ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೨೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿಮಲಾದೇವಿ ೨೬೧ ಉಪಾಯವನ್ನು ಯೋಚಿಸುತ್ತಿದ್ದನು. ಕಾಲಾತೀತವಾಗುವ ಮೊದಲೇ ತನ್ನ ಉಪಾಯವನ್ನಾ ಲೋಚಿಸಲು ಫರುಕ್ ಪೈರನನ್ನು ಕಳುಹಿಸಿ ಬಿಟ್ಟು ತನ್ನಲ್ಲಿಯೇ ಆಲೋಚಿಸುತ್ತ ರಾಣಿವಾಸದ ಬಳಿಗೆ ಬರುವಷ್ಟರಲ್ಲಿಯೇ ನಯನ ಪಾಲನು ಫಕೀರನಂತೆ ವೇಷವನ್ನು ಹಾಕಿಕೊಂಡು ರಾಣಿವಾಸದ ದ್ವಾರ , ದಲ್ಲಿ ನಮ್ಮ ಫಕೀರನನ್ನು ಇದಿರ್ಗೊಂಡನು. ಇವನು ಕಾರಾಗೃಹದಿಂದ ತಪ್ಪಿಸಿಕೊಂಡು ಬಂದಂದಿನಿಂದಲೂ ಹೇಗಾದರೂ ಮಾಡಿ ಇಂದಿರೆಯನ್ನು ಕಾಪಾಡಬೇಕೆಂದು ಅನೇಕ ವೇಷಗಳನ್ನು ಧರಿಸಿ ಪ್ರತಿದಿನವೂ ಅಂತಃಪುರ ವನ್ನು ಪ್ರವೇಶಿಸುತ್ತ ನಯನಪಾಲನು ಅಲ್ಲಿಯ ರಹಸ್ಯಗಳೆಲ್ಲ ವನ್ನೂ ತಿಳಿದು ಕೊಂಡಿದ್ದನು. ಅನೇಕ ವೇಳೆ ನಮ್ಮ ಫಕೀರನೂ ನಯನಪಾಲನೂ ಪರ ಸ್ಪರ ನೋಡುತ್ತಿದರೂ ಒಬ್ಬರನ್ನೊಬ್ಬರು ಎಂದೂ ಮಾತನಾಡಿರಲಿಲ್ಲ. ನಮ್ಮ ಪಕೀರನು ಕೆಲವು ದಿನಗಳ ವರೆಗೆ ನಯನಪಾಲನನ್ನು ಗುರುತಿಸದಿ ದ್ದರೂ ಕ್ರಮಕ್ರಮವಾಗಿ ಆತನು ನಯನಪಾಲನೆಂದೂ ಇಂದಿರೆಯನ್ನು ರಕ್ಷಿ ಸುವುದಕ್ಕಾಗಿ ಪ್ರಯತ್ನಿಸುತ್ತಿರುವನೆಂದೂ ತಿಳಿದುಕೊಂಡನು. ಸಮಯ ಬಂದಾಗ ಆತನನ್ನು ಮಾತನಾಡಿಸಿ ಆತನ ಸಹಾಯವನ್ನು ಹೊಂದಬೇಕೆಂದಿ ದ್ವುದರಿಂದ ಫಕೀರವೇಷದಿಂದ ಬಂದ ನಯನಪಾಲನನ್ನು ಮಾತನಾಡಿಸಲು ಇದೇ ಸಮಯವೆಂದು ಭಾವಿಸಿ ಆತನೊಡನೆ ಸಂಭಾಷಣೆಗೆ ಪ್ರಾರಂಭಿಸಿದರು. ಫಕೀರ : ಹೊ ಫಕೀರ್ಜಿ ! ಸಲಾಂ. ಎಲ್ಲಿಗೆ ಹೋಗುತ್ತಿರು ವಿರಿ ? ರಯನ :- ಜನಾನಾದೊಳಗೆ ಭಿಕ್ಷೆಗಾಗಿ ಹೋಗುತ್ತಿರುವೆನು. ಫಕೀರ ..-ನೀವು ಫಕೀರ್ ದೀಕ್ಷೆ ಕೈ ಗೊಂಡು ಎಷ್ಟು ದಿನ ಗಳಾದುವು ? ನಯನ :- ಆ ಸಂಗತಿಗಳೆಲ್ಲಾ ಏಕೆ ? ಫಕೀರ :-ಅಯ್ಯಾ ! ನಿನ್ನ ಪೂರ್ವ ವೃತ್ತಾಂತವನ್ನೂ ಈಗ ನೀನು ವೇಷಧರನಾಗಿ ರಾಣಿವಾಸದೊಳಗೆ ಪ್ರವೇಶಿಸಿ ಮಾಡಬೇಕೆಂದಿರುವ ಕಾರ್ಯ