ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

1, ಕರ್ಣಾಟಕ ಗ್ರಂಥಮಾಲೆ Mwwwmv MMWMANAM ಬೇಕು, ಮೆದುಳಿಗೆ ವಿಶ್ರಾಂತಿಯನ್ನು ಕೊಡಲು ನಿದ್ರೆಯು ಸನ್ನದ್ದವಾ ಗಿಯೇ ಇರುವುದು, ಈ ರೀತಿಯಾಗಿ ನೋಡಿದಲ್ಲಿ ಆದುದೇ ಆಗುತ್ತಿದ್ದರೆ ಎಲ್ಲರಿಗೂ ಬದುಕುವುದು ಕೂಡ ಬೇಸರವಾಗಿ ಲೋಕವ್ಯವಹಾರವು ಚೆನ್ನಾಗಿ ನಡೆಯಲಾರದೆಂದು ಭಾವಿಸಿ ಭಗವಂತನು ಈ ವಿಧವಾದ ಬದಲಾ ವಣೆಯನ್ನು ದಯಪಾಲಿಸಿರು ವುದೆಂದು ಅಮೂಲ್ಯವಾದ ಅನುಗ್ರಹವೆಂದು ತಿಳಿಯಬೇಕು. ಆದುದರಿಂದ ಕೆಲಸಗಳ ಬದಲಾವಣೆಯೇ ವಿಶ್ರಾಂತಿಯಂದು ಬಲ್ಲವರು ಹೇಳುವರು. ಯಾವುದಾದರೊಂದು ಕೆಲಸವನ್ನು ಮಾಡಿ ದಣಿದಿದ್ದಾಗ ಮಾತ್ರ ವಿಶ್ರಾಂತಿಯು ಆವಶ್ಯಕ. ಹೀಗೆ ವಿಶ್ರಾಂತಿಯು ಒಂದು ಕೆಲಸ ಮುಗಿದ ಮೇಲೆ ಮತ್ತೊಂದು ಕೆಲಸದ ರೂಪದಲ್ಲಿ ಅಥವಾ ನಿರುದ್ಯೋಗದ ರೂಪ ದಲ್ಲಿರಬಹುದು, ಆದರೆ ಸರ್ವದಾ ಯಾವ ಕೆಲಸವನ್ನು ಮಾಡದೆ ಸುಮ್ಮನೆ ಕುಳಿತಿರುವುದು ಎಂದಿಗೂ ವಿಶ್ರಾಂತಿಯೆನಿಸಿಕೊಳ್ಳಲಾರದು, ಅದು ಸೊ ಮಾರಿತನವೆನಿಸುವುದು ಕೆಲಸಮಾಡುವುದರಿಂದ ಸವೆದುಹೋದ ಶರೀರಾಂ ಶಗಳು ಪುನಃ ಕೂಡಿಕೊಳ ಇದಕ್ಕಾಗಿ ಸ್ವಲ್ಪ ಕಾಲವನ್ನೇ ಕೊಟ್ಟು ಆಗ ದಣಿವಾರಿಸಿಕೊಳ್ಳುವುದೆ: ವಿಶಾ೦ತಿಯೆಂದು ಕೆಲವರು ವಿದ್ವಾಂಸರು ಹೇಳುವರು. - ಪ್ರತಿಯೊಂದು ಪಾಣಿಗೂ ಆವಶ್ಯಕವಾದ ಈ ವಿಧವಾದ ವಿಶಾಲ ತಿಯು ನಿದ್ರೆಯಿಂದ ದೊರೆವುದು. ಇದು ಅಷ್ಟು ಮುಖ್ಯವಾದುದರಿಂದ ದೇವರಿಂದಲೇ ಅನುಗ್ರಹಿಸಲ್ಪಟ್ಟಿದೆ. ನಿಗೆಯು ಪ್ರಕೃತಿಯನ್ನು ಪೂರಸ್ಥಿ ತಿಗೆ ತರುವುದು, ಸಾಮಾನ್ಯವಾಗಿ ಒಬ್ಬ ಪುರುಷನಿಗೆ ಒಂದು ದಿನಕ್ಕೆ ಏಳು ಗಂಟೆಗಳ ಕಾಲವೂ ಒಬ್ಬ ಸ್ತ್ರೀಗೆ ಎಂಟುಗಂಟೆಗಳಷ್ಟು ಕಾಲವೂ ನಿದ್ರೆಗೆ ಆವಶ್ಯಕ. ಆದರೆ ಅವರವರು ಮಾಡುವ ವೃತ್ತಿಗಳಿಗೂ ಅವರವರ ದೇಹಸ್ಥಿತಿಗಳಿಗೂ ತಕ್ಕಂತೆ ಆ ಕಾಲವು ಸ್ವಲ್ಪಮಟ್ಟಿಗೆ ವ್ಯತ್ಯಾಸವನ್ನು