ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೩೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೪ ಕರ್ಣಾಟಕ ನಂದಿನಿ - ಜನಾನಾದವರು ರಾಜಪುತ್ರರ ಸೆರೆಯಿಂದ ತಮ್ಮನ್ನು ಬಿಡಿಸಿದುದಲ್ಲದೆ ತಮಗಿಷ್ಟು ಉಪಕಾರಮಾಡಿದವರಾರೋ ಎಂಬ ಕುತೂಹಲದಿಂದ ವಿಚಾರಿ ಸಲು, ಮಹಾರಾಣಿ ವಿಮಲಾದೇವಿಯೆಂದು ತಿಳಿದು, ಅಂತಹ ಅನುಕಂಪನ ಶೀಲಳಾದ ವಿಮಲಾದೇವಿಯಲ್ಲಿ ತಾನು ಚಿಂತಿಸಿದ ದ್ರೋಹಕ್ಕಾಗಿ ತನ್ನನ್ನು ತಾನೇ ಧಿಕ್ಕರಿಸಿಕೊಂಡಳು. ಉದಯಪುರಿಯ ದಾಸೀಜನರು ವಿಮಲೆಯ ಡಿದಾರ್ ಗುಣವನ್ನು ಕೊಂಡಾಡಿದರು. ಇತ್ತ ರಾಜಸಿಂಹನು ಮೊಗಲ್ ಸೇನೆಯ ದೈನ್ಯಾವಸ್ಥೆ ಯನ್ನು ನೋಡಿ ಕನಿಕರಪಟ್ಟನಾದರೂ ಔರಂಗಜೇಬನನ್ನು ಪೂರ್ಣವಾಗಿ ಸೋಲಿಸಿದ ಹೊ ರತು ಆತನಲ್ಲಿ ದಯೆಯನ್ನು ತೋರಬಾರದೆಂದು ನಿಶ್ಚಯಿಸಿದನು. ಆದುದ ರಿಂದ ಬಾದಶಹನಿಗೆ ಹೀಗೆಂದು ಬರೆದು ಕಳುಹಿದನು. “ತಮ್ಮ ಇಷ್ಟ ಬಂದಂತೆ ಕೂರಕೃತ್ಯಗಳನ್ನು ಮಾಡುವುದು ಅತ್ಯಂತ ಶೋಚನೀಯವು, ನೀವು ಚಕ್ರವರ್ತಿಗಳಾದರೂ ರಾಜಪ್ರತ್ರರು ಬಲಹೀನ ರೆಂದು ಭಾವಿಸಬಾರದು. ಹೇಯವಾದ ಜಜಿಯಾ ಕಂದಾಯವನ್ನು ಹಾಕಿ, ಪ್ರಜೆಗಳಿಗೆ ಅತ್ಯಂತ ಕಷ್ಟಗಳನ್ನು ಂಟುಮಾಡಿರುವಿರೆಂದು ಕೇಳಿರುವೆನು ಈ ಕುತ್ತಿತಭಾವನೆಯೆಂದಿಗಾದರೂ ನಾಶವಾಗಬಹುದೆಂದು ಈವರೆಗೆ ನಿರೀಕ್ಷಿ ಸಿದನು. ಆದರೂ ತಮಗೆ ಸನ್ಮಾರ್ಗವೆಂಬುದು ಗೋಚರವಾ ಅಲ್ಲ ಪೃಥವೀಸಿಂಗನನ್ನು ಕೊಂದಮಾತ್ರದಿಂದ ಜೋಧಪುರವು ಕೈವಶವಾಗುವು ದೆಂದೂ ರಾಜಪುತ್ರರೆಲ್ಲರೂ ಹೀನಸತ್ವ ರಾಗಿ ಬಳೆತೊಟ್ಟು ಕೊಂಡಿರುವರೆಂದೂ ಭಾವಿಸಿದ್ದರಲ್ಲವೇ? ಆಗಲಿ, ಜೋಧಪುರವಂಶಕ್ಕೆ ನೀವು ಮಾಡಿದ ಅಪ ಕಾರಗಳನ್ನು ಈಗಲಾದರೂ ಸ್ಮರಿಸಿಕೊಂಡು ಅದಕ್ಕಾದ ಪ್ರಾಯಶ್ಚಿತ್ತವಿ ದೆಂದು ತಿಳಿದು ಇನ್ನಾ ದರೂ ಬುದ್ದಿ ಕಲಿತುಕೊಳ್ಳುವಿರೋ ಹೇಗೆ ? ಬಡ ಬ್ರಾಹ್ಮಣರನ್ನು ಹಿಂಸಿಸಿ, ಜೆಜಿ ತಾ ಕಂದಾಯವನ್ನು ಪಡೆಯುತ್ತಿದ್ದುದಕ್ಕೆ ಈಗ ಇಲ್ಲಿ ಸೈನ್ಯದೊಡನೆ ಅಹಾರವಿಲ್ಲದೆ ನರಳುವುದೇ ಪ್ರತಿಫಲವೆಂದು ತಿಳಿ