ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೨೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೪ ಕರ್ಣಾಟಕ ನಂದಿನಿ ಉದಯ:- ಎಲ್ಲಾ ಸ್ಥಳಗಳಲ್ಲಿಯೂ ಹುಡುಕಿಸಿದೆನು. ಆದರೆ ದೋಷ ನಾರೆಯ ಮಂದಿರದಲ್ಲಿ ಮಾತ್ರ ಹುಡುಕಿಸಲಾಗಲಿಲ್ಲ. ನೀವೇನಾ ದರೂ ಹುಡುಕಿಸಬಲ್ಲಿರೊ ?

  • ಬಾದ:- ಪ್ಯಾರಿ! ಆ ಇಂದಿರೆಗಾಗಿ ನೀನೇಕೆ ಇಷ್ಟು ಯೋಚಿಸುವೆ? ಇನ್ನು ಸ್ವಲ್ಪ ದಿನಗಳಲ್ಲಿಯೇ ಇಂದಿರೆಗಿಂತಲೂ ಜಾಣೆಯಾದ ರಾಜಕನೆ ಯನ್ನು ನಿನ್ನ ದಾಸಿಯನ್ನಾಗಿ ನಿಯಮಿಸುವೆನು. ಈಗ ನಾನು ಒಂದು ಮಾತನ್ನು ಹೇಳಲು ಇಲ್ಲಿಗೆ ಹಿಂದಿರುವೆನು. ಅದೇನೆನ್ನು ನಿಯೋ ? ನಿನ ಗೂ ವಿಮಲೆಯ ಮೇಲಿನ ಕೋಪವನ್ನೆಂದಾದರೂ ತೀರಿಸಿಕೊಳ್ಳಬೇಕೆಂಬ ಅಪೇಕ್ಷೆ ಯಿದೆಯಲ್ಲವೆ ! ನಿನ್ನ ಕೋರಿಕೆಯನ್ನು ನೆರವೇರಿಸಲು ನಾಳೆಯೇ ರೂಸನಗರದ ಮೇಲೆ ದಂಡೆತ್ತಿ ಹೊರಡಲು ಸಿದ್ದನಾಗಿರುವೆನು, ನೀನೂ ನನ್ನೊಡನೆ ಬರುವೆಯಾ ?

ಉದಯ:- ಸ್ವತಃ ನೀವೇ ಹೋಗಬೇಕೇ ? ಸೈನ್ಯವನ್ನು ಕಳುಹಿ ಧರೆ ಆಗದೆ ? ಬಾದ:--ಹಾಗಲ್ಲ ! ರಾಜಪುತ್ರರೆಲ್ಲರೂ ವಿಜಯಸಿಂಹನ ಸಹಾ ಯಕ್ಕಾಗಿ ಬರುವರು, ರಾಜಸಿಂಹನು ಅವರೆಲ್ಲರಿಗೂ ಮುಂದಾಗಿ ಬರು ವನಂತೆ ! ಹೀಗಿರುವದರಿಂದ ನಾನು ಹೋಗದಿದ್ದರೆ ಹೇಗಾಗುವುದು ? ಸಮಯವು ಹೇಗಿರುವುದೋ ? ನೀನೂ ಜೊತೆಯಲ್ಲಿ ಹೊರಡುವೆಯೋ ? ಉದಯ:-- ಹೊರಡುವುದೇನು ? ನಾನು ಬದುಕಿರಬೇಕೆಂಬ ಆಶೆ ನಿಮಗಿದ್ದರೆ ನನ್ನನ್ನು ನಿಮ್ಮೊಡನೆಯೇ ಕರೆದುಕೊಂಡು ಹೋಗುವಿರಿ. ಬಾದ:--- ಕರೆದುಕೊಂಡು ಹೋಗಬೇಕೆಂದೇ ಕೇಳಿದೆನು, ನಾಳೆ ಹೊರಡಲು ಸಿದ್ದವಾಗಿರು. ಹೀಗೆ ಇವರು ಮಾತನಾಡುವಷ್ಟರಲ್ಲಿಯೇ ಮಸಾನದನು ಬಂದು “ ಸೈನ್ಯವು ರೂಪನಗರಕ್ಕೆ ಹೊರಡುತ್ತಿದೆ. ಸಮಾಚಾರವನ್ನು ಪಾದಸನ್ನಿ ಧಾನಕ್ಕೆ ಮುಟ್ಟಿಸಲು ಬಂದೆನು.” ಎಂದು ಬಾದಶಹನಿಗೆ ನಿವೇದಿಸಿದನು,