ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಡೆವಳಿ MAMALAMuyaywwwM ನಾವು ಯಾವುದಾದರೊಂದು ವಿಷಯದಲ್ಲಿ ಒಬ್ಬರಿಗಿಂತ ಮೇಲಾಗಿದ್ದರೆ ಇನ್ನೊಬ್ಬರು ಅದೇ ವಿಷಯದಲ್ಲಿ ಅಥವಾ ಬೇರೆ ವಿಷಯದಲ್ಲಾದರೂ ನಮಗಿಂತಲೂ ಮೇಲಾಗಿರುವುದುಂಟು. ನಿಗರಿ ತದ ಜತೆಯಲ್ಲಿ ಒಳ್ಳೆಯ ತಿಳಿವಳಿಕೆಯ ಇದ್ದೇ ಇರು ತದೆ. ತನ್ನನ್ನು ವಿಾರಿಸಿದವರು ಅನೇಕರಿರಬಹುದು ಎಂಬ ಜ್ಞಾನವೇ ಇದಕ್ಕೆ ದೃಷ್ಟಾಂತವಾಗಿದೆ. ತಿಳಿಗೇಡಿಗಳಾದವರು ತಮಗಿಂತ ಕೀಳಾಗಿರುವ ವರನ್ನು ನೋಡಿ ತಾವೇ ಮೇಲೆಂದು ಹಿಗ್ಗಿ ಕೊಳ್ಳುತ್ತ ಅಹಂಕಾರಪಡು ವರು, ಮತ್ತು ತಮಗೆ ತಕ್ಕ ಕಾಲದಲ್ಲಿ ದೊರೆತಿರುವ ಆನುಕೂಲ್ಯ ಕಾಗಿ ಸಂತೋಷಪಡುವರೇ ಹೊರತು ಮುಂದೆ ಯಾವರೀತಿಯಲ್ಲಿ ನಡೆದರೆ ಇನ್ನೂ ಅಭಿವೃದ್ಧಿಗೆ ಬರಬಹುದು ಎಂಬ ಯೋಚನೆಯನ್ನೇ ಮಾಡುವು ದಿಲ್ಲ. ತಾವು ಮುಂದೆ ಇನ್ನೂ ತಿಳಿಯಬೇಕಾದ ದು ಎಷ್ಟೋ ಉಂಟು ಎಂದು ಭಾವಿಸಿ ನಡೆ ಯುವುದೇ ನಿಗರಿ ತ್ವವು. ಸರ್ ಐಸಕ್ ನ್ಯೂರ್ಟ ಎಂಬಾತನೂ ವರಕವಿಯಾದ ಕಾಳಿದಾಸನೂ ನಿಗರೀಗಳೆಂಬುದಕ್ಕೆ ಅವರ ಗ್ರಂಥಗಳಲ್ಲಿರತಕ್ಕೆ ಅಂಶಗಳೇ ಸಾಕ್ಷಿಯಾಗಿವೆ.-ಮೂಢನಾದ ನಾನು ಒಳ್ಳೆಯ ಕವಿಯೆಂಬ ಖ್ಯಾತಿಯನ್ನು ಪಡೆಯಬೇಕೆಂದು ಯತ್ನಿಸುತ್ತಿರು ವುದು, ಎತ್ತರವಾದವನಿಗೆ ಎಟಿಕಿಸತಕ್ಕ ಹಣ್ಣಿಗೆ ಒಬ್ಬ ಕುಳ್ಳನು ಆಸೆ ಪಟ್ಟು ಕೈಯೆತ್ತಿಕೊಂಡು ಅಪಹಾಸ್ಯಕ್ಕೆ ಗುರಿಯಾಗುವಂತಿದೆ ಎಂದು ಕಾಳಿದಾಸನು ರಘುವಂಶ ಗ್ರಂಥದಲ್ಲಿ ಹೇಳಿ ತನ್ನ ಎಗರಿತವನ್ನು ವ್ಯಕ್ತ ಪಡಿಸಿಕೊಂಡಿರುವನು. ಹಿಂದೆ ಫ್ರೆಂಚ್‌ ದಳಪತಿಯಾಗಿದ್ದ ನೆಪೋಲಿರ್ಯ ನಿಗೂ ಇಂಗ್ಲೀಷರಿಗೂ ಘೋರ ಯುದ್ಧವು ನಡೆದಾದ ಇಂಗ್ಲೀಷರ ನಾವಿಕ ಸೈನ್ಯಾಧಿಪತಿಯಾಗಿ ಅದ್ಭುತವಾದ ಸಾಹಸವನ್ನು ಮಾಡಿ ಕಡೆಗೆ ಗುಂಡಿನ ಏಟಿನಿಂದ ಸಾಯುವಾಗ--ನನ್ನ ಕರ್ತವ್ಯವನ್ನು ನಾನು ಮಾಡಿದ್ದೇನೆ ಎಂದು ನೆಲ್ಸನ್ನು ಹೇಳಿರುವುದೂ ಕೇವಲ ಶ್ಲಾನ್ಯವಾಗಿದೆ,