ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೫ ಕರ್ನಾಟಕ ಗ್ರಂಥಮಾಲೆ ತುಂಬಿದ ಕೊಡವು ತುಳುಕುವದಿಲ್ಲವೆಂಬಂತೆ ನಿಜವಾಗಿಯ ಯೋಗ್ಯರಾದವರು ನಿಗರಿಗಳಾಗಿಯೇ ಇರುವರು. ವಿಗರಿತ ದಲ್ಲಿ ನಿಜವಾ ದುದು ಕಪಟವಾದುದು ಎಂದು ಎರಡು ವಿಧಗಳುಂಟು, ನಿಷ್ಕಪಟವಾದುದ ರಲ್ಲಿ ಮೌನವೂ ಶಾಂತಿಯ ತುಂಬಿರುವುವು, ಕಪಟಯುಕ್ತವಾದ ನಿಗರಿ ತದಲ್ಲಿ ಜಂಬವೂ ಹರಟೆಯ ಹೆಚ್ಚು ಇತರರಲ್ಲಿರುವ ಗುಣವನ್ನು ಗ್ರಹಿ ಸುವುದು, ಸ್ವ ಸ್ವರೂಪ ಪರಿಜ್ಞಾನ, ಯೋಗ್ಯವಾದ ತಿಳವಳಿಕೆ, ಇಂಥವುಗಳ ಮೂಲಕ ನಿಗರಿತ್ವವನ್ನು ಪಡೆಯಬಹುದಲ್ಲದೆ ಅದನ್ನು ಸುಲಭವಾಗಿ ವೃದ್ಧಿ ಪಡಿಸಿಕೊಳ್ಳಲೂ ಬಹುದು. (15) ದಯೆಇತರರಿಗೆ ಒಳ್ಳೆಯದನ್ನು ಮಾಡಬೇಕೆಂಬುದೇ ದಯೆಯು, ಇದು ಕಾಠ್ಯಕ್ಕೆ ವಿರುದ್ಧವಾದದಮ್ಮ, ಯಾವಾಗಲೂ ದಯೆಯ ಜತೆಯಲ್ಲಿ ಪ್ರೀತಿ ಯಿದ್ದೇ ಇರುವುದು, ತಾನೇ ಹೆಚ್ಚು ಎಂಬದುರಭಿಮಾನ ಎಲ್ಲವೂ ತನ ಗೇ ಆಗಬೇಕೆಂಬ ಸ್ವಾರ್ಥಪರತೆ, ದ್ವೇಷ, ಹೊಟ್ಟೆಕಿಚ್ಚು ಇಂತಹ ದುರ್ಗುಣಗಳಿರುವವರಲ್ಲಿ ಈ ದಯಾಗುಣವು ಹುಟ್ಟುವುದು ಕಡಿಮೆ. ಆದುದರಿಂದ ದಯೆಯಿರುವ ಮನುಷ್ಯರಲ್ಲಿ ಪ್ರಾಯಶಃ ಈ ಕೆಟ್ಟ ಗುಣ ಗಳಿರುವುದಿಲ್ಲ, ಅನ್ಯಾಯದಿಂದ ಇತರರಿಗೆ ಏನಾದರೂ ಕೇಡಾಗುತ್ತಿರು ವುದನ್ನು ಕಣ್ಣಾರೆ ನೋಡಿದರೂ ಅದನ್ನು ತಪ್ಪಿಸುವುದಕ್ಕೆ ಯತ್ನಿಸದಿರು ವುದು ಕೂಡ ನಿರ್ದಯೆಯನಿಸುವುದು, ಇದು ಕಠಿಣಹೃದಯವನ್ನು ಸೂಚಿಸುವುದು, ತಾವು ಇತರರಿಗೆ ಕೆಡಕು ಮಾಡದಿದ್ದರೆ ದಯೆಯಿಂದ ನಡೆದಂತೆಯೇ ಆಗುವುದೆಂದು ಕೆಲವರು ಹೇಳುವರು. ಇದು ತಿಳಿಗೇಡಿ ತನದಿಂದ ಉಂಟಾದ ದುರಭಿಪತ್ರಯವು. ದಯೆಗೆ ಪ್ರೀತಿಯೇ ಮುಖ್ಯ ಕಾರಣವು, ಆದುದರಿಂದಲೇ ಬಾಲ್ಯ ದಿಂದಲೂ ತಾಯ್ತಂದೆಗಳು ಒಡಹುಟ್ಟಿದವರು ಇಂಥವರನ್ನು ಪ್ರೀತಿಸುತ್ತ ಬರುವುದರಿಂದ ಮುಂದಕ್ಕೆ ಎಲ್ಲರನ್ನೂ ಪ್ರೀತಿಸುವ ಅಭ್ಯಾಸವುಂಟಾಗು