ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೨೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಓ೨ ಕರ್ಣಾಟಕ ನಂದಿಸಿ ಹೇಳಿ ದುರ್ಗಾಸನನ್ನು ಪ್ರತ್ಯೇಕ ಬಿಡಾರದಲ್ಲಿರಿಸಿ, ಬಿಹಾರದ ಸುತ್ತಲೂ ತನ್ನ ಭಟರನ್ನು ಕಾವಲಿರಿಸಿದನು. ರೋಷ ನಾರಾ ಮಾಡಿದ ಮೋಸವನ್ನು ತಿಳಿದ ಮೇಲೆ, ಉದಯ ಪುರಿಯ ವಿಷಯವಾಗಿ ತಾನು ಪಟ್ಟ ಅನುಮಾನವನ್ನೂ ದುಡುಕಿ ಅವಳಿಗೆ ತಾನು ಮಾಡಿದ ಅವಮಾನವನ್ನು ಕುರಿತು, ಬಾದಶಹನು ಪಶ್ಚಾತ್ತಾಪ ಪಟ್ಟು, ಉದಯವರಿಯನ್ನು ಅನೇಕ ವಿಧವಾಗಿ ಸಮಾಧಾನಪಡಿಸಿ, ತನ್ನ ಅಪರಾಧವನ್ನು ಕ್ಷಮಿಸೆಂದು ಕೇಳಿಕೊಂಡನು. ನರಳಹೃದಯದ ಉದ ಪುರಿಯ ಬಾದಷಹನ ವಾಕ್ಯಗಳಿಂದ ಸಮಾಧಾನ ಹೊಂದಿ ಮನಸ್ಸಿನ ಉದ್ವೇಗವನ್ನು ಬಿಟ್ಟಳು. ರೋಷನಾರೆಯು ಉದಯಪುರಿಯ ಜನಾನೆ ಯಲ್ಲಿ ತನಗಾದ ರ್ಪಣಾಭವಕ್ಕೆ ೧೦ಬರೆಯೆ ಕಾರಣಳೆಂದೂ 'ತನ್ನ ಕನ ಟವ್ಯೂಹವು ಇಂದಿರೆಯಿಂದಲೇ ಛೇದಿಸಲ್ಪಟ್ಟಿತೆಂದೂ ತಿಳಿದು ಇಂದಿರೆ ಉದಯಪುರಿ ಇವರ ಮೇಲೆಯೂ ದ್ವೇಷವನ್ನು ಸಾಧಿಸಲು ಸ್ಥಿರ ಸಂಕಲ್ಪಳಾದಳು. ಇಪ್ಪತ್ತೊಂದನೆಯ ಪ್ರಕರಣ: ( ಫಕೀರನು ) ರೂಷ ನಾರಯು, ಒಂದರೆ ತನ್ನ ಕೆ ಪಟವೂಹವನ್ನು ಭೇದಿ ಸಿದಳೆಂದು ತಿಳಿದುದುಮೊದಲು ಅವಳನ್ನು ಹೇಗಾದರೂ ಮಾಡಿ ಸಂಹರಿಸಿ ತನ್ನ ಮನೋಭೀಷ್ಟವನ್ನು ನೆರವೇಬಸಿಕೊಳ್ಳಬೇಕೆಂದು ಸಂಕಲ್ಪಿಸಿ ಎಷ್ಟೋ ಉಪಾಯಗಳನ್ನು ಮಾಡಿದಳು ; ಆದರೆ ಅದಾವುದೂ ಫಲಕಾರಿಯಾಗದೆ ಇವಳ ದುಃಖವನ್ನು ಮತ್ತಷ್ಟು ಹೆಚ್ಚಿಸುತ್ತ ಬಂದವು. ಹೀಗಿರಲು