ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೨೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿಮಲಾದೇವಿ ೨೭೭ ಮುಪ್ಪತ್ತನಾಲ್ಕನೆಯ ಪ್ರಕರಣ (ಮೂವರು ಪ್ರಯಾಣಿಕರು.) ತಮಸ್ತೋಮ ವಿಧ್ವಂಸಕಾರಣನಾದ ಸೂರ್ಯನಾರಾಯಣನು ಇದೇ ಉದಯಾದ್ರಿಯನ್ನಲಂಕರಿಸಿದನು. ಸೂರ್ಯದೇವನ ಸಂದರ್ಶನ ದಿಂದುಂಟಾದ ಆನಂದಾತಿಶಯದಿಂದ ಶುಕ ಪಿಕಾದಿಪಕ್ಷಿನಿಕರಗಳು ತಮ್ಮ ಗೂಡುಗಳಿಂದ ಹೊರಗೆ ಒಂದು ಅಂಡಲೇಶರಾಲಯದ ಸುತ್ತಲೂ ಸೇರಿ ಆ ಸ್ವಾಮಿಯ ಸ್ತುತಿಪಾಠ ಮಾಡುತ್ತಿರುವುವೋ ಎಂಬಂತೆ ಧ್ವನಿಮಾಡು ತಿದ್ದವು ಮಯೂರಗಳು ತಮ್ಮ ಗರಿಗಳನ್ನು ಪಸರಿಸಿ ಸಂತೋಷದಿಂದ ಅಲ್ಲಲ್ಲಿ ನಾಟ್ಯವಾಡುತ್ತಿದ್ದವು. ಇಂತಹ ಸುಖಕರವಾದ ಪ್ರಭಾತದಲ್ಲಿ ಮೂವರು ಪುರುಷರು ಅಶ್ಚಾ ರೂಢರಾಗಿ ಸಂಭಾಷಿಸುತ್ತ ಆ ಪರ್ವತದಮೇಲೆ ಒಂದು ಕಡೆಯಿಂದ ಬರು ತಿದ್ದರು. ಮೂವರಲ್ಲಿ ಇಬ್ಬರು ಸ್ವಲ್ಪ ಹೆಚ್ಚು ಕಡಮೆ ಒಂದೇ ರೂಪವುಳ್ಳ ವರಾಗಿ ಸಹೋದರರೆಂಬಂತೆ ಕಾಣಿಸುತ್ತಿದ್ದರು. ವರನೆಯ ಪುರುಷನು ಆ ಇಬ್ಬರಲ್ಲಿ ಕರಿಯನ ಬಳಿಯಲ್ಲಿಯೇ ಕುದುರೆಯನ್ನು ನಡೆಸುತ್ತ ಮಾತು ಮಾತಿಗೂ ಆತನ ಕಡೆಯೇ ನೋಡುತ್ತಿದ್ದನು. ಮೂವರೂ ಬರುತ್ತಿದ್ದ ರೀತಿಯನ್ನು ನೋಡಿದರೆ, ೨-೩ ದಿನಗಳಿಂದ ಮಾರ್ಗ ಪ್ರಯಾಣದಲ್ಲಿಯೇ ಶ್ರಾಂತರಾಗಿರುವಂತೆ ತೋರುತ್ತಿದ್ದಿತು. ಅವರಲ್ಲಿಯೂ ಕಿರಿಯನು ಅತ್ಯಂತ ಶ್ರಾಂತನಾಗಿದ್ದನು. ಅಯಾಸವನ್ನು ತಡೆಯಲಾರದೆ ನಿಟ್ಟುಸಿರಿಡುತ್ತ ತುದಿ ನಾಲಿಗೆಯಿಂದ ತುಟಿಗಳನ್ನು ಸವರಿಕೊಳ್ಳುತ್ತಿದ್ದನು. ಉಳಿದೀರ್ವರೂ ಆತನಿಗೆ ಧೈರ್ಯವನ್ನು ಹೇಳುತ್ತ ಇರೋ ಇದೇ ಅಬೂ ರ್ಪತವು, ಅಡೆ ಲೇಶ್ವರಾಲ ಯವು ಸಮೀಪದಲ್ಲಿಯೇ ಇರುವುದು, ಸ್ವಲ್ಪ ಸಹಿಸಿಕೊಂಡರೆ ಜಾಗ್ರತೆಯಾಗಿಯೇ ಸೇರಬಹುದು.” ಎಂದು ಆ ತರುಣನೊಡನೆ ಮಾತನಾ