ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೨೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿಮಲಾದೇವಿ ೨೩೫ ಹೇಗಾದರೂ ಮಾಡಿ ಕಾರಾಗೃಹದಿಂದ ಬಿಡುಗಡೆ ಮಾಡಬೇಕೆಂದು ದೃಢ ಸಂಕಲ್ಪ ಮಾಡಿದನು. ಕಾರ್ಯಸಾಧನೆಗೆ ಉಪಾಯವನ್ನು ಚಿಂತಿಸುತ್ತ ರಾಣಿವಾಸದ ವಿಚಾರವನ್ನು ಅತ್ಯಂತ ಶ್ರದ್ಧೆಯಿಂದ ತಿಳಿಯುತ್ತ ಬಂದನು. ಉದಯಪು.. ರೋಷನಾರೆಯರಿಗೆ ಪರಸ್ಪರ ದ್ವೇಷವುಂಟಾಗಿರುವುದನ್ನೂ ಮಸಾವದನ ಸ್ವಭಾವವನ್ನೂ ಫರುಕ್ ಪೈರನ ವೃತ್ತಾಂತವನ್ನೂ ಸುಲಭ ವಾಗಿ ತಿಳಿದನು. ತನ್ನ ವಾಕ್ಚಾತುರ್ಯದಿಂದಲೂ ನಡತೆಯಿಂದಲೂ ತಾನು' ಅದ್ವಿತೀಯ ಪಂಡಿತನೂ ತ್ರಿಕಾಲಜ್ಞನೂ ಮಹಾನುಭಾವನೂ ಆಗಿರುವಂತೆ ಸೇವಕರಿಗೆ ದೃಢವಾದ ನಂಬಿಕೆಯನ್ನುಂಟುಮಾಡಿ ಅವರೆಲ್ಲರನ್ನೂ ತನ್ನ ವಶ ವರ್ತಿಗಳಾಗಿ ಮಾಡಿಕೊಂಡನು. ಹೀಗೆ ಅವನು ಸೇವಕರೊಡನೆ ಮಾತನಾ ಡುತ್ತಿದ್ದಾಗಲೆಲ್ಲಾ ಫಕೀರನು ತನ್ನ ಅಂಗಿಯಿಂದ ಒಂದು ಕಾಗದವನ್ನು ತೆಗೆದುಕೊಂಡು ಅದರ ಮೇಲೆ ಆಗಾಗ ಏನೇನನ್ನೋ ಗುರುತು ಮಾಡುತ್ತಿ ದನು. ಈ ರೀತಿ ಕಸಟದಿಂದ ಸಂಚರಿಸುತ್ತಿದ್ದ ಫಕೀರನು ಎಂದಿನಂತೆ ಒಂದು ದಿನ ಉದಯಪುರಿಯ ಅಂತಃಪುರವನ್ನು ಪ್ರವೇಶಿಸಿದನು. ಅಂದು ಅಲ್ಲಿ ಅಲ್ಲೋಲಕಲ್ಲೋಲವಾಗಿದ್ದಿತು. ಸೇವಕರೆಲ್ಲರೂ ಭಯಚಿತ್ರರಾಗಿ ದಿಕ್ಕು ದಿಕ್ಕುಗಳಿಗೂ ಓಡಿಹೋಗುತ್ತಿದ್ದರು. ಉದಯಪುರಿಯು ವಿಚಾರಸಮ್ಮ ಢಳಾಗಿ ಕುಳಿತು ಕಣ್ಣೀರು ಸುರಿಸುತ್ತಿದ್ದಳು. ಆಗ ಕಾರ್ಯಾ೦ತರವಾಗಿ ಹೋಗಿದ್ದ ಮಸಾವದನು ಅಲ್ಲಿಗೆ ಬಂದು ಕುತೂಹಲದಿಂದ ಇಷ್ಟು ಗಲಭೆಗೆ ಕಾರಣವೇನೆಂದು ಕೇಳಿದನು. “ ಇಂದಿರೆಯು ಅಗೋಚರವಾಗಿರುವಳು. ಮಹಾರಾಣಿಯವರು ದುಃಖದಿಂದ ಊಟವನ್ನು ಬಿಟ್ಟು ಕುಳಿತಿರುವರೆಂದು” ಉತ್ತರವು ಬಂದಿತು. ಮಸಾವದನು ಸಿಡಿಲುಬಡಿದಂತೆ ನೆಲದಮೇಲೆ ಕುಕ್ಕು ರಿಸಿ ಬಿದ್ದು ಮಕ್ಕಳಂತೆ ರೋಧಿಸತೊಡಗಿದನು. ಈ ವಿದ್ಯಮಾನವೆಲ್ಲವು ಫಕೀರನಿಗೆ ತಿಳಿಯಲು ಅವನು ಭಯಪಟ್ಟು, ಇಂದಿರೆಯೆಲ್ಲಿ ಹೋಗಿರಬಹುದೆಂದು ತನ್ನಲ್ಲಿಯೇ ತರ್ಕಿಸಲಾರಂಭಿಸಿದನು.