ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೨೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿಮೆಯಿದೇವಿ ಹೀಗೆ ಮದನ್ನ :- ಪಂಡಿತವರ್ಯ ! ಏಕಾಂತದಲ್ಲಿ ಹೇಳಬೇಕೆಂದಿರುವ ಸಮಾಚಾರವಾವದು. ಬ್ರಾಹ್ಮಣ :- ಮಂತ್ರಿವರ್ಯ ! ನಾನು ಬಹುಮಾನಕ್ಕಾಗಿ ಬರೆ ಅಲ್ಲ, ನಿಮಗೊಂದು ವರ್ತಮಾನವನ್ನು ತಿಳಿಸಲು ಬಂದಿರುವೆನು, ಹಿಂದು ಗಳಿಗೆ ಶತ್ರುವಾದ ಔರಂಗಜೇಬನು ಇಲ್ಲಿ ಪಟ್ಟಣದಲ್ಲಿ ದೊಡ್ಡ ಸೈನ್ಯವನ್ನು ಕೂಡಿಸುತ್ತಿರುವನು. ಆತನು ಯಾರ ಮೇಲೆ ದಂಡೆತ್ತಿ ಹೊರಡುವನೋ ತಿಳಿಯದು, ಕೆಲವರು ರಾಜಪುತ್ರ: ವೀರನಾದ ರಾಬಸಿಂಹನಮೇಲೆ ದಂಡೆತ್ತಿ ಬರುವನೆಂದೂ ಕೆಲವರು ಗೋಲಕೊಂಡದಮೇಲೆ ಹೊರಡುವನೆಂದೂ ಕೆಲ ವರು ಮಹಾರಾಷ್ಟ್ರ, ರಮೇಲೆ ದಂಡೆತ್ತಿ ಹೊರಡುವನೆಂದೂ ಹೇಳುತ್ತಿರುವರು. ಹೇಗೂ ಆತನು ಆವುದೇ ಒಂದು ಹಿಂದೂ ರಾಜ್ಯವನ್ನು ನಿರ್ಮೂಲಮಾಡು ಇದಕ್ಕಾಗಿಯೇ ಯತ್ನಿಸಿರುವನು. ನಾನು ಹಿಂದೂ ರಾಜರಿಗೆಲ್ಲ ಈ ವರ್ತ ಮಾನವನ್ನು ತಿಳಿಸಬೇಕೆಂದು ಹೊರಟು ರಾಜಪುತ್ರರಾಜರೆಲ್ಲರಿಗೂ ತಿಳಿಸಿ, ಬುಂದಲ್ ಖಂಡದಲ್ಲಿರುವ ಛತ್ರಸಾಲ್ ಮಹಾರಾಜನಿಗೂ ಸನಹಾಳಾದುರ್ಗ ದಲ್ಲಿರುವ ಸಂಭಾಜೀ ಮಹಾರಾಜನಿಗೂ ತಿಳಿಸಿ ಇಲ್ಲಿಗೆ ಬಂದಿರುವೆನು. ಇಲ್ಲಿ ಬ್ರಾಹ್ಮಣರಾದ ನೀವು ಮಂತ್ರಿಗಳಾಗಿರುವುದರಿಂದಲೂ ನವಾಬನು ಯೋಗ್ಯವಾಗಿ ಹಿಂದುಗಳನ್ನೂ ಮಹಮ್ಮದೀಯರನ್ನೂ ಏಕರೀತಿಯಾಗಿ ನೋಡುತ್ತಿರುವುದರಿಂದಲೂ ಈ ರಾಜ್ಯವನ್ನು ಹಿಂದೂರಾಜ್ಯವೆಂಬದಾಗಿಯೇ ಭಾವಿಸಿ ಇಲ್ಲಿಗೆ ಬಂದಿರುವೆನು. ಸುಮ್ಮನೆ ನೋಡುವುದು ಅಸಾಧ್ಯವೆಂದು ತಿಳಿದು ನಿಮ್ಮ ಸಭೆಯಲ್ಲಿ ನನ್ನ ವಿದ್ಯಾಪ್ರತಾಪವನ್ನು ತೋರಿಸಿ ನಿಮ್ಮ ದೃಷ್ಟಿ ಯನ್ನು ಆಕರ್ಷಿಸಿದೆನು ; ಇದಲ್ಲದೆ ಬೇರೆ ಕಾರ್ಯವಾವುದೂ ಇಲ್ಲ. ಎಂದನು. ಮಂತ್ರಿಗಳಿಬ್ಬರೂ ಅದನ್ನು ಕೇಳಿ, ಈ ಬ್ರಾಹ್ಮಣನು ತಮ್ಮನ್ನು ಅನುಗ್ರಹಿಸುವುದಕ್ಕಾಗಿಯೇ ಬಂದಿರುವ ಸಮಾಚಾರವನ್ನು ತಿಳಿದು ಆಶ್ಚ ರ್ಯಾತಿರೇಕದಿಂದ ಸ್ವಲ್ಪ ಹೊತ್ತು ಆತನ ಮ೬ವನ್ನೇ ನೋಡುತ್ತಿದ್ದು, ಆ ಬಳಿಕ ಹೀಗೆಂದರು ಕು