ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೨೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೬೦ ಕರ್ಣಾಟಕ ನಂದಿನಿ. ಉಡಿಗೆಯನ್ನುಟ್ಟು ಪ್ರಯಾಣಕ್ಕೆ ಸನ್ನದ್ದ ನಾದನು. ಇತ್ತ ಸೈನ್ಯಾಧಿಕಾರಿ ಗಳು ಎರಡು ಗಂಟೆಯೊಳಗಾಗಿ ಪ್ರಯಾಣಕ್ಕೆ ಸಿದ್ಧರಾಗಿ ಅರಮನೆಯ ಬಳಿ ಕಾದಿದ್ದರು. ರಾಜಸಿಂಹನು ಆನೆಯ ಮೇಲೆ ಕಟ್ಟಿದ್ದ ಒಂದು ಅಂಬಾರಿ ಯಲ್ಲಿ ಏರಿ ಕುಳಿತನು. ತತ್‌ಕ್ಷಣವೇ ಸುತ್ತುವರಿದಿದ್ದವರಿಂದ ಮಾಡ ಲ್ಪಟ್ಟ ** ಜಯ ಜಯಕಾರ ” ಈ ವಾದ್ಯಗಳ ರವಗಳೂ ಅಶ್ವಗಜಾದಿಗಳ ಸಂತೋಷಸೂಚಕಗಳಾದ ಧ್ವನಿಗಳೂ ಒಟ್ಟುಗೂಡಿ ಭೂನಭೋಂತರಾಳಗ ಳನ್ನು ಭೇದಿಸುವಂತಾದುವ. ಹೀಗೆ ಸಂಭ್ರಮದಿಂದ ರಾಜಸಿಂಹನು ಹೊರಟಕೂಡಲೆ ಮುಂದೆ ಕೆಲವು ಸೈನ್ಯವೂ ಆತನ ಹಿಂದೆ ಕೆಲವು ಸೈನ್ಯವೂ ಹೊರಟವು, ಸಾಮಂತ ರಾಜರು ಗಳಾರೂಢರಾಗಿಯೂ ರಥಾರೂಢರಾಗಿಯೂ ಹೊರಟರು. ಈ ಸಂಭ್ರಮವನ್ನು ನೋಡಲು ಪೌರರೆಲ್ಲ ರೂ ಉಪ್ಪರಿಗೆಗಳ ಮೇಲೆಯೂ ಬುರು ಜುಗಳ ಮೇಲೆಯೂ ಹತ್ತಿ ನಿಂತಿದ್ದರು. ಸೂರ್ಯೋದಯವಾಗುವ ವೇಳೆಗೆ ಸೈನಿಕರಲ್ಲಿ ಒಬ್ಬರೂ ನಿಲ್ಲದೆ, ಎಲ್ಲರೂ ಉದಯಪ್ರರವನ್ನು ಬಿಟ್ಟು ಯುದ್ಧರಂಗಕ್ಕೆ ಹೊರಟು ಹೋಗಿದ್ದರು. ಮೂವತ್ತೆರಡನೆಯ ಪ್ರಕರಣ, (ಯಮುನಾ ನದಿ) .. ಫರುಕ್ ಪೈರನನ್ನು ತನ್ನ ಮಾಯಾ ಜಾಲದಲ್ಲಿ ಸಿಲುಕಿಸಿಕೊಂಡು ರೋಷನಾರೆಯು ಇಂದಿರೆಗೆ ಮಾಡಬೇಕೆಂದಿದ್ದ, ಮೋಸಗಳನ್ನು ನಮ್ಮ ಫಕೀರನು ಉಪಾಯದಿಂದ ತಿಳಿದುಕೊಂಡನು. ನದಿಯಲ್ಲಿ ಬೀಳದಂತೆ ಇಂದಿರೆಯನ್ನು ಆರಾತ್ರಿ ಹೇಗಾದರೂ ಮಾಡಿ ತಪ್ಪಿಸಬೇಕೆಂದು ತಕ್ಕ