ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೨೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪೩ ಕರ್ಣಾಟಕನಂದಿನಿ. ಪುತ್ರರನ್ನೂ ಕೋರಿದನು, ರಾಜಪುತ್ರರ ಸಂಭ್ರಮದಿಂದ ರಾಜಸಿಂಹನಿಗೆ ಸಹಾಯಮಾಡಲು ಸೈನ್ಯವನ್ನು ಸಿದ್ಧ ಮಾಡುತ್ತಿದ್ದರು. ಈ ಮಧ್ಯದಲ್ಲಿ ಯಾವ ಕಾಠ್ಯವನ್ನು ಮಾಡಬೇಕಾದರೂ ವೈಕುಂಠಯೋಗಿಗೆ ತಿಳಿಸಿಯೇ ಮಾಡುತ್ತಿದ್ದ ರಾಜಸಿಂಹರಾಜನು ಯುದ್ಧ ವಿಚಾರವಾಗಿ ಪ್ರಸ್ತಾಪಿಸಲು ಅಚಲೇಶ್ವರಾಲಯಕ್ಕೆ ಹೋದನು. ಆತನು ಅಲ್ಲಿಗೆ ಬಂದಾಗ ಯೋಗಿಯು ಧ್ಯಾನದಲ್ಲಿದ್ದುದರಿಂದ ರಾಜಸಿಂಹನು ಆ ದೇವಾಲಯದಲ್ಲಿದ್ದ ಒಂದು ಮಂಟಪದಲ್ಲಿ ಕುಳಿತು ಯೋಗಿಯನ್ನು ದರ್ಶಿಸಲು ಸಮಯ ನಿರೀಕ್ಷೆ ಯಲ್ಲಿ ದನು, ಅಷ್ಟರಲ್ಲಿ ಅಲ್ಲಿಗೆ ಒಬ್ಬ ಬಾಲಕನನ್ನೆತ್ತಿಕೊಂಡು ಒಬ್ಬ ಭಿಲ್ಲಾಂ ಗನೆಯು ಬಾರಿಬಾರಿಗೂ ಬಾಲನನ್ನು ಮುದ್ದಿ ಸುತ್ತ ಹಾಡುಗಳನ್ನು ಹೇ ಇುತ್ರ ಗಗನದಲ್ಲಿ ಸಂಚರಿಸುವ ಪಕ್ಷಿಗಳನ್ನು ತೋರಿಸುತ್ತ ಆಲಯದಬಳಿಗೆ ಬಂದಳು, ರಾಜಸಿಂಹನು ಆ ಬಾಲನನ್ನು ನೋಡಿ ಯಾರಿರಬಹುದೆಂಬು ದನ್ನು ಯೋಗಿಯಿಂದ ತಿಳಿಯಬೇಕೆಂದು ಎಣಿಸಿದನು. • ಸ್ವಲ್ಪ ಹೊತ್ತಿನೊಳಗಾಗಿ ಧ್ಯಾನವನ್ನು ಮುಗಿಸಿಕೊಂಡು ಯೋಗಿ ಯು ಹೊರಗೆ ಬಂದನು, ತತ್‌ಕ್ಷಣವೇ ರಾಜಸಿಂಹನು ಯೋಗಿಗೆ ಭಕ್ತಿ ಪೂರ್ವಕವಾಗಿ ನಮಸ್ಕರಿಸಿ ಕೈಮುಗಿದು ನಿಂತನು, ಯೋಗಿಯು ರಾಜ ಸಿಂಹನಿಗೆ ಆಶೀರ್ವಾವನ್ನು ಮಾಡಿ, ಆತನೊಡನೆ ಆಲಯದ ಹಿಂದುಗಡೆ ಯಲ್ಲಿದ್ದ ಮಂಟಪಕ್ಕೆ ಹೋಗಿ ಅಲ್ಲಿ ಕುಳಿತು ರಾಜಸಿಂಹನನ್ನು ಕುರಿತು ಕುಶಲ ಪ್ರಶ್ನೆ ಮಾಡಿದನು, ಆ ಬಳಿಕ ಅವರಿಬ್ಬರಿಗೂ ಹೀಗೆ ಸಂಭಾ ಷಣೆಗಳಾದವು:- ರಾಜ:-ದೇವಾ ! ಆಲಯಕ್ಕೆ ಬಂದಬಳಿಕ ಓರ್ವ ಭಿಲ್ಲಾಂಗ ನೆಯು ಒಬ್ಬ ಬಾಲನನ್ನೆತ್ತಿಕೊಂಡು ಬಂದಳು, ಆ ಬಾಲನಾರು ? ಯೋಗಿ:-ನಿನಗೆ ಗೊತ್ತಿಲ್ಲವೆ ? ಆ ಬಾಲನೇ ಜೋಧಪುರಾ ಧೀಶನು !