ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೨೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧6 | ಕರ್ಣಾಟಕ ನಂದಿನಿ ಪಟ್ಟೆ, ಆದುದರಿಂದ ಈ ಜನ್ಮದಲ್ಲಿ ನಿನ್ನ ಕೋರಿಕೆ ನೆರೆವೇರುವುದಿಲ್ಲ. ಮುಂದಿನ ಜನ್ಮದಲ್ಲಿ ನೀನು ತರುಷ್ಯನಾಗಿ ಹುಟ್ಟಿ ರಾಜವೈಭವವನ್ನು ಅನು ಭವಿಸುವೆ” ಎಂದು ಹೇಳಿ, ಅಂತರ್ಧಾನನಾದನು. ಆ ಬ್ರಾಹ್ಮಣನೇ ಈಗ “ ತಾನೀಷಾ ” ಸುಲ್ತಾನನಾಗಿರುವನು. ಶಿಷ್ಯ :-(ಆಶ್ಚರ್ಯದಿಂದ ಗುರುಜೀ ! ಆ ಮಹಾನುಭಾವನನ್ನು ನೋಡುವುದಕ್ಕಲ್ಲವೇ ನಾವೀಗ ಹೋಗುತ್ತಿರುವುದು ? ಗುರು :- ಅಲ್ಲ ; ಆತನಲ್ಲಿ ನಮಗೆ ಕೆಲಸವೇನೂ ಇಲ್ಲ, ಆತನ ಮುಖ್ಯಮಂತ್ರಿಯೂ ಹಿಂದೂ ಮತಾಭಿಮಾನಿಯೂ ರಾಜಕಾರ್ಯ ಧುರಂಧ ರನೂ ಆದ “ ಮಾದನ್ನ ಪಂತುಲು” ಎಂಬಾತನನ್ನು ನೋಡಲು ಹೋಗುತ್ತಿ ರುವೆವು, ಹೀಗೆ ನಾವು ಮಾತನಾಡುತ್ತ ಹೋದರೆ ನಮ್ಮ ಕೆಲಸವು ನೆರ ವೇರುವುದಿಲ್ಲ, ಸೂರ್ಯೋದಯದಿಂದ ಹಿಡಿದು ಒಂದು ಜಾವದವರೆಗೂ ಆತನು ಶಿವಪೂಜೆ, ಪಾರಾಯಣ, ಪುರಾಣಶ್ರವಣ ಮೊದಲಾದ ಮತ ವಿಷಯ ಕಾರ್ಯಗಳನ್ನು ಮಾಡುವನು. ಆ ಕಾಲದಲ್ಲಿ ಪಂಡಿತರೂ ವಿದ್ವಾಂಸರೂ ಗಾಯಕರೂ ನಿರಾತಂಕವಾಗಿ ಆತನ ಮನೆಗೆ ಹೋಗಬಹುದು ; ಮತ್ತು ತಮ್ಮ ತಮ್ಮ ವಿದ್ಯಾ ಪ್ರಭಾವವನ್ನು ತೋರಿಸಿ ಬಹುಮಾನಗಳನ್ನು ಪಡೆಯ ಬಹುದು. ಆದುದರಿಂದ ಜಾಗ್ರತೆಯಾಗಿ ನಡೆ. - ಬ್ರಾಹ್ಮಣನು ತಲೆಯಿಂದ ನಡೆಯಲಾರಂಭಿಸಿದನು : ಶಿಷ್ಯನು ಗುರು ಪಿನ ಜೊತೆಗೆ ನಡೆಯಲಾರದೆ ಆತನ ಹಿಂದೆಯೇ ಓಡಿ ಓಡಿ ಬರುತ್ತಿದ್ದನು ಸ್ವಲ್ಪ ಹೊತ್ತಿಗೆ ಪಟ್ಟಣವನ್ನು ಪ್ರವೇಶಿಸಿ ಬರುತ್ತಿರುವಲ್ಲಿ ಅಗಾಧವಾದ ಕಲ್ಲು ಕಟ್ಟಡದ ಎತ್ತರವಾದ ಆವರಣದ ಗೋಡೆಯಿಂದ ಸುತ್ತುವರಿಯಲ್ಪ ಟ್ಟುದಾಗಿಯೂ ಅಭೇದ್ಯವೂ ಎತ್ತರವೂ ಆದ ಹೆಬ್ಬಾಗಿಲಿನಿಂದ ಕೂಡಿದುದಾ ಗಿಯೂ ನಾನಾವಿಧದ ಬಣ್ಣ ಬಣ್ಣಗಳಿಂದ ಚಿತ್ರವಿಚಿತ್ರವಾಗಿ ಚಿತ್ರಸಲ್ಪಟ್ಟು ದಾಗಿಯೂ ಇದ್ದ ಒಂದು ಭವ್ಯ ಭವನವು ಗೋಚರವಾಯಿತು. ಭವನದ ಹೆಬ್ಬಾಗಿಲು ಭಯಂಕರಾಕಾರಿಗಳಾದ ಸಿದ್ಧಿ ಭಟರಿಂದ ಸುರಕ್ಷಿತವಾಗಿದ್ದಿತು.