ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೨೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿಮಲಾದೇವಿ. ೨೩೭ ಫರುಕಪೈ ರನು ವಿಸ್ಮಿತನಾಗಿ, “ ಆರೆ, ಇವನು ಸಾಮಾನ್ಯನಾಗಿಲ್ಲ, ನಾನು ಎಷ್ಟೋ ಫಕೀರರನ್ನು ನೋಡಿರುವೆನು ; ಆದರೆ ಇವನಂತೆ ಸರ್ವ ಜ್ಞನಾದವನನ್ನು ನಾನು ಎಲ್ಲಿಯೂ ಕಂಡುದಿಲ್ಲ. ಇವನ ಪ್ರಸನ್ನ ತೆಗೆ ಪಾತ್ರನಾದರೆ ನನ್ನ ಅಭೀಷ್ಟ ಸಿದ್ಧಿಯಾಗಲು ಸಂದೇಹವಿರದು ” ಎಂದು ಯೋಚಿಸುತ್ತಆತನನ್ನು ಕುರಿತು. ಫಕೀರಬೇ, ತಾವು ಇನ್ನೆಷ್ಟು ದಿನಗಳು ಈ ಪಟ್ಟಣದಲ್ಲಿರುವಿರಿ ?” ಎಂದು ಕೇಳಿದನು. ಫಕೀರ: - ಇಷ್ಟು ದಿನಗಳೆಂಬುವುದು ನಮಗೇನುಗೊತ್ತು ! ಯಾ ವಾಗ ಬುದ್ಧಿ ಹುಟ್ಟಿದರೆ ಆಗ ಮತ್ತೊಂದು ಗ್ರಾಮಕ್ಕೆ ಹೋಗುವೆವು. ಎಲ್ಲೆಲ್ಲಿ ಭಕ್ತರಿರುವರೋ ಅಲ್ಲಿಗೆ ಹೋಗಿ ಅವರ ಕೋರಿಕೆಗಳನ್ನು ನೆರವೇ ರಿಸಬೇಕೆಂದು ನಮಗೆ ನಮ್ಮ ಗುರುಗಳು ಅಪ್ಪಣೆ ಮಾಡಿರುವರು. ಆದುದ ರಿಂದ ಭಕ್ತರ ಮನೋಭಿಪ್ರಾಯವನ್ನು ದಿವ್ಯ ದೃಷ್ಟಿಯಿಂದ ಗ್ರಹಿಸಿ ಅವರ ಕೋರಿಕೆಗಳನ್ನು ನೆರವೇರಿಸಿ, ಅವರನ್ನು ಸಂತೋಷಪಡಿಸುವುದೇ ನಮ್ಮ ಕೆಲಸವು, ಹಾಗೆಯೇ ಅಲ್ಲಾಭಕ್ತನಾದ ನಿನ್ನ ಮುಖವನ್ನು ನೋಡಿ ಡನೆಯೇ ನಿನ್ನ ಅಭಿಮತವು ವಿದಿತವಾಯಿತು. ಈ ಜನಾನಾದಲ್ಲಿರುವ ಸೇವ ಕರಲ್ಲೆಲ್ಲಾ ನೀನೇ ಬು ವಂತನು. ಫರುಕ್ ಪೈರನು ಫಕೀರನ ಮಾತಿಗೆ ಮರುಳಾಗಿ, ಆತನೊಡನೆ ರಹ ಸ್ಯವನ್ನು ಹೇಳಬೇಕೆಂದು ಆತನನ್ನು ತನ್ನ ಮನೆಗೆ ಕರೆದುಕೊಂಡುಹೋಗಿ, ಗುಪ್ತಸ್ಥಾನದಲ್ಲಿ ಕುಳಿತು ಹೀಗೆ ಸಂಭಾಷಿಸಿದನು:- “ ಫಕೀರಬೇ, ತಾವು ಸಾಕ್ಷಾತ್ ಅಲ್ಲಾ ಎಂದೇ ನಾನು ನಂಬಿ ನಿಮ್ಮನ್ನು ಆಶ್ರಯಿಸಿರುವೆನು. ನೀವೂ ನನ್ನನ್ನು ನಿಮ್ಮ ಮಗನಂತೆ ಭಾವಿಸಿ ನನ್ನ ಅಭಿಮತವನ್ನು ಸಿದ್ಧಗೊಳಿಸಿ ಅನುಗ್ರಹಬುದ್ಧಿಯಿಂದ (ಪಾಡಬೇಕು ಕಾರ್ಯಸಾಧನೆಯಾದ ಒಕ ನಾನು ತಮಗೆ ಬಹುಮಾನವನ್ನು ಕೆಡ. ನು, ?