ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೩೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೦೮ ಕರ್ಣಾಟಕ ನಂದಿನಿ ವೈಕುಂಠಯೋಗಿಯ ಅನುಗ್ರಹವನ್ನು ಹೊಂದಿ ಅಜಿತಕುಮಾರನನ್ನು ಕರೆದು ಕೊಂಡುಬಂದು ಜೋಧಪುರದ ಪಟ್ಟವನ್ನು ಕಟ್ಟಿದಳು, ರೂಪಸಿಂಗಇಂದಿರೆಯರನ್ನು ಪಲ್ಲಕ್ಕಿಯಲ್ಲಿ ಕುಳ್ಳಿರಿಸಿ ಪಟ್ಟಣದಲ್ಲಿ ಮಹೋತ್ಸಾಹದಿಂದ ಮೆರವಣಿಗೆಯನ್ನು ಮಾಡಿಸಿ ಒಯವಾಗಿ ಸನ್ಮಾನಿಸಿದಳು. ವಾಚಕರು ತಿಳಿಯಬೇಕಾದ ವಿಷಯವು ವತ್ತೊಂದಿರುವುದು, ಏನೆಂ ದರೆ, ಮೊದಲನೆಯ ಪ್ರಕರಣದಲ್ಲಿ ಪಾಬೂಲ್ ದೇಶಕ್ಕೆ ಉತ್ತರಪತ್ರವನ್ನು ತೆಗೆದುಕೊಂಡು ಹೋಗುತ್ತಿದ್ದ ಮಹಮ್ಮದೀಯನೂ ಯಶವಂತಸಿಂಹನ ಮರ ಣಸಮಯದಲ್ಲಿ ದುರ್ಗಾ ದಾಸನಿಗೆ ಒಂದು ಕಾಗದವನ್ನು ತಂದುಕೊಟ್ಟ ಮಹಮ್ಮದೀಯನೂ ಔರಂಗಜೇಬನ ಸೈನ್ಯವನ್ನು ಸಿದ್ಧಪಡಿಸುತ್ತಿರುವೆನೆಂದು ಗೋಲಕೊಂಡದಲ್ಲಿ ಮಾದನ್ನ ಪಂಡಿಕರಿಗೆ ವರ್ತಮಾನವನ್ನು ಕೊಟ್ಟು ಹೋದ ಶೋತ್ರಿಯ ಬ್ರಾಹ್ಮಣನೂ ಯಾರಾರಿರಬಹುದೆಂದು ಶಂಕಿಸಬಹದು. ಆ ಮೂರು ಕಾರ್ಯಗಳನ್ನು ನಿರ್ವಹಿಸಿದವನೂ ಒಬ್ಬನೇ! ಆತನೇ ನಮ್ಮ ವೈಕುಂ ತಯೋಗಿ, ಆತನು ಆಗಾಗ ನಾಲೈದು ದಿನಗಳವರೆಗೆ ಯಾರಿಗೂ ಕಾಣ ದಂತೆ ಇರುತ್ತಿದ್ದುದರಿಂದ ಅಲ್ಲಿ ಇಬ್ಬರು ಸ್ವಾಮಿಗಳು ಅಂತರ್ಧಾನರಾಗಿ ರುವರೆಂದು ಭಾವಿಸುತ್ತಿದ್ದರು. ವಾಸ್ತವಿಕಾಂಶವು ಹಾಗಲ್ಲ, ರಾಜಪುತ್ರ ರಿಗೆ ಸಂಭವಿಸಬಹುದಾಗಿರುವ ಕಷ್ಟಗಳನ್ನು ಮುಂಚಿ ಕವಾಗಿ ತಿಳಿದುಕೊ ಳ್ಳುವುದಕ್ಕಾಗಿ ವೇಷಾಂತರಗಳಿಂದ ದೇಶದಲ್ಲೆಲ್ಲಾ ಸಂಚರಿಸುತ್ರ ರಹಸ್ಯ ವೃತ್ತಾಂತವನ್ನು ಸಂಗ್ರಹಿಸಿ ಉತ್ತರೋತ್ತರ ಪತ್ರಗಳನ್ನು ತಂದಿತ ಉಪಾ ಯಗಳನ್ನು ಸೂಚಿಸುತ್ತ ರಾಜಪುತ್ರರಿಗೆ ಅತ್ಯಂತ ಸಹಾಯಕನಾಗಿದ್ದನು ಈ ಯೋಗಿವರ್ಯನು ಈಗಲೂ ಆಪರ್ವತದ ಮೇಲೆ ಗುಹೆಯಲ್ಲಿ ತಪಸ್ಸು ಮಾಡುತ್ತಿರುವನೆಂದೂ ರಾಜಪುತ್ರರಾಜರಿಗೆ ಕಷ್ಟಗಳು ಸಂಭವಿಸಿದಾಗ ದಿವ್ಯದೃಷ್ಟಿ ಯಿಂದ ತಿಳಿದು ರೂಪಾಂತರದಿಂದ ಬಂದು ಅವರಿಗೆ ಸಹಾಯ ಮಾಡುವನೆಂದೂ ಆ ಪರ್ವತದಲ್ಲಿರುವ ಛಲ್ಲರು ಈಗಲೂ ನಂಬಿರುವರು.