ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೨೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

රෙප ಕರ್ಣಾಟಕ ನಂದಿನಿ

  • ಬ್ರಾಹ್ಮಣೋತ್ತಮ ! ನೀವು ಮನುಷ್ಯ ಮಾತ್ರರಲ್ಲವೆಂದೂ ನಮಗೆ ಸಹಾಯಮಾಡಬೇಕೆಂದು ಬಂದಿರುವ ಸಾಕ್ಷಾತ್‌ ಸುರಗುರುವೆಂದೂ ಭಾವಿಸು ವೆವು, ನಿಮ್ಮ ನಾಮಧೇಯವನ್ನೂ ಸ್ಥಳವನ್ನೂ ದಯೆಯಿಟ್ಟು ತಿಳಿಸಬೇ ಕೆಂದು ಪ್ರಾರ್ಥಿಸುವೆವು.”

ಬ್ರಾಹ್ಮಣ :-ಮಂತ್ರಿ ಶ್ರೇಷ್ಠರೆ ! ನನ್ನ ಕುಲಗೋತ್ರಗಳಿಂದಲೂ ಗ್ರಾಮನಾಮಗಳಿಂದಲೂ ನಿಮಗಾವ ಪ್ರಯೋಜನವೂ ಇಲ್ಲ. ನಾನು ನಿಮಗೆ ತಿಳಿಸಿರುವ ಕಾರ್ಯದಲ್ಲಿ ನೀವು ತಕ್ಕ ಪ್ರಯತ್ನ ವನ್ನು ಕೈಕೊಳ್ಳಿರಿ. ನಾನು ಬಂದಕೆಲಸವಾಯಿತು. ಇನ್ನು ಹೊರಡುವೆನು. ಮಂತ್ರಿಗಳ ಉತ್ತರವನ್ನು ನಿರೀಕ್ಷಿಸದೆ ಶಿಷ್ಯನೊಡನೆ ಹೊರಡುತ್ತಿ ರುವ ಬ್ರಾಹ್ಮಣನನ್ನು ನೋಡಿ ಅವರು ಎಷ್ಟೋ ಬಗೆಯಿಂದ ಒಂದು ದಿನ ವಾದರೂ ಇದ್ದು ತಮ್ಮ ಆತಿಥ್ಯವನ್ನು ಸ್ವೀಕರಿಸಿ ತೆರಳಬೇಕೆಂದು ಪ್ರಾರ್ಥಿಸಿ ದರೂ ಆತನು ನಿಲ್ಲದೆ ಹೊರಟುಹೋದನು. ಅನಂತರ ಮಂತ್ರಿಗಳಿಬ್ಬರೂ ಹೀಗೆ ಆಲೋಚಿಸಿದರು :- ಮಾದನ್ನ :-ಅಣ್ಣ! ಈ ಬ್ರಾಹ್ಮಣನ ಚರ್ಯೆಗಳು ಅತ್ಯದ್ಭುತವಾ ಗಿರುವುವು. " ಹೆಸರನ್ನೂ ಹೇಳಲಾರನು, ಒಂದು ಕಾಸನ್ನೂ ಮುಟ್ಟಲಾರನು : ಒಂದು ದಿನವಿರೆಂದರೂ ಇರನು. ಇದರಲ್ಲಿ ಮೋಸವೇನೂ ಇರಲಾರದಷ್ಟೆ ? ಅಕ್ಕಣ್ಣ :-ನೀನು ಯಾವಾಗ ನೋಡಿದರೂ ಸಂಶಯಗ್ರಸ್ತನೇ ! ಈ ಬ್ರಾಹ್ಮಣನು ಹೇಳಿದ ಮಾತುಗಳಲ್ಲಿ ಸಂದೇಹಪಡುವ ಅಂಶವೇನೂ ಇಲ್ಲ, ಎಲ್ಲವೂ ನಿಮಗೆ ಶುಭಕರವೇ ಸು. - ಮಾದನ್ನ :-ನನಗೂ ಹಾಗೆಯೇ ತೋರುವುದು. ಆದರೂ ರಾಜ್ಯಾರಿ ಗವಿಚಾರಗಳನ್ನು ಕುರಿತು ಆಲೋಚಿಸುವಾಗ ಎಲ್ಲಾ ವಿಧವಾದ ವಿಕಲ್ಪಗ ಇನ್ನೂ ಚರ್ಚಿಸಬೇಕಲ್ಲವೆ? ಅಕ್ಕಣ್ಣ-.ಇನ್ನು ಸಂಶಯವನ್ನು ಬಿಟ್ಟು ಆತನ ಸೂಚನೆಯಂತೆ ಸೈನ್ಯವನ್ನು ಸಿದ್ಧ ಪಡಿಸುವುದು ಯುಕ್ತವು.