ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೨೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೬ ಕರ್ಣಾಟಕ ನಂದಿನಿ ಬ್ರಾಹ್ಮಣನು ಸಂಗೀತ ಪಾಠಕರ ಗುಂಪನ್ನು ಸೇರಿವೀಣೆಯನ್ನು ಹಿಡಿದು ಒಂದು ವರ್ಣವನ್ನೂ ಒಂದು ಕೃತಿಯನ್ನೂ ಹಾಡಿ, ಮನೋಹರವಾರ ಒಂದು ರಾಮಕೀರ್ತನೆಯನ್ನೂ ಸುಸ್ತರವಾಗಿ ಹಾಡಿದನ, ಇಂತಹ ಸಂಗೀತ ವಿದ್ಯಾವಿಶಾರದನಾರೆಂದು ಮಾದನ್ನ ವರು ತಿರುಗಿನೋಡಲು ಈತನನ್ನು ಕಂಡು ಆಶ್ಚರ್ಯಪಟ್ಟರು. ಮತ್ತೆ ನಮ್ಮ ಬ್ರಾಹ್ಮಣನು ವಿದ್ಯ ತೃಮೂಹದ ಮಧ್ಯ, ಸೇರಿ, ಬ್ರಹ್ಮ ಸೂತ್ರದಲ್ಲಿ ಮೊದಲನೆಯವಾದ "ಅಧಾ ತೋ ಬ್ರಹ್ಮಜಿಜ್ಞಾಸಾ" ಎಂಬುದಕ್ಕೆ ಶಂಕರ, ರಾಮಾನುಜ, ಮಧ್ಯಾ ಚಾರ್ಯರ ತ್ರಿವಿಧಭಾಷ್ಯಗಳನ್ನೂ ವಿವರಿಸಿ ತದನಂತರ ಎಲ್ಲವನ್ನೂ ಪೂರ್ವ ಪಕ್ಷ ಮಾಡಿ ಕಡೆಗೆ ಎಲ್ಲ ಕ್ಕೂ ಸಮನ್ವಯವನ್ನು ಮಾಡಿದನು. ಈ ರೀ ತಿಯಾಗಿ ಅಪಾರ ವಿದ್ಯಾ ಮಹಿಮೆಯನ್ನು ತೋರಿಸುತ್ತಿದ್ದ ಬ್ರಾಹ್ಮಣ ನನ್ನು ನೋಡಿ ಸಭಾ ಸದರೆಲ್ಲರೂ ಈತನನ್ನು ದ್ವಿತೀಯ ವೇದವ್ಯಾಸರೆಂದೇ ತಿಳಿದರು, ಮಾದನ್ನ ಪಂತುಲುರವರು ಬ್ರಾಹ್ಮಣನ ಅಪಾರ ಪಾಂಡಿತ್ಯಕ್ಕೆ ಸಂತೋಷಪಟ್ಟು ಆತನಿಗೆ ಸಾವಿರ ರೂಪಾಯಿಗಳನ್ನು ನೂರು ಹದಿನಾರು ರೂಪಾಯಿ ಬೆಲೆಯುಳ್ಳ ಉತ್ತಮವಾದ ಶಾಲು ಜೋಡಿಯನ್ನೂ ಬಹುಮಾ ನವಾಗಿ ಕೊಡಹೋದರು. ಆಗ ಬ್ರಾಹ್ಮಣನು " ಮಂತ್ರಿ ಪುಂಗವ ! ನಾನು ಈ ಬಹುಮಾನ ಕ್ಯಾಗಿ ಬರಲಿಲ್ಲ, ಒಂದು ಲಘುಕಾರ್ಯಕ್ಕಾಗಿ ಬಂದಿರುವೆನು, ಅಸ್ಸ ಣೆಯಾದರೆ ಏಕಾಂತದಲ್ಲಿ ವಿಜ್ಞಾಪಿಸಿಕೊಳ್ಳುವೆನು. " ಎಂದು ಸಂಸ್ಕೃತ ಭಾಷೆಯಲ್ಲಿ ಹೇಳಿದನು. ಅದಕ್ಕೆ ಮಂತ್ರಿಗಳೂ ಸಮ್ಮತಿಸಿ ಬ್ರಾಹ್ಮಣ ನನ್ನು ತಮ್ಮ ಮನೆಯಲ್ಲಿಯೇ ನಿಲ್ಲಿಸಿಕೊಂಡು ಉಳಿದ ಬ್ರಾಹ್ಮಣರಿಗೆಲ್ಲ ಯಥೋಚಿತವಾದ ವಿಮಾನಗಳನ್ನಿತ್ತು ಕಹಿ ಒಂಭತ್ತು ಘಂಟೆಗೆ ವಿದ್ವತ್ಸಭೆಯ ಕೆಲಸವನ್ನು ಪೂರೈಸಿ ತೆರಳಿದರು. ಭೋಜನಾನಂತರದಲ್ಲಿ ಅಕ್ಕಣ್ಣ ಮಾದನ್ನ ಅಬ್ಬರೂ ಏಕಾಂತ ಸ್ಟಲ ದಲ್ಲಿ ಕುಳಿತುಕೊಂಡು ಪ್ರೋತ್ರಿಯ ಬ್ರಾಹ್ಮಣನನ್ನು ಕರೆಸಿದರು. ಅವರ ವರಿಗೆ ಹೀಗೆ ಸಂಭಾಷಣೆಗಳು ನಡೆದುವು.