ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೨೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿಮಲಾದೇವಿ ೨೨೭ ಅವಳಲ್ಲ, ಇಷ್ಟು ಮಂದಿ ಮಹಮ್ಮದೀಯ ಸ್ತ್ರೀಯರಿರುವಾಗ ನೀನೇಕೆ ರಜಪೂತ ಕನೆಯನ್ನು ಮದುವೆ ಮಾಡಿಕೊಂಡೆ ? ರಾಜಪುತ್ರ ಸ್ತ್ರೀಯಾ ದುದುಂದ ಸ್ವಜಾತ್ಯಭಿಮಾನವು ಸ್ವಲ್ಪವಾದರೂ ಇಲ್ಲದಿರುವುದೇ ? ಇದಕ್ಕೆ ದೃಷ್ಟಾಂತವನ್ನು ತೋರಿಸುವೆನು, ನೋಡು. ರೋಷನಾರೆಯ ಬೋಧನೆಯಿಂದ ಔರಂಗಜೇಬನು ಆಗಲೇ ಸಂಶ ಯಗ್ರಸ್ತನಾದನು. ಅಷ್ಟರಲ್ಲಿಯೇ ರೋಷನಾರೆಯು ಕಾರಾಗೃಹದಲ್ಲಿ ದೃ ಛೋಟುಸಿಂಗನನ್ನು ಅಲ್ಲಿಗೆ ಕರೆಸಿದಳು. ಔರಂಗಜೇಬ ಬಾದಶಹನು ಅವನನ್ನು ಚನ್ನಾಗಿ ನೋಡಿ ಅವನನ್ನು ಎಲ್ಲಿಯೋ ನೋಡಿದ್ದಂತೆ ಯೋ ಚಿಸಿ ಕ್ರೋಧದಿಂದ ಅವನನ್ನು ದುರದುರನೆ ನೋಡುತ್ತ ರೋಷನಾರೆಯನ್ನು ಕುರಿತು:- ತಂಗೀ, ಈತನಾರು ? ” ಎಂದು ಕೇಳಿದನು. ರೋಷನಾ ರೆಯ ದ್ವೇಷ ಸಾಧನೆಗೆ ಇದೀಗ ತಕ್ಕ ಸಮಯವಾಗಿ ತೋರಿತು. ಅವಳು, - ಅಣ್ಣ ! ಇವನು ಉದಯಪುರಿಯ ಸ್ನೇಹಿತರಲ್ಲಿ ಒಬ್ಬನು. ವೇಷ ಧಾರಿಯಾದ ಈತನು ಉದಯವರಿಯ ಅಂತಃಪುರದಿಂದ ಬರುತ್ತಿರಲು ನಾನು ಈತನ ವೇಷವನ್ನು ತಿಳಿದು ಕಾರಾಗೃಹದಲ್ಲಿಟ್ಟಿರುವೆನು .•°.... ? ೨ ಔರಂಗಜೇಬನು ಮುಂದೆ ಕೇಳುವ ತಾಳ್ಮೆಯಿಲ್ಲದವನಾಗಿ ಛೋಟುಸಿಂಗ ನನ್ನು ಹಿಂದೆ ಕರೆದುಕೊಂಡು ಉದಯಪುರಿಯ ಅಂತಃಪುರವನ್ನು ಪ್ರವೇ ಶಿಸಿದನು. ಆಗ ಉದಯಪುರಿಯು ಇಂದಿರೆಯೊಡನೆ ಸಂಭಾಷಿಸುತ್ತಿದ್ದಳು. ಬಾದಶಹನನ್ನು ನೋಡಿದೊಡನೆಯೇ ಅವರಿಬ್ಬರೂ ಎದ್ದು ನಿಂತರು. ಇಂದಿ ರೆಯು ಬಾಗಿಲ ಹಿಂದೆ ಹೋಗಿ ಛೋಟುಸಿಂಗನನ್ನೇ ನೋಡುತ್ತ ನಿಂತಳು. ಇಂದಿರೆಯನ್ನು ನೋಡಿ ಛೋಟುಸಿಂಗನು ಮುಖವನ್ನು ತಗ್ಗಿಸಿದನು. ಉದ ಯುರಿಯು ಎಂದಿನಂತೆ ಬಾದಶಹನಿಗೆ ಮರ್ಯಾದೆಯನ್ನು ಮಾಡಿದಳು. ಆದರೆ ರೋಷ ನಾರೆಯ ದುರ್ಬೋಧನೆಯಿಂದ ಕಲುಷಿತವಾದ ಅವನ ಮನಸ್ಸು ಸರಲ ಹೃದಯದ ಉದಯಪರಿಯ ಅಕುಟಿಲವಾದ ಆದರವನ್ನು