ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೨೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೨ ಕರ್ಣಾಟಕನbದಿನಿ ತಿರುವನೋ ?...... ನನ್ನ ಈ ದುರ್ದಶೆಗೆ ಕಾರಣನಾದ ಔರಂಗಜೇಬನ ಮೇಲೆ ನನ್ನ ಹಗೆತನವನ್ನು ಹೇಗೆ ತೀರಿಸಲಿ ? ಸಪರಿವಾರನಾದ ಆ ಕೂರನಿಗೆ ಮಹಾಪರಾಭವವನ್ನುಂಟುಮಾಡಿದಲ್ಲಗೆ ಕ್ಷಣಕ್ಷಣಕ್ಕೂ ಪ್ರಜ್ವಲಿಸು ತಿರುವ ನನ್ನಿ ದ್ವೇಷಾಗ್ನಿ ತಣ್ಣಗಾಗಲಾರದು ! ಮೋಸಗಾರನಿಗೆ ಮೋಸ ದಿಂದಲೇ ಪರಾಭವವನ್ನುಂಟುಮಾಡಬೇಕು. " ಅಯ್ಯೋ ! ನಾನೆಂತಹ ಅವಿವೇಕಿ ? ಹಾವಿನ ಬಾಯಿಯಲ್ಲಿರುವ ಕಪ್ಪೆ ಇದಿರಿಗಿರುವ ಹುಳುವನ್ನು ತಿನ್ನಲು ಪ್ರಯತ್ನಿಸಿದಂತೆ, ಗಾಡಾಂಧಕಾ ರವಾದ ಈ ಕಾರಾಗ್ರಹದಲ್ಲಿ ಸಿಕ್ಕಿಬಿದ್ದು ದಿಕ್ಕಿಲ್ಲದೆ ತೊಳಲುತ್ತಿರುವ ನಾನು ಆ ಪಾಪಿಯಾದ ಬಾದಶಹನಿಗೆ ಮೋಸಮಾಡಲೆಳಸಿರುವೆನಲ್ಲವೆ ? ದೈವಾನುಗ್ರಹವೇನಾದರೂ ಇದ್ದು ಇಲ್ಲಿಂದ ಮುಕ್ತನಾದಮೇಲಲ್ಲವೇ ನನ್ನ ಉದ್ದೇಶ ಸಿದ್ಧಿಯಾಗುವುದು ?............ ...... ... ಹೀಗ ಪರಿತಪಿಸುತ್ತಿದ್ದು ಕಡೆಗೆ ಧೈರ್ಯವನ್ನು ಹೊಂದಿ, ಆಹಾ ! ಇಂದಿರಾದೇವಿಯ ಸ್ಮರಣಮಾತ್ರದಿಂದಲೇ ನನ್ನ ಅಜ್ಞಾನವು ನಿವಾರಣವಾಗಿ ಉಪಾಯವು ಸ್ಕೂರ್ತಿಯಾಯ್ತು ! ಕರ್ತವ್ಯತಾ ಮೂಢರಾದವರೆಲ್ಲರೂ ಇಂದಿರಾದೇವಿಯ ಸ್ಮರಣೆಯಿಂದ ಕರ್ತವ್ಯದಲ್ಫ್ರಾಗುವುದರಲ್ಲಿ ಅಡ್ಡಿಯಿಲ್ಲ ಇನ್ನು ನಾನು ಉಪಾಯದಿಂದ ಮುಕ್ತನಾಗಿ ಇಂದಿರೆಯನ್ನು ಬಾದಶಹನ ನಿರ್ಬಂಧದಿಂದ ಬಿಡಿಸಿ, ಅಣ್ಣನಾದ ದುರ್ಗಾದಾಸನಿಗೆ ಒಪ್ಪಿಸುವುದೇ ನನ್ನ ಅಪರಾಧಕ್ಕೆ ಪ್ರಾಯಶ್ಚಿತ್ತವು." ಹೀಗೆ ನಿರ್ಧರಿಸಿ, ನಯನಪಾಲನು ಕಾರಾಗಾರದ ಅಧಿಕಾರಿಯೊಡನೆ ಸ್ನೇಹವನ್ನು ಬೆಳಸುತ್ತ ಬಂದನು. ಕೆಲವು ದಿನಗಳೊಳಗಾಗಿಯೇ ಆತನನ್ನು ತನ್ನ ವನನ್ನಾಗಿ ಮಾಡಿಕೊಂಡು ಆತನಿಗೆ ತನ್ನ ಉದ್ದೇಶವನ್ನು ತಿಳಿಸಿ, ತನ್ನನ್ನು ಬಂಧನದಿಂದ ಬಿಟ್ಟು ಬಿಟ್ಟರೆ ವಿಪುಲದ್ರವ್ಯವನ್ನು ಕೊಡುವುದಾಗಿ ವಾಗ್ದಾನ ಮಾಡಿದನು, ಅಧಿಕಾರಿಯು ಔರಂಗಜೇಬನ ಭಯದಿಂದ ನಯನಪಾಲನ ಮಾತನ್ನು ಒಪ್ಪಲಾರದೆಯೂ ವಿಪುಲದ್ರವ್ಯಲಾಭವಾಗುವುದನ್ನು ಬಿಟ್ಟು