ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೨೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಎಮೆಟಾದೇಶಿ ೨* ನಾನು ಅವರೊಡನೆ ಹೋರಾಡುತ್ತಿದ್ದೆನು, ಆ ಸಮಯದಲ್ಲಿ ತುರಗಾರೂ ಢರಾಗಿ ಬಂದು ನನಗೆ ತುಂಬ ಸಹಾಯಮಾಡಿ ಶತ್ರುಗಳನ್ನು ಓಡಿಸಿದ ರಾಜ ಪುತ್ರರಿಬ್ಬರಲ್ಲಿ ಪ್ರಮುಖನಾದವನೊಬ್ಬನಿಗೆ ನನ್ನ ಕೃತಜ್ಞತಾ ಪ್ರದರ್ಶನ ಕ್ಯಾಗಿ ನನ್ನ ಉಂಗುರವನ್ನಿ ತೆನು. ಯೋಗಿ..--ಹಾಗಾದರೆ ನೀನು ಏಮಲೆಯನ್ನು ನೋಡಲಿಲ್ಲವೆಂದು ಹೇಗೆ ಹೇಳುವೆ ? ರಾಜ:-ನಾನೆಲ್ಲಿ ನೋಡಿದೆ ? ಯೋಗಿ:- ನಿನ್ನ ಸಹಾಯಕ್ಕೆ ಬಂದಿದ್ದ ಆ ವೀರರಿಬ್ಬರೂ ಪುರುಷ ವೇಷಧಾರಿಗಳಾದ ವಿಮಲಾ-ಪದ್ಮಾ ದೇವಿಯರೆಂದು ತಿಳಿ. ರಾಜ:-ಸಿನು ? ಅವರು ರೂಪನಗರದ ರಾಜಪುತ್ರಿಯರೆ ? ಉಂ ಗುರವನ್ನು ಪಡೆದವಳು ವಿಮಲೆಯೇ ? ನನಗೆ ಗುರುತು ಸಿಕ್ಕಲಿಲ್ಲವೇಕೆ ? - ಯೋಗಿ.ಹೇಗಾದರೂ ಆಗಲಿ, ನೀನು ಏಮಲಾದೇವಿಯನ್ನು ಗ್ರಹಿಸಿದಂತಾಯಿತು.' ರಾಜಸಿಂಹನು ತಲೆತಗ್ಗಿಸಿದಳು. ರಾಜಸಿಂಹನಿಂದ ಉಂಗುರವನ್ನು ಪಡೆದ ಮೇಲೆ ಒಂದು ದಿನ ವಿಮಲಾ ಪದ್ಮಯರಿಬ್ಬರೂ ಅಜಲೇಶ್ವರಾಲ ಯಕ್ಕೆ ಬಂದಿದ್ದಾಗ ಯೋಗೀಶ್ವರನಿಗೆ ಸಂದರ್ಭವಶದಿಂದ ಸಂಗತಿಯನ್ನು ತಿಳಿಯಪಡಿಸಿದ್ದರು. ಇದಾವುದನ್ನೂ ಯೋಗಿಯು ತಿಳಿಸಲಿಲ್ಲ ವಾದುದ ರಿಂದ ರಾಜಸಿಂಹನು ಯೋಗಿಯು ಇದನ್ನು ಜ್ಞಾನಚಕ್ಷುಸ್ಸಿನಿಂದಲೇ ತಿಳಿ ದಿರಬೇಕೆಂದೂ ಈತನು ಜ್ಞಾನದಲ್ಲಿ ಸಾಕ್ಷಾತ್ವಸಿಷ್ಠರ ಅವತಾರವೇ ಸರಿ ಯೆಂದೂ ಭಾವಿಸಿ ಮನಸ್ಸಿನಲ್ಲಿಯೇ ಬೋಗಿಯನ್ನು ಸ್ತುತಿಸುತ್ತಿದ್ದನು. ಸ್ವಲ್ಪ ಹೊತ್ತಾದಬಳಿಕ ಯೋಗಿಯು ರಾಜಸಿಂಹನನ್ನು ಕುರಿತು ಹೀಗೆ ಹೇಳಿದನು: “ರಾಜಸಿಂಹ ! ನೀನು ಯೋಚಿಸುತ್ತಿರುವುದೇನು ? ಸಕಲ ಸಾಮಂತ ರಾಜರ ಸಹಾಯವನ್ನು ಹೊಂದಿ ರೂಪನಗರಕ್ಕೆ ಒದಗಿರುವ ವಿಪತ್ತು ಪರಿಹಾರಮಾಡು ; ಮರೆಹೊಕ್ಕ ಮಾನಿನಿಂದ ವಿಮಲಾದೇ 32