ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೩೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ය ಕರ್ಣಾಟಕ ನಂದಿನಿ ರಕ್ಕೆ ನೀನೇ ಅಧೀಶನು”..ಎಂದು ಬಗೆ ಬಗೆಯಾಗಿ ಬಣ್ಣಿಸಿ ಬಾಲ ನನ್ನು ಮುದ್ದಿಡುತ್ತಿದ್ದಳು. ಬಾಲನು ಇಂದಿರೆಯ ವಾಕ್ಯದ ಅರ್ಥವನ್ನು ತಿಳಿಯಲಸಮರ್ಥನಾಗಿದ್ದರೂ ಅವಳಾ ಪುತ್ರನಿರ್ವಿಶೇಷ ಪ್ರೇಮದಿಂದ ಅತ್ಯಂತ ಆತ್ಯಾಯಿತನಾಗಿ ಅವಳ ಲಾಲನೆಗಳಿಂದ ಕಿಲಕಿಲನೆ ನಗುತ್ತ ನಲಿದಾಡುತ್ತಿ ಧ್ವನು. ಅಷ್ಟರಲ್ಲಿ ದುರ್ಗಾದಾಸನೊಡನೆ ಯೋಗಿಯೂ ಆಲಯದೊಳಗೆ ಪ್ರವೇಶಿಸಿದನು. ಇಂದಿರೆಯು ಬಾಲನನ್ನು ಕುಳ್ಳಿರಿಸಿ, ಯೋಗಿಗೆ ನಮಸ್ಕ ರಿಸಿದಳು, ಯೋಗಿಯು ಅತ್ಯಂತ ಆದರದಿಂದ, “ತಾಯಿ, ನಿನ್ನ ಅನುಗ್ರಹ ದಿಂದ ಜೋಧಪುರವಂಶವು ನಿಂತಿರುವುದು, ನಿನ್ನ ಪವಿತ್ರ ಚರಿತ್ರೆಯನ್ನು ನಾನು ಕೇಳಿ ಅತ್ಯಾನಂದ ಪಟ್ಟೆನು, ಕುಸುಮಕೋಮಲೆಯಾದ ನೀನು ರಾಜವಂಶವನ್ನು ಳಿಸುವುದಕ್ಕಾಗಿ ಪಟ್ಟ ಕಷ್ಟವೂ ಆ ಮೂಲಕ ಪ್ರದರ್ಶಿತ ವಾದ ನಿನ್ನ ಮನೋದಾರ್ಢ, ರಾಜಭಕ್ತಿ, ಕರ್ತವ್ಯನಿಷ್ಠೆಗಳೂ ವರ್ಣ ನಾತೀತವಾಗಿರುವುವು.” ಎಂದು ಶ್ಲಾಘಿಸಿದನು. ಆ ಮಾತನ್ನು ಕೇಳಿ ಇಂದಿರೆಯು ವಿನೀತ ಭಾವದಿಂದ_“ ಇದೆಲ್ಲ ವೂ ಯೋಗಿರಾಜರ ಕೃಪೆಯಿಂದಲೇ ಆದುದಲ್ಲದೆ ನನ್ನ ಕರ್ತೃತ್ವಶಕ್ತಿಯಿಂ ದಾಯಿತೆಂದು ಹೇಳಲಾರೆನು. ರಾಣಿ ಚಂದ್ರಾವತೀದೇವಿಯ ಪಾತಿವ್ರತ್ಯ ಪ್ರಭಾವದಿಂದಲೂ ಕುಮಾರನ ಅದೃಷ್ಟ ಬಲದಿಂದಲೂ ಬೋಧಪುರದ ಪ್ರಜೆ ಗಳ ಸೌಭಾಗ್ಯದಿಂದಲೂ ಸ್ವರ್ಗವಾಸಿಯಾಗಿರುವ ಮಹಾರಾಜರ ಪುಣ್ಯ ಪ್ರಭಾವದಿಂದಲೂ ನಮ್ಮ ಅಣ್ಣನ ಪ್ರಯಾಸದಿಂದಲೂ ಈ ಕಾರ್ಯಗಳು ಫಲಿಸಿರುವವೇ ಹೊರತು ಅನ್ಯಥಾ ಇಲ್ಲ” ಎಂದು ನುಡಿದಳು. ಇಂದಿ ರೆಯ ಮಾತಿಗೆ ಯೋಗಿಯು ಸಂತೋಷಪಟ್ಟು ಅಣ್ಣ ತಂಗಿಯರು ರಾಜಸಿಂ ಹನು ಬರುವವರೆಗೂ ವಿಶ್ರಮಿಶಿಕೊಂಡಿರುವಂತೆ ಹೇಳಿದನು. ಇತ್ತ ನಯನಪಾಲನು ಯೋಗಿಯಿಂದ ಅಪ್ಪಣೆಹೊಂದಿ ಪರ್ವತವ ೩ಳಿದು ಬರುತ್ತೆ, ದೂರದಲ್ಲಿ ಕಾಲೂರಿ ನಿಂತಿದ್ದ ಬಾದಶಹನ ಸೈನ್ಯವನ್ನು ಕಂಡನು. ಒಡನೆ ಒಂದು ಎತ್ತರವಾಗಿದ್ದ ಮರವನ್ನೇರಿ, ಶತ್ರುವಿನ ಮಹಾ ಸನವನ್ನು ನೋಡುತ್ತ ಹೀಗೆ ಆಲೋಚಿಸಲು ಆರಂಭಿಸಿದನು.