ್ಣಾಟಕ ನಂದಿನಿ ಪೈರನ್ನು ತತ್‌ಕ್ಷಣವೇ ಹೋಗಿ ಸ್ವಲ್ಪ ಹೊತ್ತಿನೊಳಗಾಗಿ ಎಂದು....“ ಬಾದ ಶಹರು ಉದಯಪುರಿಬೇಗಮರ ಮಹಲಿನಲ್ಲಿರುವರು” ಎಂದು ಹೇಳಿದನು. ರೋಷನಾರೆಯ ಕೋಪವಿಮ್ಮಡಿಯಾಯಿತು ; ಸಿಂಹದಂತೆ ಗರ್ಜನೆಮಾಡಿ, ಬಾದಶಹರು ಬರುವವರೆಗೂ ಕಾದಿದ್ದು ಕರೆದುಕೊಂಡು ಬರುವಂತೆ ಹೇಳಿ? ಮತ್ತೆ ಕಳುಹಿದಳು. ಫರುಕ್ ಪೈರನು ಪ್ರತಿಮಾತಾಡದೆ ಹೊರಟುಬಂದು ಉದಯಪುರಿಯ ಮಹಲಿನಲ್ಲಿಯೇ ಕಾದುಕೊಂಡಿದ್ದನು. ಆದಿನ ಕೇರಂಗ ಜೇಬನು ರಾತ್ರಿಯವರೆಗೂ ಹೊರಗೆ ಬರಲೇ ಇಲ್ಲ, ಫರುಕ್ ಪೈರನು ಆ ವರೆಗೆ ಅಲ್ಲಿಯೇ ಕಾದಿದ್ದು ಆತನು ಬಂದ ಕೂಡಲೆ ಸಲಾಮುಮಾಡಿ ರೋಷ ನಾರೆಯ ಅಪ್ಪಣೆಯನ್ನು ನಿವೇದಿಸಿದನು ಔರಂಗಜೇಬನು ತನಗೆ ಈಗ ಬರಲಾಗುವುದಿಲ್ಲವೆಂದೂ ರಾತ್ರಿ ಎಂಟುಘಂಟೆಯಾದಮೇಲೆ ಬರುವೆನೆಂದೂ ಹೇಳಿ ಕಳುಹಿಸಿದನು. ಫರುಕ ಪೈರನು ರೋಷ ನಾರೆಗೆ ಈ ಸಂಗತಿಯನ್ನು ತಿಳುಹಲು, ಅವಳು ಆತ್ಯಾಗ್ರಹದಿಂದ ಅವನನ್ನು ಹೊರಗೆ ಕಳುಹಿಬಿಟ್ಟಳು. ಇಪ್ಪತ್ತನಾಲ್ಕನು ಪ)ಕರಣ. (ಲೆಗಂದಾಯ) ಔರಂಗಬೇಸಿಗೆ ಸಂಪೂರ್ಣ ವಾಗಿ ಆರೋಗ್ಯಲಾಭವಾಯಿತು. ಮೊದಲಿನಂತೆಯೇ ತನ್ನ ಕೆಲಸಗಳನ್ನು ನಿರ್ವಹಿಸುವಂತಾದನು, ರೂಪನಗ ರಕ್ಕೆ ಸೈನ್ಯವನ್ನು ಕಳುಹಲು ನಿಶ್ಚಯಿಸಿದನು : ಕನ್ನಾಗಿ ಆರೋಗ್ಯಲಾಭವಾ ದಮೇಲೆ ವೈದ್ಯರಿಗೆ ಅನೇಕ ಬಹುಮಾನಗಳನ್ನು ಕೊಟ್ಟನಲ್ಲದೆ ಫಕೀರರಿಗೆ ಸಂತೃಪ್ತಿಯಾಗಿ ಅನ್ನವನ್ನು ಹಾಕಿಸಿ ಹೊಸ ಮಸೀದಿಗಳನ್ನು ಕಟ್ಟಿಸಿದನು. ಇವೆಲ್ಲ ಕ್ಕೂ ವಿಶೇಷ ದ್ರವ್ಯವಾಯಿತು. ಔರಂಗಜೇಬನು ತನಗೆ ಇಂತಹ