ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೨೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೨ ಕರ್ಣಾಟಕ ನಂದಿನಿ ವಾರೆಂದು ಕೇಳಿದನು. ಭಟರು ನಮ್ಮ ಸಥಿಕ ಬ್ರಾಹ್ಮಣನನ್ನು ಬೆದರಿಸಿ ಓಡಿಸಿದರು ; ಆದರೂ ವ್ಯವಹಾರಜ್ಞನಾದ ನಮ್ಮ ಬ್ರಾಹ್ಮಣನು ಕೂಡಲೆ ತನ್ನಲ್ಲಿದ್ದ ಒಂದು ರೂಪಾಯಿಯನ್ನು ತೆಗೆದು ಆ ಭಟರ ಕೈಗೆ ಕೊಟ್ಟನು. ಆ ಶ್ವೇತದೇವತೆ ಕೈಗೆ ಬಿದ್ದ ಕೂಡಲೆ ಭಟರ ಕೋಪ-ತಾಪಗಳೆಲ್ಲವೂ ಹಾರಿ ಹೋದುವು. ಅವರು ವಿನೀತರಾಗಿ ಈಗ ಕಾಡುತ್ತಿರುವವನು “ಭದ್ರಾ ಚಲ ರಾಮದಾಸನು” ಎಂದು ಹೇಳಿ ಅವನು ಕಾರಾಗ್ರಹದಲ್ಲಿರಲು ಕಾರಣ ವನ್ನೂ ಸವಿಸ್ತರವಾಗಿ ತಿಳಿಸಿದರು. ರಾಮದಾಸನ ಜಗದ್ವಿಖ್ಯಾತವಾದ ಕೀರ್ತಿಯನ್ನು ಕೇಳಿದ್ದಾ ಪಥಿಕನು ಇಂತಹ ಮಹಾನುಭಾವನ ದರ್ಶನವನ್ನು ಮಾಡದೆ ಹೋಗುವುದು ಪಾಪಕರವೆಂದು ಅಲ್ಲಿದ್ದ ಭಟರಿಗೆ ಮತ್ತೊಂದು ಸುವರ್ಣ ಪುಷ್ಪವನ್ನೊಪ್ಪಿಸಿ ಕಾರಾಗ್ರಹವನ್ನು ಪ್ರವೇಶಿಸಿ, ಭಕ್ತಿಪರವಶನಾಗಿ ಗಾನ ಮಾಡುತ್ತಿದ್ದ ಗೋಪಣ್ಣನನ್ನು ನೋಡಿ ಭಕ್ತಿಯಿಂದ ನಮಸ್ಕರಿಸಿ, “ ಮಹಾತ್ಮಾ ! ನಿನ್ನಂತಹ ಭಗವದ್ಭಕ್ತನಿಗೂ ಸಹ ಕರ್ಮಫಲವನ್ನು ಅನು ಭವಿಸದು ತಪ್ಪಲಿಲ್ಲವಲ್ಲಾ” ಎಂದು ಷಣ್ಣಭಾವದಿಂದ ಹೇಳಿದನು. ಆದರೆ ರಾಮದಾಸನು ರಾಮಧ್ಯಾನದಲ್ಲಿಯೇ ನಿಮಗ್ನನಾಗಿದ್ದುದರಿಂದ ಈತ ನನ್ನು ನೋಡಲಿಲ್ಲ. ಕಡೆಗೆ ಬ್ರಾಹ್ಮಣನು ಸ್ವಲ್ಪ ಹೊತ್ತು ಆ ಭಕ್ತಶಿರೋ ಮಣಿಯನ್ನೇ ನೋಡುತ್ತಿದ್ದು ಬಳಿಕ ಅಲ್ಲಿಂದ ಹೊರಟು ಗೋಳಕೊಂಡ ಪಟ್ಟಣವನ್ನು ಪ್ರವೇಶಿಸಿದನು. ಈ ಕಥಾಕಾಲದಲ್ಲಿ ಗೋಳಕೊಂಡ ಪಟ್ಟಣವೂ ಅಲ್ಲಿಯ ದುರ್ಗವೂ ಅತ್ಯಂತ ವೈಭವದೊಡನೆ ಕೂಡಿದ್ದಿತು. ಆ ಕಾಲದ ಆಂಧ್ರದೇಶಕ್ಕೆಲ್ಲ ಇದೇ ರಾಜಧಾನಿಯಾಗಿದ್ದಿತು. “ ಪಟ್ಟಣ” ಎಂದರೆ ಗೋಳಕೊಂಡ ಪಟ್ಟಣವೆಂದೇ ಅರ್ಥವಾಗಿತೇ ಹೊರತು ಚಿನ್ನ ಪಟ್ಟಣವೆಂದು ಅರ್ಥವಾಗು ತಿರಲಿಲ್ಲ. ಆ ಕಾಲದಲ್ಲಿ ಚೆನ್ನಪಟ್ಟಣ (ಮದ್ರಾಸು) ವು ಒಂದು ಬೆಸ್ತರ ಹಳ್ಳಿಯಾಗಿದ್ದಿತು. ನನ್ನ ಬ್ರಾಹ್ಮಣನು ಹೋಗುತ್ತಿದ್ದ ರಾಜಮಾರ್ಗದ ಇರ್ಕ್ಕಡೆಗಳಲ್ಲಿಯೂ ಆಕಾಶವನ್ನು ಮುಟ್ಟುತ್ತಿರುವಂತಹ ಅಸಂಖ್ಯಾಕ ಸೌಧ